ಮಾತನಾಡುವ ಮಹಾಲಿಂಗ ಉಳ್ತೂರು ಶ್ರೀ ಮಹಾಲಿಂಗೇಶ್ವರ

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಮಾತನಾಡುವ ಮಹಾಲಿಂಗ ಎಂದೇ ಪ್ರಖ್ಯಾತಿ ಪಡೆದಿರುವ ಕುಂದಾಪುರ ತಾಲೂಕಿನ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧಿದೇವ ಶ್ರೀ ಮಹಾಲಿಂಗೇಶ್ವರ ನಿಷ್ಠೆಯಿಂದ ನಂಬಿದ ಭಕ್ತಾದಿಗಳ ಕನಸು ನನಸು ಮಾಡಿದ ಸಾಕಾರ ಮೂರ್ತಿ. ನಂಬಿದ ಭಕ್ತರ ಬಾಳಿನ ಬದುಕಿನಲ್ಲಿ ಸಂತೃಪ್ತಿಯ ನೆಲೆಯನ್ನು ನೀಡಿದ ಚೈತನ್ಯ ಸ್ವರೂಪಿ.

Call us

Call us

ತೆಕ್ಕಟ್ಟೆಯಿಂದ 2.5ಕಿ.ಮೀ ದೂರದಲ್ಲಿರುವ ಪ್ರಾಚೀನ ಶಿವಾಲಯವು ಸುಮಾರು 11-12ನೇ ಶತಮಾನದ್ದು ಎಂದು ಅಂದಾಜಿಸಲಾಗಿದೆ. ವಿಜಯನಗರ ಅರಸರ ಕಾಲದಲ್ಲಿ ದೇವಾಲಯವು ಉಚ್ಛ್ರಾಯ ಸ್ಥಿತಿಯಲ್ಲಿದ್ದುದರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ೧೪೨೮ರಲ್ಲಿ ಬಾರಕೂರಿನ ರಾಜರುಗಳಿಂದ ದೇವಳಕ್ಕೆ ದಾನ, ಉಂಬಳಿ ನೀಡಿರುವ ಬಗ್ಗೆ ಶಾಸನಗಳಿವೆ. ಪುರಣ ಪುರಷರಾದ ಶ್ರೀ ಶೃಂಗೇರಿ ಜಗದ್ಗುರು ಪರಮಪೂಜ್ಯ ಸ್ವಾಮೀಜಿಯವರಿಂದ ಪುನಃ ಪ್ರತಿಷ್ಠೆಗೊಂಡಿರುವ ಐತಿಹ್ಯವಿದೆ ಈ ದೇವಾಲಯಕ್ಕಿದೆ.
ದೇವಸ್ಥಾನದಲ್ಲಿ ಆಗಮೋಕ್ತ ವಿಧಿವಿಧಾನಗಳಿಂದ ನಿತ್ಯಪೂಜೆ ಜರುಗುತ್ತಿದೆ. ಉಳ್ತೂರು ಸೀಮೆಯ ಆರಾಧ್ಯ ದೇವರಾಗಿರುವ ಶ್ರೀ ಮಹಾಲಿಂಗೇಶ್ವರನನ್ನು ವೋಳತ್ತೂರು ಕೇರಿಯ ಮಹಾದೇವ, ಮತಾನಾಡುವ ಮಹಾಲಿಂಗ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿರುವುದು ಕ್ಷೇತ್ರದ ಮಹಿಮೆಯನ್ನು ಸಾರಿ ಹೇಳುತ್ತದೆ. ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಾಲಯ ಕ್ರಮೇಣ ಪ್ರಾಕೃತಿಕ ಸನ್ನಿವೇಶಗಳಿಗೆ ಮಯ್ಯೊಡ್ಡಿ ಶಿಥಿಲಗೊಂಡಿತ್ತು. ಇತ್ತಿಚಿಗೆ ಮತ್ತೆ ಊರ ಪ್ರಮುಖರ ನೇತೃತ್ವದಲ್ಲಿ ದೇವಸ್ಥಾನದ ಜೀಣೋದ್ಧಾರ ಕಾರ್ಯ ನಡೆದಿದ್ದು ಪ್ರಥಮ ಹಂತವಾಗಿ ಹೊರ ಹೆಬ್ಬಾಗಿಲು ಮತ್ತು ವಸಂತ ಮಂಟಪ, ರಥದ ಮನೆ ಮತ್ತು ನೂತನ ನಂದಿ ವಿಗ್ರಹ ಬಳಿಕ ದೇವಸ್ಥಾನದ ಗರ್ಭಗುಡಿ, ತೀರ್ಥಮಂಟಪ, ಒಳಹೆಬ್ಬಾಗಿಲು ಮತ್ತು ಒಳಸುತ್ತಿನ ಕಲ್ಲು ಹಾಸು ಕಾರ್ಯ ಪೂರ್ಣಗೊಂಡಿದೆ.

ನೂತನವಾಗಿ ಶಿಲಾಮಯಗೊಂಡ ಗರ್ಭಗುಡಿ, ತೀರ್ಥಮಂಟಪ ಸಮರ್ಪಣಾ ಕಾರ್ಯ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯವು ಫೆಬ್ರವರಿ 7ರಿಂದ ಮೊದಲ್ಗೊಂಡು ಫೆಬ್ರವರಿ 9ರ ತನಕ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಬಾರಕೂರು ಹೃಷಿಕೇಶ ಬಾಯರಿಯವರ ಮಾರ್ಗದರ್ಶನದಲ್ಲಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ಸೀತಾರಾಮ ಅಡಿಗ ಉಳ್ತೂರು ಇವರ ಮುಂದಾಳತ್ವದಲ್ಲಿ ಜರುಗಲಿದೆ. ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಮಂಬೈ ವಾಸಿ ಉಳ್ತೂರು ಶ್ರೀ ಮೋಹನದಾಸ ಶೆಟ್ಟಿ ಕಟ್ಟೆಮನೆ ಅವರ ನೇತೃತ್ವ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಹಲ್ತೂರು ಮೇಲ್ಮನೆ ಅವರ ಮಾರ್ಗದರ್ಶನದಲ್ಲಿ ಊರ ನಾಗರೀಕರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಿದೆ.

Call us

Call us

 

Leave a Reply

Your email address will not be published. Required fields are marked *

nine + eleven =