ಕಡಲಮಕ್ಕಳು ರೋಡಿಗಿಳಿಯುವ ಸಂದರ್ಭ ತರಬೇಡಿ. ಸರಕಾರ ಸ್ಪಂದಿಸದಿದ್ದರೇ ಉಗ್ರ ಹೋರಾಟ – ಪ್ರತಿಭಟನೆಯಲ್ಲಿ ಉಪ್ಪುಂದ ಮೀನುಗಾರರ ಎಚ್ಚರಿಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
,.05: ಪ್ರಾಕೃತಿಕ ವಿಕೋಪದಿಂದಾಗಿ ಮೀನುಗಾರರರು ಸಾಕಷ್ಟು ನಷ್ಟ ಅನುಭವಿಸಿದ್ದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ಮೀನುಗಾರರ ಸಂಕಷ್ಟ ತಿಳಿಯುವ ಕೆಲಸ ಮಾಡಿಲ್ಲ. ಸರಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತಿಭಾರಿಯೂ ಮೀನುಗಾರರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ನಮ್ಮ ಬದುಕಿಗೆ ಅಷ್ಟೂ ಕೂಡ ಕಿಮ್ಮತ್ತಿಲ್ಲವೇ ಎಂದು ಮೀನುಗಾರ ಮುಖಂಡ ಎಸ್. ಮದನಕುಮಾರ್ ಉಪ್ಪುಂದ ಪ್ರಶ್ನಿಸಿದ್ದಾರೆ.

Call us

Call us

ಅಗಸ್ಟ್ 2ರಂದು ಶಿರೂರು ಭಾಗದಲ್ಲಿ ನಡೆದ ಜಲಸ್ಪೋಟದಂತಹ ಪ್ರಾಕೃತಿಕ ವಿಕೋಪದಿಂದಾಗಿ ಮೀನುಗಾರರು ಸಾಕಷ್ಟು ನಷ್ಟ ಅನುಭವಿದ ಸಂದರ್ಭ ಅವರಿಗೆ ಸ್ಪಂದಿಸದೇ ಮೀನುಗಾರ ಸಮುದಾಯವನ್ನು ಕಡೆಗಣಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರಕಾರದ ನಡೆಯನ್ನು ಖಂಡಿಸಿ ಉಪ್ಪುಂದ ಭಾಗದ ಮೀನುಗಾರರು ಶುಕ್ರವಾರ ಬೈಂದೂರು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Call us

Call us

ಕಡಲ ಮಕ್ಕಳನ್ನು ರೋಡಿಗೆ ಬರಲು ಬಿಡಬೇಡಿ. ನಾವು ರೋಡಿಗಿಳಿದಾಗ ಏನೇನು ಆಗಿದೆ ಎಂದು ಚರಿತ್ರೆಯನ್ನು ತಿರುಗಿ ನೋಡಿ. ನಮ್ಮ ಹಕ್ಕು ಹಾಗೂ ಬೇಡಿಕೆಗಳಿಗಾಗಿ ಪದೇ ರೋಡಿಗೆ ಬಂದು ನಿಲ್ಲುವ ಸನ್ನಿವೇಶ ಸೃಷ್ಠಿಯಾಗೋದು ಬೇಡ. ಭೋರ್ಗೆರವ ಸಮುದ್ರ, ಆಳೆತ್ತರದ ಅಲೆಗಳ ನಡುವೆ ದಿನವೂ ಸೆಣಸಾಡುವ ಮೀನುಗಾರ ಕಡಲಿಗೆ ಹೆದರದಿರುವಾಗ ಬೇರೆ ಯಾರಿಗೆ ಹೆದರುತ್ತಾನೆ ಎಂದು ಅರ್ಥಮಾಡಿಕೊಳ್ಳಬೇಕು. ಮೀನುಗಾರರು ಅಸಾಹಯಕರಾಗಿ ಅಂಗಲಾಚುತ್ತಿದ್ದಾರೆ ಎಂದುಕೊಳ್ಳುವುದು ಬೇಡ ಎಂದು ಎಚ್ಚರಿಸಿದರು.

ಮೀನುಗಾರರು ವೈಯಕ್ತಿಯವಾಗಿ ಬೇರೆ ಬೇರೆ ಪಕ್ಷ, ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮೀನುಗಾರರ ಸಮಸ್ಯೆ ಎಂದು ಬಂದಾಗ ಎಲ್ಲವನ್ನೂ ಮೀರಿ ಒಗ್ಗಟ್ಟಾಗುತ್ತೇವೆ. ನಮ್ಮ ಸಹನೆಯನ್ನು ಪರೀಕ್ಷಿಸುವ ಕೆಲಸ ಯಾರೋಬ್ಬರೂ ಮಾಡುವುದು ಬೇಡ. ಜಿಲ್ಲೆಯಲ್ಲಿ ಮೀನುಗಾರರು ಅಷ್ಟೇ ಅಲ್ಲದೇ ಮೀನುಗಾರೇತರರು ಸಾವಿರಾರು ಸಂಖ್ಯೆಯಲ್ಲಿ ಇದೇ ಉದ್ಯಮವನ್ನು ಅವಲಂಬಿಸಿಕೊಂಡಿದ್ದಾರೆ. ಶಿರೂರು ಭಾಗದಲ್ಲಿ ನಡೆದ ನಷ್ಟಕ್ಕೆ ಸರಿಯಾದ ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದರೇ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಶಿರೂರು ಘಟನೆ ಮೀನುಗಾರರಿಗೆ ಕರಾಳ ದಿನ:
ಶಿರೂರಿನಲ್ಲಿ ಜಲಸ್ಫೋಟದಿಂದಾಗಿ ಮೀನುಗಾರ 40ಕ್ಕೂ ಮಿಕ್ಕಿ ದೋಣಿ ಹಾಗೂ ಮೀನುಗಾರಿಕಾ ಸೊತ್ತುಗಳು ಹಾನಿಯಾಗಿದ್ದು 3 ಕೋಟಿಗೂ ಅಧಿಕ ನಷ್ಟವಾಗಿದೆ. ಇಷ್ಟು ದೊಡ್ಡ ಅವಘಡ ನಡೆದರೂ ಮೀನುಗಾರಿಕೆಯ ಸಹಾಯಕ ನಿರ್ದೇಶಕರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಶಾಸಕರು, ಸಂಸದರು, ಸಚಿವರು ಯಾರೂ ಕೂಡ ಭೇಟಿ ನೀಡಿ ಸಾಂತ್ವಾನದ ಮಾತುಗಳನ್ನೂ ಹೇಳಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

ಮೀನುಗಾರ ಮುಖಂಡರಾದ ವೆಂಕಟರಣ ಖಾರ್ವಿ ಮಾತನಾಡಿ ಮೀನುಗಾರರ ಸಮಸ್ಯೆ ಅರಣ್ಯರೋಧನವಾಗುತ್ತಿದೆ. ಪ್ರತಿಭಾರಿಯೂ ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ ಸೇರಿ ಭರವಸೆ ನೀಡುತ್ತಿದ್ದಾರೆ ಹೊರತು ಸಮಸ್ಯೆ ಪರಿಹಾರದ ಬಗ್ಗೆ ಯೋಚಿಸುತ್ತಿಲ್ಲ. ಭಾರಿ ನಷ್ಟ ಉಂಟಾದ ಸಂದರ್ಭದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ನೂರಾರು ಕಾನೂನು ತೊಡಕುಗಳನ್ನು ತಂದಿಟ್ಟು ಪರಿಹಾರ ಸಿಗದಂತೆ ಮಾಡಿದ ಸಂದರ್ಭವೂ ಇದೆ. ಶಿರೂರು ಘಟನೆಯ ಸಂದರ್ಭದಲ್ಲಿ ಯಾರೋಬ್ಬರೂ ಸ್ಪಂದಿಸಿಲ್ಲ. ಪಕ್ಕದ ಭಟ್ಕಳಕ್ಕೆ ಬರುವ ಮುಖ್ಯಮಂತ್ರಿಗಳು, ಶಿರೂರು ಭಾಗದಲ್ಲಿ ಆದ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ. ಮೀನುಗಾರರನ್ನು ಇಷ್ಟು ಹಗುರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಂದೂರು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ ಕಂದಾಯ ಇಲಾಖೆಯಿಂದ ಸಾಧ್ಯವಿರುವಷ್ಟು ನಷ್ಟ ಭರಿಸಲು ಕ್ರಮಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮೀನುಗಾರ ಮುಖಂಡರಾದ ಜಗನ್ನಾಥ, ಕುಮಾರ ಖಾರ್ವಿ, ನಾಗರಾಜ ಖಾರ್ವಿ, ಕೆ. ನಾಗೇಶ್ ಖಾರ್ವಿ, ಬಿ. ದಾಮೋದರ ಖಾರ್ವಿ, ಬಿ. ಭಾಸ್ಕರ ಖಾರ್ವಿ, ತಿಮ್ಮಪ್ಪ ಖಾರ್ವಿ, ಡಿ. ರಾಮಚಂದ್ರ ಖಾರ್ವಿ, ನಾಗೇಶ ಖಾರ್ವಿ ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಮೀನುಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

2 × 4 =