ಜೂ.18ರಂದು ಯಕ್ಷ ಸಮಾಗಮ. ವಿಶೇಷ ಸಂಯೋಜನೆಯಲ್ಲಿ ಯುಕ್ತಿ, ಶಿಷ್ಯ, ಭಕ್ತ ವಿಜಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರಿಗೆ ಯಕ್ಷರಸವನ್ನು ಸವಿಯುವ ಸದಾವಕಾಶ ಸಾಕಷ್ಟು ಒದಗಿ ಬರುತ್ತಿದೆ. ಜೂನ್. 18ರ ಶನಿವಾರ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಸಮಾಗಮ ನಡೆಯಲಿದೆ.

Click Here

Call us

Call us

ಸುದೀಪ್ ಶೆಟ್ಟಿ ಹೆಬ್ಬಾಡಿ ಹಾಗೂ ಮೋಹನ್ ಅಂಪಾರು ಅವರ ಸಂಯೋಜನೆಯಲ್ಲಿ ಮೂಡಿಬರುತ್ತಿರುವ ಯಕ್ಷಗಾನದಲ್ಲಿ ಮೂರು ಪ್ರಸಂಗಗಳಿದ್ದು ಯುಕ್ತಿ ವಿಜಯದಲ್ಲಿ ತೆಂಕು ಬಡಗಿನ ಸವ್ಯಸಾಚಿ ರವೀಂದ್ರ ಶೆಟ್ಟಿ ಹೊಸಂಗಡಿ ಅವರ ಗಾನ, ಸೀತರಾಂ ಕುಮಾರ್, ಅರುಣ್ ಕುಮಾರ್ ಜಾರ್ಕಳ, ಕ್ಯಾದಗಿ ಮಹಾಬಲೇಶ್ವರ ಭಟ್ ಅವರುಗಳ ಹಾಸ್ಯ ರಂಜಿಸಲಿದೆ. ಶಿಷ್ಯ ವಿಜಯದಲ್ಲಿ ಅಂಕೋಲ ಮತ್ತು ಹಿಲ್ಲೂರರ ಸ್ವರ್ಧಾತ್ಮಕ ಭಾಗವತಿಕೆ, ಯಕ್ಷರಂಗದ ಅನುಭವಿ ಕಲಾವಿದರಾದ ಆರ‍್ಗೋಡು, ಕೃಷ್ಣಯಾಜಿ, ಪ್ರಸನ್ನ ಶಶಿಕಾಂತ್ ಅವರುಗಳ ಪಾತ್ರ ಮನಮೆಚ್ಚಲಿದೆ. ಭಕ್ತ ವಿಜಯದಲ್ಲಿ ಅಮೀನ್ ಹಾಗೂ ಮಯ್ಯರ ಸ್ನೇಹಪೂರ್ವಕ ದ್ವಂದ್ವ ಒಂದೆಡೆ, ಜಲವಳ್ಳಿ ಮಂಕಿ, ಬೆದ್ರಾಡಿ ಅವರುಗಳ ಮಾತು, ಗತ್ತು, ಗಾಂಭೀರ್ಯ ಯಕ್ಷಗಾನದ ಮೆರಗು ಹೆಚ್ಚಿಸಲಿದೆ.

Click here

Click Here

Call us

Visit Now

ಹೀಗೆ ಹತ್ತಾರು ವಿಶೇಷತೆಗಳಿರುವ ‘ಯಕ್ಷ ಸಮಾಗಮ’ ಕಲಾ ಪ್ರೇಕ್ಷಕರನ್ನು ರಂಜಿಸಲಿದೆ. ಮುಂಗಡ ಟಿಕೇಟ್‌ಗಳಿಗಾಗಿ 9591311056, 7022432062

Leave a Reply

Your email address will not be published. Required fields are marked *

2 × 5 =