ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ಗೆ 10ನೇ ತರಗತಿಯಲ್ಲಿ 7ನೇ ಬಾರಿ 100% ಫಲಿತಾಂಶ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಕ್ವಾಡಿಯ ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಶಾಲೆ ಸತತ 7ನೇ ಬಾರಿಗೆ ಸಿಬಿಎಸ್‌ಇ ಪಠ್ಯಕ್ರಮದ 10ನೇ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

Call us

Call us

2016-17ನೇ ಸಾಲಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದ 10ನೇ ತರಗತಿ ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ( 10 ಸಿ.ಜಿ.ಪಿ.ಎ) 3 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ( 9.8ಸಿ.ಜಿ.ಪಿ.ಎ ) ಅಲ್ಲದೇ 12 ವಿದ್ಯಾರ್ಥಿಗಳು ( 9ಕ್ಕಿಂತ ಹೆಚ್ಚು ಸಿ.ಜಿ.ಪಿ.ಎ) ಪಡೆದು ಪಾಲಕರು ಮತ್ತು ಸಂಸ್ಥೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪರೀಕ್ಷೆ ಬರೆದ ಇತರೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಸಂಸ್ಥೆಯು ದಾಖಲೆಯ ಫಲಿತಾಂಶವನ್ನು ಕಂಡಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬಾಂಡ್ಯ ಎಜುಕೇಶನ್ ಟ್ರಸ್ಟ್ ಆಡಳಿತಕ್ಕೊಳಪಟ್ಟಿರುವ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಬದುಕಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿ, ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ತೊಡಗಿಕೊಳ್ಳುವಂತೆ ಮಾಡಿದೆ. ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಸತತ ಏಳನೇ ಬಾರಿಗೆ ನೂರು ಪ್ರತಿಶತ ಫಲಿಶಾಂಶವನ್ನು ದಾಖಲಿಸಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಶಿಕ್ಷಣಕ್ಕೆ ಹಿಡಿಯ ಕನ್ನಡಿಯಾಗಿದೆ.

Call us

Call us

Leave a Reply

Your email address will not be published. Required fields are marked *

4 × 1 =