ವಿಚಾರವಾದಿಗಳ ಸೋಗಿನಲ್ಲಿರುವ ವಿಚಿತ್ರವಾದಿಗಳು

Call us

Call us

ನಾಗರಾಜ ಪಿ. ಯಡ್ತರೆ 

Call us

Call us

ಮನುಷ್ಯನಿಗೆ ಒಮ್ಮೆ ಪ್ರಚಾರದ ಗೀಳು ಹತ್ತಿಕೊಂಡರೆ ಮುಗಿಯಿತು. ಆತ ಏನೆಲ್ಲಾ ಹುಚ್ಚಾಟ ಮಾಡುತ್ತಾನೆಂದರೆ, ಆತನಿಗೆ ತನ್ನ ತಲೆಗೂ, ನಾಲಿಗೆಗೂ ಇರುವ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದು ಗೊತ್ತೇ ಆಗುವುದಿಲ್ಲ. ಜನರೆಲ್ಲಾ ಅತನನ್ನು ‘ಪೆಕರಾ’ ಅಂತ ನೋಡಿದರೂ ಅವನಿಗೆ ತಾನು ಮಹಾನುಭಾವ ಎಂಬ ಭಾವನೆ ಬರಲಾರಂಭಿಸುತ್ತದೆ. ತನ್ನ ವಿಚಾರಧಾರೆಯನ್ನು ಜನರು ಎಂದೋ ಕಸದ ಬುಟ್ಟಿಗೆ ಹಾಕಿರುವುದು ಸಹ ಅತನಿಗೆ ತಿಳಿಯುವುದಿಲ್ಲ. ಅತನಿಗೆ ಇಡೀ ಭೂಮಂಡಲದ ಜನರೆಲ್ಲಾ ಮೂರ್ಖರಂತೆಯೂ, ತಾನು ಮಾತ್ರ ಪಂಡಿತನಂತೆಯೂ ಭಾಸವಾಗತೊಡಗುತ್ತದೆ!

ಈ ಮಾತನ್ನು ಹೇಳಲೂ ಒಂದು ಕಾರಣ ಇದೆ. ನಮ್ಮ ನಾಡಿನ ಕೆಲವು ವಿಚಿತ್ರವಾದಿಗಳಿಗೆ ತಾವು ಮಹಾನ್ ಪಂಡಿತರೆನಿಸಿಕೊಳ್ಳಲು ಎಲ್ಲಾ ದಾರಿಗಳು ಮುಚ್ಚಲ್ಪಟ್ಟು, ಕೇವಲ ಹಿಂದು ಧರ್ಮ ಮತ್ತು ಹಿಂದೂ ಧರ್ಮದ ದೇವತೆಗಳು ಮಾತ್ರ ಚರ್ಚೆಯ ವಿಷಯವಾಗಿ ಉಳಿದಿದೆ. ಧರ್ಮ ಹಾಗೂ ದೇವರ ಕುಲ ಗೋತ್ರದ ಬಗ್ಗೆ ಎಂಥ ಅಧಮನೂ ಆಡದ ಮಾತನಾಡಿ, ಅಸಭ್ಯನೂ ಬಳಸದ ಭಾಷಾ ಪ್ರಯೋಗವನ್ನೆಲ್ಲಾ ಬಳಸಿ, ತನ್ನ ಮಹಾನ್ ಸಂಸ್ಕ್ರತಿಯನ್ನು ಪ್ರದರ್ಶನ ಮಾಡಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಹಂತಕ್ಕೆ ತಲುಪಿ ಬಿಟ್ಟಿದ್ದಾರೆ. ಆದರೆ ನೆನಪಿರಲಿ, ಜನ ಮಾತ್ರ ಈ ಎಲ್ಲಾ ಬೆಳವಣಿಗೆಯನ್ನು ನೋಡಿ ಸ್ಥಿತ ಪ್ರಜ್ಞರಾಗಿರುವುದು ಈ ಮಣ್ಣಿನ ಪುಣ್ಯ.

ದೇವರ ಮೇಲಿನ ನಂಬಿಕೆ, ಧರ್ಮದ ಮೇಲಿನ ಭಯ ಭಕ್ತಿಯನ್ನು ಸಾರಾಸಗಟಾಗಿ ವಿರೋಧಿಸುವ ವಿಚಿತ್ರವಾದಿಗಳಿಗೆ ಒಂದು ವಿಚಾರ ಮನದಟ್ಟಾಗಬೇಕು. ದೇವರು, ಧರ್ಮದ ಮೇಲಿನ ನಂಬಿಕೆ, ಭಯ ಎನ್ನುವುದು ಅನಾದಿಕಾಲದಿಂದಲೂ ನಡೆದು ಬಂದ ಪೊಲೀಸಿಂಗ್ ವ್ಯವಸ್ಥೆ. ನಮ್ಮ ದೇಶದಲ್ಲಿರುವ ಜನಸಂಖ್ಯೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲೀಸರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ದೇಶದ ಜನರೆಲ್ಲಾ ದಂಗೆ ಎದ್ದರೆ ಅಥವಾ ಕೊಲೆ, ಸುಲಿಗೆ, ಅತ್ಯಾಚಾರದಂತಹ ಅನೈತಿಕ ಕೆಲಸದಲ್ಲಿ ತೊಡಗಿದರೆ ಯಾವ ಪೊಲೀಸ್ ವ್ಯವಸ್ಥೆಯೂ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಬಹುಪಾಲು ಜನರು ಹಾಗೆ ಮಾಡೋದಿಲ್ಲ. ಯಾಕೆಂದರೆ ಅವರಲ್ಲೊಂದು ಧಾರ್ಮಿಕ ಪ್ರಜ್ಞೆ ಇದೆ. ತಾನು ತಪ್ಪು ಮಾಡಿದರೆ ದೇವರು ತನಗೆ ಶಿಕ್ಷೆ ನೀಡುತ್ತಾನೆ ಎಂಬ ಅಗೋಚರ ಶಕ್ತಿಯ ಮೇಲಿರುವ ಭಯ ಇಡೀ ಸಮಾಜ ಶಾಂತಿ, ಸುವ್ಯವಸ್ಥೆಯಿಂದ ನಡೆಯುವಂತೆ ಮಾಡುತ್ತದೆ. ಖಂಡಿತವಾಗಿಯೂ ಇಡೀ ಸಮಾಜ ಶಾಂತಿ ಸುವ್ಯವಸ್ಥೆಯಿಂದ ಇರುವುದು ಕೇವಲ ಬೆರಳೆಣಿಕೆಯ ಪೊಲೀಸರಿಂದಲ್ಲ, ಅದು ಜನರೊಳಗಿರುವ ನಂಬಿಕೆಯಿಂದ. ದೇಶದ ಇಂದಿಗೂ ಎಷ್ಟೋ ಕಡೆ ಕಾನೂನಿನ ಅರಿವಿಲ್ಲದ, ಪೊಲೀಸರನ್ನೇ ನೋಡದ ಹಳ್ಳಿಗಳಿವೆ. ಆದರೆ ಅಲ್ಲಿಯ ಕಾನೂನು ವ್ಯವಸ್ಥೆ ತುಂಬಾ ಉತ್ತಮವಾಗಿದೆ. ಇದಕ್ಕೆ ಅವರಲ್ಲಿರುವ ಧಾರ್ಮಿಕಪ್ರಜ್ಞೆ ಕಾರಣವೆಂದು ಬೇರೆ ಹೇಳಬೇಕಿಲ್ಲ. ಈ ಎಲ್ಲಾ ಧಾರ್ಮಿಕ ನಂಬಿಕೆಯನ್ನು ಮೀರಿಯೂ ಯಾರಾದರೂ ನಡೆದುಕೊಂಡರೆ ಅವರಿಗೆ ಪೊಲೀಸ್, ಕಾನೂನು ಬೇಕಾಗುತ್ತದೆ. ದೇಶದ ಕಾನೂನಿನಂತೆ ಶಿಕ್ಷೆಯೂ ಆಗುತ್ತದೆ. ದೇವರು ಇರಲಿ, ಇಲ್ಲದಿರಲಿ ದೇವರ ಬಗ್ಗೆ ಈ ಬಗೆಯ ಭಯವೂ ಬೇಡವೆಂದು ವಿಚಿತ್ರವಾದಿಗಳು ವಾದಿಸುದಾದರೆ ಮುಂದೊಂದು ದಿನ ವಾರ್ಡಿಗೊಂದು ಪೊಲೀಸ್ ಠಾಣೆ, ಕೊನೆಗೆ ಜನಕ್ಕೊಬ್ಬ ಪೊಲೀಸ್ ಬೇಕಾದರೆ ಅಚ್ಚರಿಪಡಬೇಕಿಲ್ಲ. (ಕುಂದಾಪ್ರ ಡಾಟ್ ಕಾಂ ಅಂಕಣ)

Click here

Click Here

Call us

Call us

Visit Now

ಮೂರ್ತಿ ಪೂಜೆ ಮಾಡುವ, ದೇವಸ್ಥಾನ ಕಟ್ಟುವ ಹಿಂದೂ ಧರ್ಮದಲ್ಲಿ ಕೆಲವು ಮೂಢನಂಬಿಕೆಗಳಿರುವುದು ನಿಜ. ಆದರೆ ನಿಜವಾದ ವಿಚಾರವಂತ ಧರ್ಮದಲ್ಲಿರುವ ಉತ್ತಮ ಸತ್ವವನ್ನು ಸ್ವೀಕರಿಸಿ, ಮೂಢನಂಬಿಕೆಯನ್ನು ಕಡೆಗಣಿಸುತ್ತಾನೆ. ದೈವರಾಧನೆಯೇ ಮೂಢನಂಬಿಕೆಯೆಂದರೆ ಸಂಸ್ಕೃತಿ ನಾಶವಾಗುತ್ತದೆ. ಉದಾಹರಣೆಗೆ – ನಾಗಮಂಡಲ ಆಚರಣೆಯಲ್ಲಿರುವ ಒಂದೆರಡು ಮೂಢನಂಬಿಕೆಯನ್ನು ವೈಭವೀಕರಿಸಿ ಇಡೀ ನಾಗಮಂಡಲ ಆಚರಣೆಯನ್ನೇ ಸಾರಾಸಗಟಾಗಿ ವಿರೋಧಿಸಿದರೆ ಅದರಲ್ಲಿರುವ ಢಕ್ಕೆ ಕುಣಿತ, ಮಂಡಲ ಬರೆಯುವ ಕಲೆ, ಎಲ್ಲವೂ ಜನರಿಂದ ದೂರವಾಗಿ ನಮ್ಮ ಸಂಸ್ಕೃತಿಯು ನಾಶವಾಗುತ್ತದೆ. ವಿಚಿತ್ರವಾದಿಗಳು ಒಂದು ವಿಚಾರವನ್ನು ಗಮನಿಸಬೇಕು. ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿರುವ ಮಾನಸಿಕ ವೈದ್ಯರು ಮತ್ತು ಮಾನಸಿಕ ಖಾಯಿಲೆ ಆಸ್ಪತ್ರೆಗಳ ಸಂಖ್ಯೆ ನಗಣ್ಯ. ಯಾಕೆಂದರೆ ನಮ್ಮ ದೇಶದಲ್ಲಿ ಜನರು ದೇವರೆಂಬ ಅಗೋಚರ ಶಕ್ತಿಯನ್ನು ನಂಬುತ್ತಾರೆ. ಮೂರ್ತಿಪೂಜೆಯನ್ನು ಮಾಡುತ್ತಾರೆ ಮತ್ತು ತನಗೆ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು, ತನ್ನ ಶಕ್ತಿಗೆ ಮೀರಿದ ಕೆಲಸವನ್ನು, ತನಗೆ ಮಾನಸಿಕ ಒತ್ತಡವನ್ನು ನೀಡುವ ಅನಿಶ್ಚಿತತೆಯನ್ನು ದೇವರ ಮೇಲೆ ಹಾಕಿ, ತನ್ನೆಲ್ಲಾ ಒತ್ತಡವನ್ನು ದೇವರಿಗೆ ವರ್ಗಾಯಿಸಿ ತಾನು ನಿರಾಳವಾಗುತ್ತಾನೆ. ಆ ಮೂಲಕ ತನ್ನ ಮಾನಸಿಕ ಒತ್ತಡ ಕಳೆದುಕೊಳ್ಳುತ್ತಾನೆ. ಆದರೆ ದೇವರನ್ನು ಅಥವಾ ವಿಶ್ವದ ಅಗೋಚರ ಶಕ್ತಿಯನ್ನು ನಂಬದ ವ್ಯಕ್ತಿಯು ವಿಚಿತ್ರವಾದಿಗಳಂತೆ ಮಾನಸಿಕ ಸ್ಥೀಮಿತ ಕಳೆದುಕೊಳ್ಳುತ್ತಾನೆ.

Call us

intellecualist example1ಇನ್ನು ಕೆಲವು ವಿಚಿತ್ರವಾದಿಗಳು ತಾವು ಮಹಾನ್ ಸಾಹಿತಿಗಳು, ಕವಿಗಳೆಂದು ಕರೆದು ಕೊಳ್ಳುತ್ತಾರೆ. ಒಮ್ಮೆ ಆಲೋಚಿಸಿ. ನಮ್ಮ ಕವಿಗಳು, ಸಾಹಿತಿಗಳು ಹೇಗಿರಬೇಕು? ಸಮಾಜವನ್ನು ಕಟ್ಟುವ, ಧರ್ಮಗಳ ನಡುವಿನ ಸಾಮರಸ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡಬೇಕು. ಕುವೆಂಪು, ಮಾಸ್ತಿ, ಶಿವರಾಮ ಕಾರಂತರು, ತ.ರಾ.ಸು., ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರಂತಹ ಮಹಾನ್ ಸಾಹಿತಿಗಳು ಯಾವ ಧರ್ಮದವರಿಗೂ ನೋವಾಗದಂತೆ ಧರ್ಮದಲ್ಲಿರುವ ಅಂಕುಡೊಂಕುಗಳನ್ನು ಬಹಳ ನಯವಾಗಿ ಬರೆದು ಜನಮಾನಸದಲ್ಲಿ ಉಳಿದಿದ್ದಾರೆ. ನಮ್ಮ ಕನ್ನಡದ ಎಲ್ಲಾ ಮಹಾನ್ ಸಾಹಿತಿಗಳೂ ಸಹ ಧರ್ಮದೊಳಗಿನ ಮೂಢ ನಂಬಿಕೆಯನ್ನು, ಕಂದಾಚಾರವನ್ನು ವಿರೋಧಿಸಿದ್ದಾರೆ ಮತ್ತು ಅದನ್ನು ತಮ್ಮ ಬರಹದ ಮೂಲಕವೂ ವ್ಯಕ್ತಡಿಸಿದ್ದಾರೆ. ಆದರೆ ಯಾರ ಭಾವನೆಗೂ ನೋವಾಗದಂತೆ ಬರೆದಿದ್ದಾರೆ. ಒಂದು ಧರ್ಮದ ಪವಿತ್ರ ಗ್ರಂಥವನ್ನು ಒಂದು ಮಹಾನ್ ಸಾಹಿತ್ಯದಂತೆ ಗೌರವಿಸಿದ್ದಾರೆ. ಎಲ್ಲರನ್ನೂ ಗೌರವಿಸುವ, ಸಮಾಜವನ್ನು ಕಟ್ಟುವ, ಪ್ರೀತಿಯನ್ನು ಬಿತ್ತುವ ಆ ಮಹಾನ್ ಸಾಹಿತಿಗಳೆಲ್ಲಿ? ಒಂದು ಧರ್ಮದ ಧರ್ಮ ಗ್ರಂಥವನ್ನು ಸುಡುತ್ತೇನೆ ಎಂದು ಹೊರಡುವ ಈ ಪಡಪೋಸಿ ವಿಚಿತ್ರವಾದಿಗಳೆಲ್ಲಿ? (ಕುಂದಾಪ್ರ ಡಾಟ್ ಕಾಂ ಅಂಕಣ)

ಈ ಪಡಪೋಸಿ ವಿಚಿತ್ರವಾದಿಗಳದ್ದು ಎಂಥ ಹುಚ್ಚಾಟನೋಡಿ. ಇವರಿಗೆ ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕೆಂಬ ಪರಿಜ್ಞಾನ ಇದ್ದಂತೆ ಕಾಣುವುದಿಲ್ಲ. ಧರ್ಮದಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರಗಳಿದ್ದರೆ ಅದನ್ನು ನಯವಾಗಿ ತಮ್ಮ ಬರಹಗಳಲ್ಲಿ ವ್ಯಕ್ತಪಡಿಸಲಿ. ಆಗ ವಿಚಾರವಂತರು ಅದನ್ನು ಸ್ವೀಕರಿಸುತ್ತಾರೆ. ಆದರೆ ತಾನು ಮಹಾನ್‌ ತೀವ್ರವಾದಿಯಂತೆ ಅನಗತ್ಯವಾಗಿ ದೇವರ ಅವಹೇಳನ ಮಾಡುವುದು, ಧರ್ಮಗ್ರಂಥವನ್ನು ಸುಡಲು ಹೊರಡುವುದು ಇದನ್ನೆಲ್ಲ ಮಾಡಲು ಹೊರಟರೇ ಇವರಂತಹ ತೀವ್ರಗಾಮಿಗಳಿಂದಲೇ ಒದೆ ಬೀಳುತ್ತದೆ. ಇವರದ್ದು ಸುಡುವ ಸಂಸ್ಕ್ರತಿಯಾದರೆ ಅವರದ್ದು ಒದೆಯುವ ಸಂಸ್ಕ್ರತಿಯಾಗುತ್ತದೆ.

ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಬೊಬ್ಬೆ ಹೊಡೆಯುತ್ತಾರಲ್ಲ, ಇವರಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದಾ? ಬೇರೆಯವರು ತಮ್ಮ ಧರ್ಮದ ಬಗ್ಗೆ ಮಾತಾಡಿದರೆ ಅವರು ಕೋಮುವಾದಿಗಳಾಗುತ್ತಾರೆ. ಎಂತಹ ವಿಪರ್ಯಾಸ ನೋಡಿ, ಕೋಮುವಾದಿಗಳು ಎಂದು ಕರೆಯಿಸಿಕೊಳ್ಳುವವರಿಗಿಂತ ಹೆಚ್ಚು ಈ ವಿಚಿತ್ರವಾದಿಗಳೇ ಧರ್ಮ, ಜಾತಿ ಬಗ್ಗೆ ಮಾತಾನಾಡುತ್ತಾರೆ. ತಲೆ ಕೆಟ್ಟ ಒಬ್ಬ ವಿಚಿತ್ರವಾದಿ ನಾಳೆ ಬೆಳಿಗ್ಗೆ ತನಗೆ ಪ್ರಚಾರಬೇಕೆಂದರೆ ಹಿಂದೂ ದೇವರ ಅಶ್ಲೀಲ ಚಿತ್ರ ಬಿಡಿಸುತ್ತಾನೆ ದೇವರ ಬಗ್ಗೆ ಅಶ್ಲೀಲ ಸಾಹಿತ್ಯವಿರುವ ಪುಸ್ತಕ ಬರೆಯುತ್ತಾನೆ. ತನ್ನಷ್ಟಕ್ಕೇ ಬಿಟ್ಟಿ ಪ್ರಚಾರ! ಹೇಗಿದೆ ಐಡಿಯಾ? ಹಿಂದೂ ಧರ್ಮ ಬಿಟ್ಟು ಬೇರೆ ಧರ್ಮದ ಬಗ್ಗೆ ಹೀಗೆಲ್ಲ ಬರೆದರೆ ಅವರ ಪೋಟೋಗೆ ಎಂದೋ ಹಾರ ಬೀಳುತ್ತಿತ್ತು!

ಈ ವಿಚಿತ್ರವಾದಿಗಳ ಇನ್ನೊಂದು ವಿಚಿತ್ರ ನಡವಳಿಕೆ ಗಮನಿಸಿ, ಇವರು ನಕ್ಸಲಿಸಂ ಬಗ್ಗೆ ಸಹಾನುಭೂತಿಯ ಮಾತಾಡುತ್ತಾರೆ. ಅವರು ವ್ಯವಸ್ಥೆಯಿಂದ ರೋಸಿ ಹೋಗಿ ಕ್ರಾಂತಿ ಹಾದಿ ಹಿಡಿದಿದ್ದಾರೆ ಎಂದು ಅವರನ್ನು ಹೊಗಳುತ್ತಾರೆ. ದೇಶದಲ್ಲಿ ನೂರಾರು ಅಮಾಯಕ ನಾಗರಿಕರನ್ನು, ಪೊಲೀಸರನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದಾಗ ಒಂದೇ ಒಂದು ಮಾತನಾಡದ ಸಾಹಿತಿಗಳು, ಯಾವುದೋ ತಲೆಕೆಟ್ಟ ವಿಚಿತ್ರವಾದಿಯೊಬ್ಬ ತನ್ನ ನಾಲಗೆ ಚಪಲ ತೀರಿಸಿಕೊಳ್ಳಲು ಅನಗತ್ಯ ಮಾತನಾಡಿ ತಪರಾಕಿ ತಿಂದಾಗ ಎಲ್ಲಾ ಒಟ್ಟಾಗಿ ಬೊಬ್ಬೆ ಹೊಡೆಯುತ್ತಾರೆ. ಹಾಗಾದರೆ ಉಳಿದ ನಾಗರಿಕರು, ಪೊಲೀಸರದ್ದು ಜೀವ ಅಲ್ಲವೇ? ಅವರ ಮಕ್ಕಳ ನೋವು ಇವರಿಗೆ ಅರ್ಥವಾಗುವುದಿಲ್ಲವೇ? ನಕ್ಸಲರು ತಮ್ಮ ಸಿಟ್ಟನ್ನು ಬೇಕಾದರೆ ರಾಜಕಾರಣಿಗಳ ಬಳಿ, ನೇರವಾಗಿ ಸರ್ಕಾರದ ಮಂತ್ರಿಗಳ ಬಳಿ ತೋರಿಸಲಿ. ಅದು ಬಿಟ್ಟು ಕರ್ತವ್ಯನಿರತ ಪೊಲೀಸರನ್ನು, ಅಮಾಯಕರನ್ನು ಕಾಲ ಕಸದಂತೆ ಹೊಸಕಿ ಹಾಕುವುದು ಎಷ್ಟು ಸರಿ. ಇವರನ್ನು ಬೆಂಬಲಿಸಿ ಕಣ್ಣಲ್ಲಿ ರಕ್ತವಿರದ ಕ್ರೂರಿಗಳಂತೆ ಮೌನವಿರುವ ವಿಚಿತ್ರವಾದಿಗಳನ್ನು ಮಹಾನ್ ಸಾಹಿತಿಗಳೆಂದು ಯಾರು ಕರೆದಾರು? ಯಾವುದೇ ಒಂದು ಸ್ಪಷ್ಟ ನಿಲುವು ಇಲ್ಲದ ಓತಿಕ್ಯಾತನಂತೆ ದಿನಕ್ಕೊಂದು, ಹೊತ್ತಿಗೊಂದು ಬಣ್ಣ ಬದಲಾಯಿಸುವ ಈ ವಿಚಿತ್ರವಾದಿಗಳ ಸಾಹಿತ್ಯ ಯಾರಿಗೆ ಬೇಕು? ಧರ್ಮಗ್ರಂಥ ಸುಡಲು ಹೊರಟ ವಿಚಿತ್ರವಾದಿಯೊಬ್ಬ ಎಲ್ಲರೂ ತನ್ನ ವಿರುದ್ಧ ಮಾತನಾಡಿದಾಗ ಮತ್ತು ಯಾವಾಗ ತನ್ನ ಬುಡಕ್ಕೆ ಬೆಂಕಿ ಬೀಳುತ್ತದೆ ಎಂದು ಅರಿವಾದಾಗ ತನ್ನ ಕೊನೆಯ ಗುರಾಣಿ ಎತ್ತಿಕೊಳ್ಳುತ್ತಾನೆ. ತನಗೆ ‘ಸಂವಿಧಾನವೇ ಭಗವದ್ಗೀತೆ’ ಎಂದು! ಹೇಗಿದೆ ನೋಡಿ ಪಲಾಯನವಾದ. ಇಡೀ ದೇಶದ ಜನ ಸಂವಿಧಾನದ ವಿರುದ್ಧ ಇದ್ದಾರೆ ಇತನೊಬ್ಬ ಮಾತ್ರ ಸಂವಿಧಾನವನ್ನು, ಅದರಲ್ಲಿರುವ ಕಾನೂನನ್ನು ಪಾಲಿಸುತ್ತಾನೆ. ಪಾಪ! ದೇಶದ ಜನರೆಲ್ಲಾ ಕಿವಿ ಮೇಲೆ ಹೂವಿಟ್ಟುಕೊಂಡು ಇವನ ವೇದವಾಕ್ಯವನ್ನು ಕೇಳಲು ಕಾದು ಕುಳಿತಿದ್ದಾರೆಂದು ಭಾವಿಸಿರಬೇಕು ಅಲ್ವಾ?

ಯಾವುದೇ ಧರ್ಮದಲ್ಲಿ ಯಾವುದೇ ರೀತಿಯ ಮೂಢನಂಬಿಕೆಯಿರಲಿ, ಕಂದಾಚಾರವಿರಲಿ, ಜಾತಿ ವ್ಯವಸ್ಥೆಯಿರಲಿ ಇದೆಲ್ಲಾ ಕೊನೆಗೊಳ್ಳಲು ಇರುವುದು ಒಂದೇ ಔಷಧ ಅದು ಶಿಕ್ಷಣ ಮಾತ್ರ. ಸಮಾಜದ ಎಲ್ಲಾ ಜಾತಿ, ಪಂಗಡದ ಜನರಿಗೂ ಉತ್ತಮ ಶಿಕ್ಷಣ ದೊರೆತಂತೆ ಎಲ್ಲಾ ಬಗೆಯ ಮೂಢನಂಬಿಕೆಗಳು, ಜಾತಿ ವ್ಯವಸ್ಥೆ, ಕಂದಾಚಾರ ಕ್ರಮೇಣ ಕಡಿಮೆಯಾಗುತ್ತದೆಯೇ ಹೊರತು, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುವ ಮನಸ್ಥಿತಿ ಇರುವ ಸ್ವಯಂಘೋಷಿತ ವಿಚಾರವಾದಿಗಳಿಂದಲ್ಲ. ಧರ್ಮಗಳ ನಡುವೆ, ಜಾತಿಗಳ ನಡುವೆ ಸಾಮರಸ್ಯ ಬೆಳೆದಂತೆ ಸಮಾಜವು ಅರಿವು, ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ನಾವೆಲ್ಲಾ ಪ್ರೀತಿಯನ್ನು ಬೆಸೆಯುವ ಕೊಂಡಿಯಾಗಿರಬೇಕೆ ಹೊರತು ಕೊಂಡಿ ಕಳಚುವ ಸುತ್ತಿಗೆಯಾಗಬಾರದು. ಧರ್ಮವೇ ಬೇಡ, ಜಾತಿಯೇ ಬೇಡ ಎನ್ನುವುದಕ್ಕಿಂತ ಅವುಗಳ ನಡುವೆ ಸಾಮರಸ್ಯದ ಬೀಜ ಬಿತ್ತುವ ಕೆಲಸ ಮಾಡಿದಾಗ ವಿವಿಧ ಸಂಸ್ಕ್ರತಿ, ವಿವಿಧ ಧರ್ಮವಿರುವ ಸುಂದರ ಭಾರತ ನಮ್ಮದಾಗುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮಾತೃ ಭೂಮಿ ನಮ್ಮದಾಗುತ್ತದೆ. ಎಡಬಿಡಂಗಿಗಳಂತೆ ಜಾತಿ, ಧರ್ಮದ ವಿರುದ್ಧ ಮಾತನಾಡುವ ಎಲ್ಲಾ ವಿಚಿತ್ರವಾದಿಗಳು ದೇಶದ ಪ್ರಸ್ತುತ ಸಮಸ್ಯೆಗಳ ಬಗ್ಗೆ, ಮಕ್ಕಳ ಉತ್ತಮ ಶಿಕ್ಷಣದ ಬಗ್ಗೆ ಹೋರಾಡಿದರೆ ಭಾರತ ಪಾವನವಾಗುತ್ತದೆ. ಭಾರತವು ವಿಶ್ವಮಾನ್ಯವಾಗುತ್ತದೆ. (ಕುಂದಾಪ್ರ ಡಾಟ್ ಕಾಂ ಅಂಕಣ)

ಕುಂದಾಪ್ರ ಡಾಟ್ ಕಾಂ ನಲ್ಲಿ ಪ್ರಕಟವಾಗುವ ಅಂಕಣ, ಲೇಖನಗಳು ಆಯಾ ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿತ್ತದೆ.

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

One thought on “ವಿಚಾರವಾದಿಗಳ ಸೋಗಿನಲ್ಲಿರುವ ವಿಚಿತ್ರವಾದಿಗಳು

Leave a Reply

Your email address will not be published. Required fields are marked *

two × 3 =