ಸುಳ್ಳು ಸುದ್ದಿ ತಡೆಗೆ ವಾಟ್ಸಪ್ ನಿಯಮ: ಒಂದು ಬಾರಿ ಒಬ್ಬರಿಗೆ ಮಾತ್ರ ಫಾರ್ವರ್ಡ್!

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ದೇಶದಲ್ಲಿ  ಸುಳ್ಳು ಸುದ್ದಿಗಳ ಆರ್ಭಟ ಜೋರಾಗಿದೆ. ಪ್ರತಿ ದಿನವೂ ಅಂತೆ ಕಂತೆಗಳ ಸಂತೆಯೇ ಸೃಷ್ಟಿಯಾಗುತ್ತಿದೆ. ಮನೆಯಲ್ಲೇ ಕುಳಿತು ಕೊರೊನಾ ವೈರಸ್ ಕುರಿತಾದ ಸುದ್ದಿಗಳನ್ನು ನೋಡುತ್ತಿರುವ ಜನರಿಗೆ,  ಫೇಕ್‌ ನ್ಯೂಸ್‌ಗಳು ಎದೆಬಡಿತ ಹೆಚ್ಚಿಸುತ್ತಿವೆ. ಈ ವದಂತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾಟ್ಸಪ್ ಕಂಪನಿ ಹಲವು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ.

Click Here

Call us

Call us

ವಾಟ್ಸಪ್‌ನಲ್ಲಿ ಒಂದೇ ಬಾರಿ ಐದು ಮಂದಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡುವ ಅವಕಾಶವಿತ್ತು. ಇದೀಗ ಐವರ ಬದಲು ಕೇವಲ ಒಬ್ಬರಿಗೆ ಮಾತ್ರ ಫಾರ್ವರ್ಡ್‌ ಮಾಡಬಹುದಾಗಿದೆ. ಇದು ವಾಟ್ಸಪ್ ವಿಧಿಸುತ್ತಿರುವ ಪ್ರಮುಖ ನಿರ್ಬಂಧವಾಗಿದೆ. ಕೊರೊನಾ ಆತಂಕ ದೂರವಾಗುವವರೆಗೂ ಫಾರ್ವರ್ಡ್‌ ಸಂದೇಶಗಳಿಗೆ ವಿಧಿಸಲಾಗಿರುವ ಮಿತಿ ಮುಂದುವರಿಯಲಿದೆ.

Click here

Click Here

Call us

Visit Now

ಬಳಕೆದಾರರು ತಮಗೆ ಬರುವ ಸಂದೇಶಗಳನ್ನು ಪರಾಮರ್ಶಿಸಿ ಜವಾಬ್ದಾರಿಯುತವಾಗಿ ವರ್ತಿಸಲಿ ಎಂಬುದು ಮಾತ್ರ ಕಂಪನಿಯ ಉದ್ದೇಶವೇ ಹೊರತು ಬಳಕೆದಾರರನ್ನು ನಿರುತ್ಸಾಹಗೊಳಿಸುವುದಲ್ಲ’ ಎಂದು ವಾಟ್ಸಪ್‌ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಾಟ್ಸಪ್‌ ಸಂದೇಶಗಳು ರಾಜಕೀಯ ಉದ್ದೇಶಕ್ಕೆ ದುರ್ಬಳಕೆಯಾಗುತ್ತಿವೆ, ವದಂತಿಗಳು ಹರಡಲು ಸಹಾಯಕವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2019ರ ಜನವರಿಯಿಂದ ಫಾರ್ವರ್ಡ್‌ ಮೆಸೇಜ್‌ಗಳ ಮಿತಿಯನ್ನು ಐದು ಮಂದಿಗೆ ಸೀಮಿತಗೊಳಿಸಿತ್ತು. ಅದಕ್ಕೂ ಮೊದಲು ಒಮ್ಮೆಲೇ 20 ಮಂದಿಗೆ ಸಂದೇಶ ಫಾರ್ವರ್ಡ್‌ ಮಾಡಲು ಅವಕಾಶವಿತ್ತು.

 

Call us

Leave a Reply

Your email address will not be published. Required fields are marked *

3 × 5 =