ಚೆಕ್‌ಪೋಸ್ಟ್ ತಪ್ಪಿಸಿ ಜಿಲ್ಲೆಯೊಳಗೆ ಬಂದವರ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಜಿ. ಜಗದೀಶ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ ಪ್ರಜ್ಞಾವಂತ ನಾಗರೀಕರ ಸಹಕಾರದೊಂದಿಗೆ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವುದರಲ್ಲಿ ಆದಷ್ಟು ಮಟ್ಟಿಗೆ ಪ್ರಗತಿಯನ್ನು ಕಂಡಿದ್ದೇವೆ. ಆದರೆ ಕೆಲವು ಜನ ಅನಗತ್ಯವಾಗಿ ಹೊರಗಡೆ ತಿರುಗಾಡುವುದು, ಲಾಕ್ ಡೌನ್ ಮೂಲ ಉದ್ದೇಶವನ್ನು ಅರಿತುಕೊಳ್ಳದೇ ಅದನ್ನು ಧಿಕ್ಕರಿಸುವುದು ಕಂಡು ಬಂದಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಈಗಾಗಲೇ 413 ಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಳು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

Call us

Call us

ಗಡಿಗಳು ಬಂದ್:
ಉಡುಪಿ ಜಿಲ್ಲೆಯ ಗಡಿಗಳನ್ನು ಈಗಾಗಲೇ ಬಂದ್ ಮಾಡಿ, ಬೇರೆ ಜಿಲ್ಲೆಗಳನ್ನು ಸಂಪರ್ಕಿಸುವ ಚೆಕ್ ಪೋಸ್ಟ್ ಗಳಲ್ಲಿ ದಿನದ ೨೪ ಗಂಟೆ ಬಂದೋಬಸ್ತ್ ಮಾಡಲಾಗಿದೆ. ತೀರ ತುರ್ತು ವೈದ್ಯಕೀಯ ಅಗತ್ಯದ ವಾಹನ ಹಾಗೂ ಅಗತ್ಯ ವಸ್ತುಗಳ ಸಾಗಾಟ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ ಮುಂಬೈ, ಬೆಂಗಳೂರು, ಭಟ್ಕಳ, ಹೈದ್ರಾಬಾದ್, ಮೈಸೂರು ಮುಂತಾದ ಕಡೆಗಳಿಂದ ಈ ಚೆಕ್ ಪೋಸ್ಟ್ ಗಳನ್ನು ತಪ್ಪಿಸಿ, ಜನರು ಒಳ ಬರುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಅಂತಹವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡಬೇಕಾದ ಅವಶ್ಯಕತೆ ಇದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಗಡಿ ತಪ್ಪಿಸಿ ಬಂದವರ ಮಾಹಿತಿ ನೀಡಿ:
ಜಿಲ್ಲೆಯ ಸಾರ್ವಜನಿಕರು ಈ ತರಹ ಗಡಿ ತಪ್ಪಿಸಿ ಎಪ್ರಿಲ್ 1 ರ ನಂತರ ಜಿಲ್ಲೆಯೊಳಗೆ ಬಂದಿರುವರ ವಿವರವಾದ (ವಿಳಾಸ, ಮೊಬೈಲ್ ಸಂಖ್ಯೆ, ಬಂದ ದಿನಾಂಕ, ಎಲ್ಲಿಂದ ಬಂದಿದ್ದಾರೆ) ಮಾಹಿತಿಯನ್ನು , ಚಂದ್ರಶೇಖರ ನಾಯ್ಕ್, ಉಪ ನಿರ್ದೇಶಕರು ಕೃಷಿ ಇಲಾಖೆ,( 82779 32501), ಕೃಷ್ಣ ಹೆಬ್ಸೂರ್, ಕಾರ್ಯ ನಿರ್ವಾಹಕ ಇಂಜಿನಿಯರ್ , ಕೆ.ಆರ್.ಐ.ಡಿ.ಎಲ್ (94495 34792), ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವಜನ ಮತ್ತು ಕ್ರೀಡಾ ಇಲಾಖೆ(98454 32303) ಈ ಅಧಿಕಾರಿಗಳಿಗೆ ನೀಡಲು ಅಥವಾ ವಾಟ್ಸಾಪ್ ಮಾಡಲು ಕೋರಿದೆ.

ಗಡಿ ತಪ್ಪಿಸಿ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ನಲ್ಲಿ ಇಡಲು ಅUತ ಕ್ರಮ ಕೈಗೊಳ್ಳಲಾಗುವುದು, ಆದ್ದರಿಂದ ಸಾರ್ವಜನಿಕರು ಗಡಿ ತಪ್ಪಿಸಿ ಬಂದವರ ಮಾಹಿತಿ ನೀಡಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಗುಣಮುಖರಾಗಿದ್ದ 2ನೇ ಕೊರೋನಾ ಸೋಂಕಿತ ಬಿಡುಗಡೆ:
ಉಡುಪಿ ಜಿಲ್ಲೆಯಲ್ಲಿ ಒಟ್ಟು 3 ಕೊರೋನಾ ಸೋಂಕಿತ ಪ್ರಕರಣ ದಾಖಲಾಗಿದ್ದು, ಮೂರು ಪ್ರಕರಣದ ವ್ಯಕ್ತಿಗಳು ಗುಣಮುಖರಾಗಿದ್ದಾರೆ. ಮೊದಲನೇ ಸೋಂಕಿತ ವ್ಯಕ್ತಿ ಎರಡು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರೇ, 2ನೇ ವ್ಯಕ್ತಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

Leave a Reply

Your email address will not be published. Required fields are marked *

fourteen − 6 =