ವಿವೇಕ ಪರ್ವ ಕಾರ್ಯಕ್ರಮದಲ್ಲಿ ಹಿಂದೂತ್ವದ ವಿರಾಟ ದರ್ಶನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಮರ್ಥ ಭಾರತ ಬೈಂದೂರು ಆಶ್ರಯದಲ್ಲಿ ಜರುಗಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ‘ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭ ಅದ್ಭುತ ಯಶಸ್ಸು ಕಂಡಿದೆ. ಬೈಂದೂರಿನಲ್ಲಿ ಮೊದಲ ಭಾರಿಗೆ ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನ ವಿವೇಕಾಂನದರ ಚಿಂತನೆಗಳಿಗೆ ಕಿವಿಯಾದರು.

Call us

Call us

Visit Now

ಬೈಂದೂರು ನಗರ ಕೆಸರಿಮಯ:
ಕಾರ್ಯಕ್ರಮಕ್ಕಾಗಿ ಯಡ್ತರೆಯಿಂದ ಬೈಂದೂರು ಪೇಟೆಯ ಬಂಟಿಂಗ್ಸ್, ಬಾವುಟಗಳಿಂದ ಸಂಪೂರ್ವ ಕೆಸರಿಮಯವಾಗಿ ಮಾರ್ಪಟ್ಟಿತ್ತು. ಬೈಂದೂರಿನ ಗಾಂಧಿ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ಸಿದ್ಧಗೊಳಿಸಿಲಾಗಿತ್ತು. ಎಲ್ಲೆಡೆಯೂ ಭಗವಧ್ವಜ ರಾರಾಜಿಸುತ್ತಿದ್ದವು.

Click here

Click Here

Call us

Call us

6000 ವಿವೇಕ ಕಂಕಣ – 1500 ವಿವೇಕನಂದ ಭಾವಚಿತ್ರವಿರುವ ಟಿಶರ್ಟ್ ವಿಕ್ರಯ:
ಸ್ವಾಮಿ ವಿವೇಕಾನಂದರ ಜನ್ಮದಿನದಿಂದ ಸಮರ್ಥ ಭಾರತ ಬೈಂದೂರು ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶವಿರುವ 6000 ವಿವೇಕ ಬ್ಯಾಂಡ್ ಹಾಗೂ 1500 ಟಿಶರ್ಟ್‌ಗಳನ್ನು ಮಾರಟ ಮಾಡಿದೆ. ರಾಜ್ಯದಲ್ಲಿಯೇ ಮೊದಲೆಂಬಂತೆ 6000 ಮಂದಿ ವಿವೇಕ ಕಂಕಣ ತೊಟ್ಟಿದ್ದರು. ವಿವೇಕ ಬ್ಯಾಂಡ್ ಹಾಗೂ ಟಿಶರ್ಟ್ ಮಾರಾಟದಿಂದ ಬರುವ ಲಾಭವನ್ನು ಸಮರ್ಥ ಭಾರತ ಸಂಸ್ಥೆಯು ವಿವಿಧ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ.

ಬೃಹತ್ ಮೆರವಣಿಗೆ:
ಸಮಾವೇಶಕ್ಕೂ ಮುನ್ನ ಬೈಂದೂರು ಯಡ್ತರೆ ವೃತ್ತದಿಂದ ಗಾಂಧಿ ಮೈದಾನದವರೆಗೆ ಸ್ವಾಮಿ ವಿವೇಕಾನಂದರ ದಿವ್ಯಮೂರ್ತಿ ಹಾಗೂ ಕಲಾತಂಡದೊಂದಿಗೆ ಭವ್ಯ ಮೆರವಣೆಗೆ ನಡೆಯಿತು. ಅರಣ್ಯ ಇಲಾಖೆಯ ನಿವೃತ್ತ ಐಎಫ್‌ಎಸ್ ಜಗನ್ನಾಥ ಶೆಟ್ಟಿ ವಿವೇಕಾನಂದರ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕರುಗಳಾದ ಬಿ. ಅಪ್ಪಣ್ಣ ಹೆಗ್ಡೆ, ಲಕ್ಷ್ಮೀನಾಯರಾಯಣ, ಸಂಚಾಲಕ ಶ್ರೀಧರ್ ಬಿಜೂರು ಹಾಗೂ ಇತರರು ಜೊತೆದಿದ್ದರು.

ಹತ್ತು ಸಾವಿರ ಜನ ಭಾಗಿ:
ವಿವೇಕ ಪರ್ವ ಕಾರ್ಯಕ್ರಮಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು ಹತ್ತು ಸಾವಿರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸ್ವಯಂ ಪ್ರೇರಣೆಯಿಂದ ಸ್ವಾಮಿ ವಿವೇಕಾನಂದರ ಸ್ಮರಣೆಗೈಯಲು ಆಗಮಿಸಿದ್ದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತುಂಬಿದರು. ಒಟ್ಟಿನಲ್ಲಿ ಸೀಮಿತ ಅವಧಿಯಲ್ಲಿ ಜನರನ್ನು ಸಂಘಟಿಸಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಮರ್ಥ ಭಾರತ ಬೈಂದೂರು ಯಶಸ್ವಿಯಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸ್ವಾಮಿ ವಿವೇಕಾನಂದ ಚಿಂತನೆಯಂತೆ ವಿಶ್ವಗುರುವಾಗುತ್ತಿದೆ ಭಾರತ: ಚಕ್ರವರ್ತಿ ಸೂಲಿಬೆಲೆ

Click Here

ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಅಂಕಣಗಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಭಾರತವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಅರಿವಾಗಿದೆ. ಅಂತಹ ವಿಶೇಷ ಪ್ರಭೆಯೊಂದು ಸ್ವಾಮಿ ವಿವೇಕಾನಂದರ ತನ್ನ ಮಾತು, ಕೃತಿಯ ಮೂಲಕ ವಿಶ್ವವನ್ನು ತಲುಪಿದೆ. 154ನೇ ಜನ್ಮದಿನಾಚರಣೆಯ ಸಂದಭದಲ್ಲಿ ಭಾರತ ಹೊಸ ದಿಕ್ಕಿನತ್ತ ಸಾಗುತ್ತಿದ್ದು, ಅಂದು ಕಂಡ ಕನಸು ನನಸಾಗುತ್ತಿದೆ ಎಂದರು.

ಹಿಂದೂಗಳು ಸಹಿಷ್ಣುಗಳಲ್ಲ. ಆದರೆ ಎಲ್ಲಾ ವರ್ಗಗಳನ್ನು ಒಪ್ಪಿಕೊಳ್ಳುವ ಶ್ರೇಷ್ಠ ಜನಾಂಗವರು ಎಂದು ಎಂದು ಹಿಂದೂತ್ವವನ್ನು ಹೊಸ ಬಗೆಯಲ್ಲಿ ವ್ಯಾಖ್ಯಾನಿಸದ ಸನ್ಯಾಸಿ ಸ್ವಾಮಿ ವಿವೇಕಾನಂದರು. ದೇಶದ ಯುವಶಕ್ತಿಯನ್ನು ಬಡಿದೆಬ್ಬಿಸಿದ ವಿವೇಕಾನಂದರು ತಮ್ಮ ಚಿಂತನಾ ಲಹರಿಯಿಂದಾಗಿ ಇಂದಿಗೂ ಜೀವಂತವಾಗಿದ್ದಾರೆ ಎಂದರು.

ನೂರಾರು ವರ್ಷಗಳಿಂದ ಈ ದೇಶ ಪರಕೀಯರಿಂದ ಆಕ್ರಮಣಕ್ಕೀಡಾದರೂ ಇಂದಿಗೂ ತನ್ನ ಭವ್ಯ ಇತಿಹಾವನ್ನು ಕಾಪಾಡಿಕೊಂಡು ಬಂದಿದೆ. ಪರಕೀಯ ಆಕ್ರಮಣದಿಂದ ನಮ್ಮ ಸಂಪತ್ತು ಲೂಟಿಯಾದ ಬಗ್ಗೆ ಯೋಚನೆ ಮಾಡುವುದಿಲ್ಲ, ಆದರೆ ೭೦ ವರ್ಷಗಳಿಂದ ದೇಶದ ಸಂಪತ್ತನ್ನು ಈ ದೇಶದ ನಾಯಕರೇ ಲೂಟಿ ಮಾಡಿದ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದ ಅವರು ದೇಶದ ಮೇಲಾದ ಸಾಂಸ್ಕೃತಿಕ ಆಕ್ರಮಣಗಳು ಸಾಮಾನ್ಯವಾದುದಲ್ಲ. ನಮ್ಮ ವೇಶಭೂಷಣ, ಊಟ ತಿಂಡಿ, ಮಾತು ಬದಲಾಗುವಂತಾಯಿತು. ಆದರೆ ಎಲ್ಲವನ್ನೂ ಮೀರಿ ದೇಶ ಅಖಂಡತೆಯತ್ತ ಸಾಗುತ್ತಿರುವುದಲ್ಲದೇ ವಿಶ್ವಗುರುವಾಗುತ್ತಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಚಾಲಕ ಡಾ. ವಾಮನ ಶೆಣೈ ಪ್ರಾಸ್ತಾವಿಕ ಮಾತನಾಡಿ, ಪ್ರತಿಯೊಬ್ಬರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ತಾನು ಬೆಳೆಯಬೇಕು ಎಂಬ ಉದಾತ್ತ ಚಿಂತನೆ ಹಿಂದೂ ಧರ್ಮದಲ್ಲಿದೆ. ಯಾವ ವ್ಯಕ್ತಿ ಅನ್ಯರಿಗಾಗಿ ಬದುಕುತ್ತಾನೋ ಆತ ಸತ್ತ ಮೇಲೂ ಬದುಕಿರುತ್ತಾನೆ. ಯುವ ಜನಾಂಗದಿಂದ ಉತ್ತಮ ಕೆಲಸ ಕಾರ್ಯಗಳು ನಡೆದಾದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದರು.

ಸಮರ್ಥ ಭಾರತ ಬೈಂದೂರು ಘಟಕದ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ, ಕಾರ್ಯದರ್ಶಿ ಪ್ರದೀಪ ಕುಮಾರ ಶೆಟ್ಟಿ, ಸಹ ಕಾರ್ಯದರ್ಶಿಗಳಾದ ವಿಜಯ ಕುಮಾರ್, ಪ್ರಿಯದರ್ಶಿನಿ ದೇವಾಡಿಗ, ಸಂಚಾಲಕ ಶ್ರೀಧರ ಬಿಜೂರು, ಸಹ ಸಂಚಾಲಕ ಭೀಮೇಶ್ ಕುಮಾರ ಎಸ್. ಜಿ., ಮಾಜಿ ಶಾಸಕರಾದ ಅಪ್ಪಣ್ಣ ಹೆಗ್ಡೆ, ಕೆ. ಲಕ್ಷ್ಮೀನಾರಾಯಣ ಹಾಗೂ ಸಮರ್ಥ ಭಾರತದ ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು.

ಸಮರ್ಥ ಭಾರತ ಬೈಂದೂರು ಘಟಕದ ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ವಂದಿಸಿದರು, ಆರ್ ಜೆ ನಯನ ನಿರೂಪಿಸಿದರು.

ವೇದಿಕೆಗೆ ಮೆರಗು ನೀಡಿದ ರಂಗೋಲಿ:
ವಿವೇಕ ಪರ್ವ ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ರಚಿಸಲಾಗಿದ್ದ ಬೃಹತ್ ರಂಗೋಲಿ ಇಡೀ ವೇದಿಕೆಗೆ ರಂಗು ತುಂಬಿತ್ತು. ಮಧ್ಯದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನಿರಿಸಿ ವಿಶಿಷ್ಟವಾಗಿ ರಂಗೋಲಿ ಹಾಕಲಾಗಿತ್ತು. ಡಾ. ಭಾರತಿ ಮರವಂತೆ ಅವರು ಈ ವಿಶಿಷ್ಟ ರಂಗೋಲಿಯನ್ನು ರಚಿಸಿದ್ದರು.

Leave a Reply

Your email address will not be published. Required fields are marked *

one × 4 =