ಉಡುಪಿ ಜಿಲ್ಲೆ: ಕೃಷಿ ಚಟುವಟಿಕೆಗಳಿಗಾಗಿ ಅಗತ್ಯ ವಸ್ತುಗಳ ವಿತರಣೆಗೆ ಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ದೇಶದಾದ್ಯಂತ ವ್ಯಾಪಕವಾಗಿ ಕೋವಿಡ್-19 ಹರಡುತ್ತಿರುವ ಹಿನ್ನೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಘೋ?ಣೆಯಾಗಿರುವುದರಿಂದ, ರೈತರಿಗೆ ಕೃಷಿ ಪರಿಕರಗಳ ಲಭ್ಯತೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಪೀಡೆನಾಶಕಗಳು, ಕೃಷಿ ಕೊಯ್ಲು ಯಂತ್ರೋಪಕರಣಗಳ ಸಾಗಣೆಯಲ್ಲಿ ಕೆಳಗಿನಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Call us

Call us

  •  ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಗೊಬ್ಬರ, ಪೀಡೆನಾಶಕ, ಹಾಗೂ ಕೃಷಿ ಯಂತ್ರೋಪಕರಣಗಳು ಸೇರುವುದರಿಂದ, ಸದರಿ ಪರಿಕರಗಳ ವಿತರಣೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳನ್ನು ಹಾಗೂ ಸುರಕ್ಷಿತ ಕ್ರಮಗಳನ್ನು ತಪ್ಪದೆ ಪಾಲಿಸಲು ಸಂಬಂಧಿಸಿದ ವಿತರಕರಿಗೆ ಕಡ್ಡಾಯಗೊಳಿಸುವುದು.
  • ವಿತರಣಾ ಸಮಯದಲ್ಲಿ ಗೊಂದಲಗಳಿಗೆ ಎಡೆಮಾಡದೆ, ಕೃಷಿ ಪರಿಕರಗಳ ವಿತರಣೆಗಾಗಿ ಅನುಮತಿ ಚೀಟಿಯನ್ನು ಅಧಿಕೃತ ಮಾರಾಟ/ವಿತರಕರಿಗೆ ನೀಡಲು ಕ್ರಮ ಕೈಗೊಳ್ಳುವುದು.
  • ಪರಿಕರಗಳನ್ನು ಖರೀದಿಸುವ ವೇಳೆಯಲ್ಲಿ ರೈತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರಾಟ ಮಳಿಗೆಯ ಮುಂಭಾಗದಲ್ಲಿ ಗುರುತುಗಳನ್ನು ಮಾಡುವುದರೊಂದಿಗೆ, ರೈತರಿಗೆ ಸ್ಯಾನಿಟೈಜರ್ಸ್/ಸಾಬೂನು ಮತ್ತು ನೀರಿನ ವ್ಯವಸ್ಥೆ ಮಾಡಲು ಪರಿಕರ ಮಾರಾಟ/ವಿತರಕರಿಗೆ ಸೂಚನೆ ನೀಡುವುದು. ಆದ? ಮುಖಗವಸು ಹಾಕಿಕೊಳ್ಳಲು ಅರಿವು ಮೂಡಿಸಲು ಕ್ರಮ ವಹಿಸುವುದು.
  • ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳನ್ನು ಹಾಗೂ ಸುರಕ್ಷಿತ ಕ್ರಮಗಳ ನಿಯಮಗಳನ್ನು ಉಲ್ಲಂಘಿಸಿದ ಮಾರಾಟ/ವಿತರಕರ ಪರವಾನಗಿಯನ್ನು ಅಮಾನತು/ರದ್ದುಗೊಳಿಸಲು ಕ್ರಮ ವಹಿಸುವುದು. ಕುಂದಾಪ್ರ ಡಾಟ್ ಕಾಂ ಸುದ್ದಿ.
  •  ಯಾವುದೇ ಕಾರಣಕ್ಕಾಗಿ ಮೇಲಿನ ಅಗತ್ಯ ಸೇವೆಗಳ ಲಭ್ಯತೆಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಲು ವಾಹನ ಸೌಲಭ್ಯದ ಅಗತ್ಯವಿರುವುದರಿಂದ ವಾಹನ ಚಾಲಕರಿಗೆ ಅಗತ್ಯ ಸೇವೆಗಾಗಿ ಎಂದು ಚೀಟಿ ನೀಡಿ ಸೇವೆಯನ್ನು ಪಡೆಯುವುದು, ಸರ್ಕಾರಿ ವಾಹನ ಚಾಲಕರು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಚಾಲಕರ ಸೇವೆಯನ್ನು ಪಡೆಯಲು ಕ್ರಮ ವಹಿಸುವುದು.
  • ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಪೀಡೆನಾಶಕಗಳು, ಕೃಷಿ ಕೊಯ್ಲು ಯಂತ್ರೋಪಕರಣಗಳ ಸಾಗಣೆ ಮತ್ತು ಅಊSಅ ಗಳನ್ನು ಬೆಳ್ಳಿಗೆ ೭.೦೦ ರಿಂದ ೧೧.೦೦ ಘಂಟೆಯವರೆಗೆ ಸಮಯ ನಿಗಧಿಪಡಿಸಲಾಗಿದ್ದು ಅದೇ ಸಮಯದಲ್ಲಿ ಮಾರುವುದು ಮತ್ತು ಖರೀದಿಸುವುದು.

ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳ ವಿತರಣೆಯ ಸಮಯದಲ್ಲಿ ಈ ಮೇಲೆ ತಿಳಿಸಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

 

Call us

Call us

Leave a Reply

Your email address will not be published. Required fields are marked *

twenty − sixteen =