ಯುವ ಮೆರಿಡಿಯನ್‌ಗೆ ಪ್ರಶಸ್ತಿಯ ಗರಿ: ಹಾಸ್ಪಿಟಾಲಿಟಿಗಾಗಿ ‘ಬೆಸ್ಟ್ ರೆಸಾರ್ಟ್’ ಪ್ರಶಸ್ತಿ, ಆಹಾರ ಗುಣಮಟ್ಟಕ್ಕಾಗಿ ‘ಐಎಸ್‌ಓ’ ಸರ್ಟಿಫಿಕೇಟ್

Call us

ಸಾಧನೆಯ ಹಾದಿಯಲ್ಲಿ ಯುವ ಉದ್ಯಮಿಗಳು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೋಟೆಲ್ ಹಾಗೂ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಗುಣಮಟ್ಟ ಸೇವೆ ಹಾಗೂ ಉತ್ಕೃಷ್ಟ ಸೌಲಭ್ಯವನ್ನು ಪರಿಗಣಿಸಿ ಪ್ರಶಸ್ತಿಗಳು ಅರಸಿ ಬಂದಿವೆ. ದೆಹಲಿಯ ಡಿಡಿಪಿ ಸಂಸ್ಥೆಯು ಹೋಟೆಲ್ ವಿಭಾಗದಲ್ಲಿ ಪ್ರತಿ ವರ್ಷ ನೀಡುತ್ತಿರುವ ದಕ್ಷಿಣ ಹಾಗೂ ಪಶ್ಚಿಮ ಭಾರತದ ಪ್ರತಿಷ್ಟಿತ ‘ಇಂಡಿಯಾ ಹಾಸ್ಪಿಟಾಲಿಟಿ ಅವಾರ್ಡ್-2016ರ ಬೆಸ್ಟ್ ರೆಸಾರ್ಟ್ & ಸ್ಪಾ’ ಪ್ರಶಸ್ತಿಗೆ ರಾಜ್ಯದ ಪ್ರತಿಷ್ಟಿತ ಸ್ಟಾರ್ ಹೋಟೆಲ್‌ಗಳಲ್ಲಿ ಒಂದಾದ ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್ & ಸ್ಪಾ ಆಯ್ಕೆಗೊಂಡಿದೆ.

ಇದರ ಜೊತೆ ಜೊತೆಗೆ ಯುವ ಮೆರಿಡಿಯನ್ ಸಂಸ್ಥೆಯು ಅಂತಾರಾಷ್ಟ್ರೀಯ ಆಹಾರ ಗುಣಮಟ್ಟ ಹೊಂದಿರುವುದಕ್ಕಾಗಿ ಐಎಸ್‌ಓ 22000 ಪ್ರಮಾಣ ಪತ್ರ ಲಭಿಸಿದೆ. ಕಳೆದ ಮೂರೂವರೆ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಯುವ ಮೆರಿಡಿಯನ್‌ಗೆ ಕಳೆದ ಒಂದೂವರೆ ವರ್ಷಗಳಿಂದ ನಿರಂತರ ಭೇಟಿ ನೀಡಿ ಪರಿಶೀಲಿಸಿದ ಐಎಸ್‌ಓ ತಂಡ, ಈ ಅಂತರ್ರಾಷ್ಟ್ರೀಯ ಪ್ರಮಾಣ ಪತ್ರ ಐಎಸ್‌ಓ 22000 : 2005 ನೀಡಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಕಳೆದ ವರ್ಷ ಡಿಡಿಪಿ ಸಂಸ್ಥೆಯು ದಕ್ಷಿಣ ಹಾಗೂ ಪಶ್ಚಿಮ ಭಾರತದ ಪ್ರತಿಷ್ಟಿತ ಪಂಚತಾರಾ ಹೋಟೆಲ್‌ಗಳೂ ಸೇರಿದಂತೆ ಹೋಟೆಲ್ ಉದ್ಯಮದ ವಿವಿಧ ವಿಭಾಗಗಳಲ್ಲಿ ಮುಂಚೂಣಿಯಲ್ಲಿರುವ ನೂರಕ್ಕೂ ಹೆಚ್ಚು ಸಂಸ್ಥೆ ಹಾಗೂ ವ್ಯಕ್ತಿಗಳನ್ನು ಗುರುತಿಸಿತ್ತು. ನಂತರ ಈ ಬಗ್ಗೆ ನಾಮನಿರ್ದೇಶನಗೊಂಡ ಸಂಸ್ಥೆ-ಹೊಟೇಲ್, ರೆಸಾರ್ಟ್‌ಗಳನ್ನು ಸರ್ವೆ ಮಾಡಿತ್ತು. ಬಳಿಕ ನಂತರ ಆನ್‌ಲೈನ್ ಸರ್ವೆ ಹಾಗೂ ಗ್ರಾಹಕರಿಂದ ಅಂತರ್ಜಾಲದ ಮೂಲಕ ವೋಟಿಂಗ್ ನಡೆಸಿತ್ತು. ಎಲ್ಲಾ ವಿಭಾಗದಲ್ಲಿಯೂ ಹೆಚ್ಚು ಗುಣಮಟ್ಟವನ್ನು ಕಾಯ್ದುಕೊಂಡ ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಿತ್ತು. ಇತ್ತಿಚಿಗೆ ಪೂನಾದಲ್ಲಿ ನಡೆದ ಸಮಾರಂಭದಲ್ಲಿ ಯುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಯುವ ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ 2016ರ ಸಾಲಿನ ಅತ್ಯುತ್ತಮ ರೆಸಾರ್ಟ್ ಪ್ರಶಸ್ತಿ ಹಾಗೂ ಯುವ ಮೆರೀಡಿಯನ್ ಆಹಾರ ಗುಣಮಟ್ಟಕ್ಕಾಗಿ ಐಎಸ್‌ಐ ಸರ್ಟಿಫಿಕೇಟ್ ಪಡೆದುಕೊಂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ, ಸಂಸ್ಥೆಯು ಉತ್ಕೃಷ್ಟ ಸೇವೆ ನೀಡಿರುವುದನ್ನು ಪ್ರೀತಿಯಿಂದ ಸ್ವೀಹರಿಸಿದ ಗ್ರಾಹಕರು, ಪ್ರಚುರಪಡಿಸಿದ ಮಾಧ್ಯಮಗಳ ಸಹಕಾರಗಳು ಪ್ರಶಸ್ತಿ ಲಭಿಸಲು ಕಾರಣವಾಗಿದೆ. ಜೊತೆಗೆ ಇಲಾಖೆ ಮತ್ತು ಸಾರ್ವಜನಿಕರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ ಎಂದಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

sixteen + three =