ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವ್ಯಾಪಕ ಪ್ರಚಾರ ಪಡೆದಿದ್ದ ವಾರಾವಧಿಯ ಉಪ್ಪುಂದ ಪ್ರದೇಶದ ಸ್ವಯಂಪ್ರೇರಿತ ಬಂದ್ ಭಾನುವಾರಕ್ಕಷ್ಟೆ ಸೀಮಿತವಾಗಿ ಅಕಾಲಿಕ ಅಂತ್ಯ ಕಂಡಿದೆ. ಅಂತಿಮ ಕ್ಷಣದಲ್ಲಿ ಹಲವು ವ್ಯಾಪಾರಿಗಳಿಂದ ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ವಿರೋಧ ಇದಕ್ಕೆ ಕಾರಣ ಎಂದು ಸಂಘಟನೆಯ ಮುಂಚೂಣಿಯಲ್ಲಿದ್ದವರು ತಿಳಿಸಿದ್ದಾರೆ.
ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕಿನ ವಿಚಾರದಲ್ಲಿ ಜನರ ನಿರ್ಲಕ್ಷ್ಯದ ವಿರುದ್ಧ ಜಿಲ್ಲೆಯ ಜನರ ಗಮನ ಸೆಳೆದು, ಅವರನ್ನು ಎಚ್ಚರಿಸುವ ಮಹಾತ್ವಾಕಾಂಕ್ಷೆಯಿಂದ ಉಪ್ಪುಂದ, ಬಿಜೂರು, ನಂದನವನ ಮತ್ತು ಕೆರ್ಗಾಲು ಪ್ರದೇಶದಲ್ಲಿ ಭಾನುವಾರದಿಂದ ಮುಂದಿನ ಭಾನುವಾರದ ವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ತಯಾರಿ ನಡೆದಿತ್ತು. ಶನಿವಾರ ರಾತ್ರಿ ನಡೆದ ವ್ಯಾಪಾರಸ್ಥರ ಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ಕಂಡು ಬಂದುದರಿಂದ ಭಾನುವಾರ ಮಾತ್ರ ಸಾಂಕೇತಿಕ ಬಂದ್ ನಡೆಸಿ, ಸೋಮವಾರದಿಂದ ಎಂದಿನಂತೆ ವ್ಯವಹಾರ ನಡೆಸಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.
► ಬಿಜೂರಿನಿಂದ- ಉಪ್ಪುಂದ, ಕೆರ್ಗಾಲು ತನಕ 1 ವಾರ ಸ್ವಯಂಪ್ರೇರಿತ ಬಂದ್: ಪರ-ವಿರೋಧ ಪ್ರತಿಕ್ರಿಯೆ – https://kundapraa.com/?p=38400 .
ಇದನ್ನೂ ಓದಿ:
► ಉಡುಪಿ ಜಿಲ್ಲೆ: ಭಾನುವಾರ 13 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38382 .
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .