ಬಾಲಕನ ಚಿಕಿತ್ಸಾ ವೆಚ್ಚಕ್ಕೆ ಜಿ.ಪಂ ಸದಸ್ಯೆ ಗೌರಿ ದೇವಾಡಿಗ ಮತ್ತು ಸಂಗಡಿಗರ ನೆರವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಜೂ.8: ಇತ್ತಿಚಿಗೆ ಉಪ್ಪುಂದದಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಉಪ್ಪುಂದ ಕಳಿಮನೆ ಜಾನಕಿ ಮಂಜುನಾಥ ದೇವಾಡಿಗರ ಪುತ್ರ ನಿತೀಶ್ (10 ವರ್ಷ) ಮಣಿಪಾಲದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತುರ್ತು ಚಿಕಿತ್ಸೆಯ ಅನಿವಾರ್ಯತೆ ಎದುರಾಗಿದೆ.

Call us

Call us

Visit Now

ಇದನ್ನು ಮನಗಂಡ ಕಂಬದಕೊಣೆ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಹಾಗೂ ನಾಗರತ್ನ ಪೂಜಾರಿ, ಸೀತು ದೇವಾಡಿಗ, ಮರ್ಲಿ ದೇವಾಡಿಗ, ಗುಲಾಬಿ ದೇವಾಡಿಗ ಮೊದಲಾದವರು ಇಂದು ರೂ. 55,000 ಮೊತ್ತವನ್ನು ಒಟ್ಟುಗೂಡಿಸಿ ಕುಟುಂಬಿಕರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Click here

Call us

Call us

ಅಪಘಾತದಲ್ಲಿ ನಿತೀಶ್‌ನ ಕಾಲು ಮೂಳೆ ಮುರಿದು, ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿ ಮತ್ತು ಹಲ್ಲಿನ ಸೆಟ್ ಕಳಚಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು, ಚಿಕಿತ್ಸೆಗೆ ರೂ. 3,50,000 ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ಇವರಿಗೆ ದಿಕ್ಕೆ ತೋಚದಂತಾಗಿ ದಾನಿಗಳ ನೆರವನ್ನು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಗೌರಿ ದೇವಾಡಿಗ ಅವರು ಸ್ವತಃ ಹಣ ಸಂಗ್ರಹಿಸಿ ಕುಟುಂಬಿಕರಿಗೆ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಚಿಕಿತ್ಸಾ ವೆಚ್ಚಕ್ಕಾಗಿ ಇನ್ನೂ ದೊಡ್ಡ ಮೊತ್ತದ ಅಗತ್ಯವಿದ್ದು, ಸಹಾಯ ಹಸ್ತ ನೀಡುವ ದಾನಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದು ಹಣ ವರ್ಗಾಯಿಸಬಹುದಾಗಿದೆ.

ಕರ್ಣಾಟಕ ಬ್ಯಾಂಕ್ ಉಪ್ಪುಂದ ಶಾಖೆ
ಖಾತೆದಾರರ ಹೆಸರು: ನಿತೀಶ್
ಖಾತೆ ಸಂಖ್ಯೆ: 8012500102356001
ಐಎಫ್‌ಎಸ್‌ಸಿ ಕೋಡ್: 0000801

ದೂರವಾಣಿ ಸಂಖ್ಯೆ: 9900772925 , 9742019893

 

Leave a Reply

Your email address will not be published. Required fields are marked *

4 + 19 =