ವಿದೇಶಕ್ಕೆ ತೆರಳುವ ಕುಂದಾಪುರ & ಬೈಂದೂರು ತಾಲೂಕಿನವರು ಕೋವಿಡ್ ಲಸಿಕೆಗೆ ಅನೆಕ್ಸರ್-3 ಪಡೆಯುವ ಬಗ್ಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವ್ಯಾಸಂಗ ಹಾಗೂ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ 18 ರಿಂದ 44 ವರ್ಷ ವಯೋಮಾನದವರು ಲಸಿಕೆ ಪಡೆಯಲು ಅನೆಕ್ಸರ್-3 ಪಡೆಯುವುದು ಅಗತ್ಯವಾಗಿದ್ದು, ಅದಕ್ಕಾಗಿ ಉಡುಪಿಗೆ ತೆರಳುವುದನ್ನು ತಪ್ಪಿಸಿ ಕುಂದಾಪುರ ಹಾಗೂ ಬೈಂದೂರಿನಲ್ಲಿಯೇ ಲಭ್ಯವಾಗುವಂತೆ ಮಾಡಲಾಗಿದೆ.

ಅನೆಕ್ಸರ್-3 ಪಡೆಯಲಿಚ್ಚಿಸುವವರು ಜೂನ್.14ರ ಸೋಮವಾರ ಬೆಳಿಗ್ಗೆ 10ರಿಂದ 1ರ ತನಕ ಬೈಂದೂರು ತಾಲೂಕು ಕಛೇರಿಯಲ್ಲಿ ಹಾಗೂ ಮಧ್ಯಾಹ್ನ 2 ರಿಂದ 5 ತನಕ ಕುಂದಾಪುರ ತಾಲೂಕು ಕಛೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆಯಬಹುದಾಗಿದೆ.

ವಿದೇಶಕ್ಕೆ ತೆರಳಲು ಲಸಿಕೆ ಪಡೆಯಲಿಚ್ಛಿಸುವವರು ಆಧಾರ್ ಕಾರ್ಡ್, ಪಾಸ್ಪೋರ್ಟ್, ನೌಕರನಾಗಿದ್ದರೆ ಕಂಪೆನಿಯ ಆಫರ್ ಲೆಟರ್, ವೀಸಾ, ವ್ಯಾಸಂಗಕ್ಕೆ ತೆರಳುತ್ತಿದ್ದರೆ ವಿದ್ಯಾಸಂಸ್ಥೆಯ ಪತ್ರ ಇವುಗಳ ಮೂಲಪ್ರತಿ ಹಾಗೂ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಯೊಂದಿಗೆ ಬೈಂದೂರು ಹಾಗೂ ಕುಂದಾಪುರ ತಾಲೂಕು ಕಛೇರಿಯಲ್ಲಿ ನಿಗದಿತ ದಿನಾಂಕದಂದು ಸಲ್ಲಿಸಿ ಅನೆಕ್ಸರ್-3 ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

10 − 9 =