ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯದ ಮುಖ್ಯಮಂತ್ರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದರೆ ಲಾಠಿಚಾರ್ಜ್ ಅಷ್ಟೇ ಅಲ್ಲ ಒಳಗಡೆ ಇಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅವರು ಕುಂದಾಪುರಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕುಂದಾಪುರ ಎಸಿ, ಎಎಸ್ಪಿ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಆದಾಗ್ಯ ಕೆಲವರು ಅನವಶ್ಯಕವಾಗಿ ಹೊರಕ್ಕೆ ಬರುತ್ತಿದ್ದಾರೆ. ತುರ್ತು ಅಗತ್ಯವಿದ್ದರೆ ಮಾತ್ರ ಬನ್ನಿ. ಅದನ್ನು ಬಿಟ್ಟು ದಿನ ಮೀನು, ತರಕಾರಿ ಅಂತೆಲ್ಲಾ ಬಾರದೆ, ಒಂದು ವಾರಕ್ಕಾಗುವಷ್ಟು ಒಂದೇ ಭಾರಿ ತೆಗೆದುಕೊಂಡು ಹೋಗಿ ಎಂದಿರುವ ಅವರು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ. ಇದನ್ನ ಉಲ್ಲಂಗಿಸಿದರೆ ಅಂಗಡಿ ಮುಚ್ಚಿಸುತ್ತೇವೆ. ದಿನಸಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ವ್ಯಾಪಾರ ಮಾಡಿದರೆ, ಅಂಗಡಿ ಪರವಾನಿಗೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ದಿನಬಳಕೆ ವಸ್ತುಗಳ ಅಭಾವ ಆಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರು ಎಲ್ಲಾ ಕಡೆಗೂ ಮಾಸ್ಕ ಅಗತ್ಯ ಇಲ್ಲ. ಎಲ್ಲಿ ಯಾರಿಗಾದರೂ ಜ್ವರ ಬಂದರೆ ಕೆಮ್ಮಿದರೆ ಅಂತವರ ಸಂಪರ್ಕ ಇರುವಂತ ಸಂದರ್ಭ, ಜನದಟ್ಟಣೆ ಇರುವ ಕಡೆ ಮಾಸ್ಕ ಅಗತ್ಯ ಇದೆ. ಹೊರಗಡೆಯಿಂದ ಬಂದವರು ಮನೆಯಲ್ಲಿ ಉಳಿಯದೆ ಸುತ್ತಾಟಕ್ಕೆ ಇಳದಿರೆ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಈ ಸಂದರ್ಭ ಅವರು ಮೆಡಿಕಲ್ ಮುಂತಾಡೆದೆ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದರು. ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಜೊತೆಗಿದ್ದರು.