ರಾಜ್ಯ ಮಟ್ಟದ ಭಾಷಣ ಸ್ಪರ್ಧೆ: ವಫಾಗೆ ಪ್ರಥಮ ಸ್ಥಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಇತ್ತಿಚಿಗೆ ಭಾರತದ ಗಣತಂತ್ರ ದಿವಸದ ಪ್ರಯುಕ್ತ ರಾಜ್ಯ ನೆಹರು ಯುವ ಕೇಂದ್ರ ಸಂಘಟನಾದಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದ ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ವಫಾ ಪ್ರಥಮ ಸ್ಥಾನ ಪಡೆದಿದ್ದಾರೆ.

ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೆಶಕ ಅತುಲ್ ನಿಕಮ್ ವಫಾಗೆ ರೂ. 25,000 ಮೊತ್ತದ ಮೊದಲ ಬಹುಮಾನ, ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಿದರು. ಜನವರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಫಾ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಭಾರತದ ಗಣತಂತ್ರ ದಿವಸದ ಪ್ರಯುಕ್ತ ಹಾಗೂ ಸಂವಿಧಾನ ದಿವಸ ವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಕುರಿತು ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಭಾಷಣ ಸ್ಪರ್ಧೆಯನ್ನು ತಾಲೂಕು, ಹಾಗೂ ಜಿಲ್ಲಾ ಮಟ್ಟದಲ್ಲಿ ಉಡುಪಿಯ ನೆಹರು ಯುವ ಕೇಂದ್ರ ಭಾರತ ಸರ್ಕಾರದ ವತಿಯಿಂದ ಆಯೋಜಿಸಿತ್ತು.

ತಾಲೂಕು ಮಟ್ಟದ ಸ್ಪರ್ಧೆಗಳು ಅಕ್ಟೊಬರ್ 1,2,3 ರಂದು ಹಾಗೂ ಜಿಲ್ಲಾಮಟ್ಟದಲ್ಲಿ ಅ. 9ರಂದು ಭಾಷಣ ಸ್ಪರ್ಧೆ ನಡೆದು ಕ್ರಾಸ್ ಲ್ಯಾಂಡ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ವಫಾ- ಪ್ರಥಮ ಸ್ಥಾನ, ಎಂಜಿಎಂ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಅಮ್ಯಾಲಿನ್ ಬೀನ್ ಥಾಮಸ್ ದ್ವಿತೀಯ ಸ್ಥಾನ, ಹಾಗೂ ಮಿಲಾಗ್ರೀಸ್ ಕಾಲೇಜಿನ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಬಿನಯ್ ಎಡ್ಮಂಡ್ ಡಿಕಾಸ್ಟ ತೃತೀಯ ಸ್ಥಾನ ಪಡೆದಿದ್ದರು.

2017 ರಲ್ಲಿ ರಾಷ್ಟ್ರಮಟ್ಟದಲ್ಲಿ ಶ್ರೇಯಸ್ ಕೋಟ್ಯಾನ್ ಪ್ರಥಮ ಸ್ಥಾನ ಪಡೆದುದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ವಫಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ ವಹಿಸುತ್ತಿದ್ದು, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜರವರ ಮಾರ್ಗದರ್ಶನದಲ್ಲಿ ಅಗತ್ಯವಾದ ತರಬೇತಿ ಮತ್ತು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

19 + thirteen =