ವಿಜಯದಶಮಿ: ಕೊಲ್ಲೂರಿನಲ್ಲಿ ಮಕ್ಕಳಿಗೆ ವಿದ್ಯಾರಂಭ, ನವಾನ್ನಪ್ರಾಶನ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ನವರಾತ್ರಿಯ ಅಂಗವಾಗಿ ಪ್ರಸಿದ್ಥ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಸಹಸ್ರಾರು ಭಕ್ತರು ವಿಜಯದಶಮಿಯಂದು ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸಿದರು. ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದ ಸರಸ್ವತಿ ಮಂಟಪದ ಮುಂಭಾಗದಲ್ಲಿ ಮಕ್ಕಳಿಗೆ ಪ್ರಾಥಃಕಾಲದಿಂದಲೇ ಅಕ್ಷರಾಭಾಸ ಮಾಡಿಸಲಾಯಿತು.

Call us

Click Here

Click here

Click Here

Call us

Visit Now

Click here

ಹೆತ್ತವರು ಕಾಲಿನ ಮೇಲೆ ಮಕ್ಕಳನ್ನು ಕುರಿಸಿಕೊಂಡು ವಿದ್ಯಾರಂಭ ಮಾಡಿಸಲಾಗುತ್ತದೆ. ಅರ್ಚಕರು ಚಿನ್ನದಿಂದ ಮಗುವಿನ ನಾಲಗೆಯ ಮೇಲೆ ಓಂ ಎಂದು ಬರೆಯುತ್ತಾರೆ, ಬಳಿಕ ಹೆತ್ತವರು ಮಗುವಿನ ಬೆರಳಿಂದ ಅಕ್ಕಿ ತುಂಬಿದ ಹರಿವಾಣದಲ್ಲಿ ಓಂ ಎಂದು ಬರೆಯಿಸಿ ಬಳಿಕ ಮಾತೃಭಾಷೆಯಲ್ಲಿ ಅ,ಆ,ಇ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳ ನಾಲಿಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಅವರ ಶೈಕ್ಷಣಿಕ ಭವಿಷ್ಯ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ.

ನವಾನ್ನಪ್ರಾಶನ: ಎಳೆಯ ಕಂದಮ್ಮಗಳಿಗೆ ನವಾನ್ನಪ್ರಾಶನದ ಮೂಲಕ ಮೊದಲ ಭಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಅನ್ನಾಹಾರ ಆರಂಭಿಸಿದ ಮಗು ಮುಂದೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುವುದಿಲ್ಲ ಎಂಬುದು ನಂಬಿಕೆ.

ಈ ಬಾರಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾರಂಭ ಮಾಡಲಾಯಿತು. ದೇವಳದ ಆಡಳಿತ ಮಂಡಳಿ ಹಾಗೂ ಅರ್ಚಕವೃಂದ ಭಕ್ತಾದಿಗಳ ಅನುಕೂಲಕ್ಕಾಗಿ ಉತ್ತಮ ಸೂಕ್ತ ವ್ಯವಸ್ಥೆ ಮಾಡಿದ್ದರು./ ಕುಂದಾಪ್ರ ಡಾಟ್ ಕಾಂ ಸುದ್ದಿ/

► ಕೊಲ್ಲೂರಿನಲ್ಲಿ ವೈಭವದ ನವರಾತ್ರಿ ಉತ್ಸವ, ಪುಷ್ಪರಥೋತ್ಸವ ಸಂಪನ್ನ – https://kundapraa.com/?p=53598 .
► ಕೊಲ್ಲೂರು: ಮಹಾನವರಾತ್ರಿ ಮಹೋತ್ಸವಕ್ಕೆ ಚಾಲನೆ – https://kundapraa.com/?p=53328 .

Call us

Leave a Reply

Your email address will not be published. Required fields are marked *

one × three =