ಮಾನ್ಸೂನ್ ಕಲರ್ಸ್: ಯುವ ಮೆರಿಡಿಯನ್‌ನಲ್ಲಿ ರಾಷ್ಟ್ರೀಯ ಕಲಾ ಶಿಬಿರಕ್ಕೆ ಚಾಲನೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ಇತಿಹಾಸ ಕಲೆಯ ತಳಹದಿಯಲ್ಲಿ ನಿಂತಿದೆ. ನೂರು ಮಾತುಗಳಿಂದ ಪರಿವರ್ತನೆಯಾಗದ್ದನ್ನು ಒಂದು ಚಿತ್ರದ ಮೂಲಕ ಬದಲಾವಣೆ ತರಲು ಸಾಧ್ಯವಿದೆ. ಕಲೆಗೆ ಮನಸ್ಸನ್ನು ಪರಿವರ್ತಿಸುವ ಶಕ್ತಿಯಿದ್ದು, ಯುವಕರು ಕಲಾ ಸಾಹಿತ್ಯದ ತೊಡಗಿಸಕೊಳ್ಳುವ ಮೂಲಕ ಸಮಾಜದ ಬದಲಾವಣೆ ಸಾಧ್ಯವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು.

Call us

Call us

Visit Now

ಯುವ ಮೆರಿಡಿಯನ್ ಸಮೂಹ ಸಂಸ್ಥೆ ಬೇ ಸ್ಪಾ ರೆಸಾರ್ಟ್ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಯುವ ಮೆರಿಡಿಯನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಾಲ್ಕು ದಿನಗಳ ರಾಷ್ಟ್ರಮಟ್ಟದ ‘ಮಾನ್ಸೂನ್ ಕಲರ್ಸ್’ ಕಲಾ ಶಿಬಿರದಲ್ಲಿ ಅವರು ಮಾತನಾಡಿ ಕರಾವಳಿಯಲ್ಲಿ ವೈವಿದೈತೆಯ ಪ್ರವಾಸ ಹಾಗೂ ಯತ್ರಾ ಸ್ಥಳಗಳಿದ್ದು, ಅಧಿಕಾರಿಗಳ ಜೊತೆ ಸಮಾಲೋಚಿಸಿ ಕರಾವಳಿ ಅಭಿವೃದ್ಧಿಗೆ ಪ್ರಯತ್ನಸಲಾಗುತ್ತದೆ. ಕುಂದಾಪುರದಂತಹ ಪ್ರವಾಸಿ ತಾಣಗಳ ನಡುವೆ ಕಲಾವಿದರಿಗೆ ಕಲಾರಚನೆ ಅವಕಾಶ ಹೆಚ್ಚಿದೆ.

Click Here

Click here

Click Here

Call us

Call us

ಉಡುಪಿ ಸಾಯಿರಾಧಾ ಡೆವಲಪರ್ರ‍್ಸ್ ಮಾಲೀಕ ಮನೋಹರ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವೈವಿಧತೆ ತವರೂರು ಕುಂದಾಪುರ ಪರಿಸರದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರ ಕಲಾ ಶಿಬಿರ ಆಯೋಜಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಮತ್ತು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಕರಾವಳಿ ತೀರ ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಸರಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಅಗತ್ಯತೆ ಇದೆ ಎಂದರು.

ಗ್ರಾಮೀಣಿ ಭಾಗದಲ್ಲಿ ಉತ್ಕೃಷ್ಠ ಮಟ್ಟದ ರೆಸಾರ್ಟ್ ತೆರೆಯುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಯುವ ಮೆರಿಡಿಯನ್ ರಾಷ್ಟ್ರಮಟ್ಟದ ಕಲಾ ಶಿಬಿರದ ಮೂಲಕ ಮತ್ತೊಂದು ಮಜಲು ಮುಟ್ಟಿದೆ. ಕುಂದಾಪುರದಂತಾ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ರೆಸಾರ್ಟ್ ಮೂಲಕ ಪ್ರವಾಸಿಗರಿಗೆ ಉತ್ಕೃಷ್ಠ ಕೊಡುಗೆ ನೀಡಿ, ರೆಸಾರ್ಟ್ ಪ್ರಶಸ್ತಿ ಪಡೆದಿದ್ದು, ಅದರ ಸೇವೆ ಹಿಂದಿರುವ ಸಾಹಸ ಎಂದು ಬಣ್ಣಿಸಿದರು.

ಬೆಂಗಳೂರು ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರೋಟರಿ ಗೌರ‍್ನರ್ ಎ.ಎಸ್.ಎನ್.ಹೆಬ್ಬಾರ್, ಯುವ ಮೆರಿಡಿಯನ್ ಸಮೂಹ ಸಂಸ್ಥೆ ಪ್ರವರ್ತಕರಾದ ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಕುಂದಾಪುರ ಪ್ಲೋರಾ ಎಂಡ್ ಫೋನಾ ಇಕೋ ಕ್ಲಬ್ ಅಧ್ಯಕ್ಷ ಡಾ.ಎಚ್.ಎಸ್.ಮಲ್ಲಿ, ರಾಷ್ಟ್ರಮಟ್ಟದ ಕಲಾವಿದರಾದ ಕೆ.ಕೆ.ಮಕಾಳಿ, ಸುಧೀರ್ ಪಾಂಡ್ನೆಸ್, ವೀಣಾ ಜೈನ್, ಮೋಹನ್ ಸಿಟ್ನೂರು, ಸಂಜು ಜೈ, ಹರ್ಷದ ಕೇರ‍್ಕರ್ ಇದ್ದರು.

ಪತ್ರಕರ್ತ ರವಿರಾಜ್ ಒಳಲಂಬೆ ಸ್ವಾಗತಿಸಿ, ನಿರೂಪಿಸಿದರು. ಯುವ ಮೆರಿಡಿಯನ್ ಪ್ರವರ್ತಕರಾದ ಉದಯ ಕುಮಾರ್ ಶೆಟ್ಟಿ ಹಾಗೂ ವಿನಯ ಕುಮಾರ್ ಶೆಟ್ಟಿ ಅತಿಥಿಗಳ ಗೌರವಿಸಿದರು.

Leave a Reply

Your email address will not be published. Required fields are marked *

one × two =