ಯುವ ಮೆರಿಡಿಯನ್ ಗ್ರೂಪ್ಸ್‌ಗೆ ‘ಟೈಮ್ಸ್ ಬಿಸಿನೆಸ್ ಅವಾರ್ಡ್ 2021’

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರವಾಸೋದ್ಯಮ ಮತ್ತು ಆಹಾರೋದ್ಯಮದಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಕೋಟೇಶ್ವರದ ಯುವ ಮೆರಿಡಿಯನ್ ಗ್ರೂಪ್ಸ್ 2021ನೇ ಸಾಲಿನ ಟೈಮ್ಸ್ ಬಿಸಿನೆಸ್ ಅವಾರ್ಡ್ 2021ಕ್ಕೆ ಪಾತ್ರವಾಗಿದೆ.

Click Here

Call us

Call us

ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್‍ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಯುವ ಮೆರೀಡಿಯನ್ ಪಾಲುದಾರರರಾದ ಬೈಲೂರು ಉದಯಕುಮಾರ್ ಶೆಟ್ಟಿ ಮತ್ತು ವಿನಯ ಕುಮಾರ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಂತರಾಷ್ಟ್ರೀಯ ಗುಣಮಟ್ಟದ ವೈಭವದ ಹಾಗೂ ಆರಾಮದಾಯಕ ಹೋಟೆಲ್ ಕೆಟಗೆರಿಯಲ್ಲಿ ಯುವ ಮೆರಿಡಿಯನ್ ಗ್ರೂಪ್ಸ್‌ಗೆ ಪ್ರಶಸ್ತಿ ಲಭ್ಯವಾಗಿದೆ.

Click here

Click Here

Call us

Visit Now

ಯುವ ಮೆರಿಡಿಯನ್ ಕನ್ವೆನ್ಯನ್ ಹಾಲ್, ಯುವ ಮೆರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾ ಮೂಲಕ ಗಮನ ಸೆಳೆದಿರುವ ಸಂಸ್ಥೆಯು 2017-18ರಲ್ಲಿ ಕನ್ವೆನ್ಯನ್‍ಗಾಗಿ ಹಾಗೂ 2018-19ರಲ್ಲಿ ಪ್ರವಾಸೋದ್ಯಮ ಆತಿಥ್ಯಕ್ಕಾಗಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿತ್ತು. ಇದೀಗ ಟೈಮ್ಸ್ ಪ್ರಶಸ್ತಿಗೆ ಪಾತ್ರವಾಗಿದೆ.

ಕೋಟೇಶ್ವರ-ಹಾಲಾಡಿ ರಸ್ತೆಯ ಪಾಶ್ರ್ವದಲ್ಲಿ 2012ರಲ್ಲಿ ಸುಸಜ್ಜಿತ ವ್ಯವಸ್ಥೆಗಳುಳ್ಳ ಯುವ ಮೆರಿಡಿಯನ್ ಆರಂಭಗೊಂಡಿತ್ತು. 1,200 ಮಂದಿ ಕುಳಿತುಕೊಳ್ಳಬಹುದಾದ ಸಭಾಭವನ, 500 ಆಸನ ಸಾಮಥ್ರ್ಯದ ಮಿನಿಹಾಲ್, 3,000 ಮಂದಿ ಏಕಕಾಲದಲ್ಲಿ ಕುಳಿತು ವೀಕ್ಷಿಸಬಹುದಾದ ಒಪೇರಾ ಪಾರ್ಕ್ ಹಾಗೂ ಸಸ್ಯಹಾರ ಮತ್ತು ಮಾಂಸಹಾರದ ಹೊಟೇಲ್, ಲಾಡ್ಜಿಂಗ್, ರೆಸ್ಟೊರೆಂಟ್ ವ್ಯವಸ್ಥೆಗಳನ್ನು ಹೊಂದಿದೆ. ಯುವ ಮೆರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾ ಪ್ರವಾಸಿಗರ ಗಮನ ಸೆಳೆದಿದೆ. ಹೆಲಿ ಟೂರಿಸಂ, ಅಮ್ಯೂಸ್‍ಮೆಂಟ್ ಪಾರ್ಕ್ ಕೂಡ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

Call us

Leave a Reply

Your email address will not be published. Required fields are marked *

seventeen − 7 =