ವಕ್ವಾಡಿ ಗುರುಕುಲಕ್ಕೆ ವಿದ್ಯಾಸಂಸ್ಥೆಗೆ ಐಎಸ್‌ಒ ಪ್ರಮಾಣಪತ್ರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಮೂಲ ಉದ್ದೇಶದೊಂದಿಗೆ ಸ್ಥಾಪಿತವಾದ ಸಂಸ್ಥೆ ಗುರುಕುಲ ವಿದ್ಯಾಸಂಸ್ಥೆಗೆ ಈ ಭಾರಿ ಐಎಸ್‌ಒ (INTERNATIONAL ORGANISATION FOR STANDARDISATON ) :9001 :2015 ಇಂದ ಪ್ರಮಾಣೀಕೃತಗೊಂಡಿದೆ.

Call us

Call us

ಅಂತರಾಷ್ಟ್ರೀಯ ಗುಣಮಟ್ಟದ ಪರಿಶೀಲನಾಸಂಸ್ಥೆ ತಂಡವಾದ ಡಿ.ಯು.ವಿ ಸರ್ಟೀಫಿಕೇಶನ್ ಪ್ರೈ. ಲಿಮಿಟೆಡ್‌ನ ಪ್ರಮಾಣೀಕರಣ ಪದ್ಧತಿಯಾದ ಜೆ.ಎ.ಝೆಡ್- ಎ.ಎನ್. ಝೆಡ್ ನ ಮೂಲಕ ಗುರುಕುಲ ಪಬ್ಲಿಕ್ ಶಾಲೆಯ ಮೊಂಟೆಸರಿಯಿಂದ ಪ್ರೌಢಶಾಲೆಯವರೆಗಿನ ಗುಣಮಟ್ಟದ ಶಿಕ್ಷಣ ಮತ್ತು ನಿರ್ವಹಣೆಯ ಬಗ್ಗೆ ಮೌಲ್ಯ ಮಾಪನ ಮಾಡಿ ಗುಣಮಟ್ಟ ಪರಿಶೀಲನ ಪತ್ರ ನೀಡಿದೆ. ಈ ಪರಿಶೀಲನ ಪತ್ರವು ವಿದ್ಯಾಸಂಸ್ಥೆಯ ಗುಣಮಟ್ಟ ಮತ್ತು ಅದರ ಉತ್ತಮ ನಿರ್ವಹಣೆಯ ಬಗ್ಗೆ ಇರುವ ಕೈಗನ್ನಡಿಯಾಗಿದೆ.

ಸತತ ಹತ್ತು ವರ್ಷಗಳಿಂದ ಕುಂದಾಪುರ ಸುತ್ತ ಮುತ್ತಲಿನ ಹಾಗೂ ರಾಜ್ಯದ ನಾನಾ ಕಡೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸದಾ ಹಚ್ಚ ಹಸುರಿನಿಂದ ಕಂಗೊಳಿಸುವ ಶಾಲಾ ಆವರಣ, ಸುಸಜ್ಜಿತ ಕಟ್ಟಡ, ವಿಶಾಲವಾದ ಆಟದ ಮೈದಾನ , ಕೌಶಲ್ಯ ಪೂರಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಾಂಪ್ರದಾಯಿಕ ಮತ್ತು ಆಧುನಿಕ ಶಿಕ್ಷಣ ಪದ್ದತಿ ಇವೇ ಮುಂತಾದ ವಿಶಿಷ್ಟತೆಯಿಂದ ಗುರುಕುಲ ವಿದ್ಯಾಸಂಸ್ಥೆ ತನ್ನದೇ ಆದ ಗುರುತ್ವವನ್ನು ಸ್ಥಾಪಿಸುತ್ತ ಪ್ರವರ್ದಮಾನಕ್ಕೆ ಬರುತ್ತಿದೆ.

Call us

Call us

ಈ ಸಂಸ್ಥೆಯ ಜಂಟೀ ಕಾರ‍್ಯನಿರ್ವಹಕರುಗಳಾದ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ ಎಸ್. ಶೆಟ್ಟಿ ಅವರು ಈ ಪ್ರಮಾಣಪತ್ರವನ್ನು ಪಡೆಯುದರಲ್ಲಿ ಶ್ರಮಿಸಿದ ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ.ಶಾಯಿಜು ಕೆ.ಆರ್.ನಾಯರ್ ಮತ್ತು ಅವರ ಸಿಬ್ಬಂಧಿ ವರ್ಗದವರಿಗೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

16 + one =