ಯಕ್ಷಗಾನದಲ್ಲಿ ತೊಡಗಿಕೊಳ್ಳುವುದರಿಂದ ಬೌದ್ಧಿಕ & ಅಂಗಿಕ ದೃಢತೆ ಸಾಧ್ಯ: ಅಶ್ವಿನಿ ಕೊಂಡದಕುಳಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವರ್ಣರಂಜಿತ ವೇಷ, ಸಂಗೀತ, ನೃತ್ಯ, ಅಭಿನಯ, ಮಾತು ಮೇಳೈಸಿ ಪ್ರದರ್ಶನಗೊಳ್ಳುವ ಯಕ್ಷಗಾನ ಪರಿಪೂರ್ಣ ಕಲೆ. ಇದರಲ್ಲಿ ತೊಡಗುವವರಿಗೆ ದೈಹಿಕ, ಬೌದ್ಧಿಕ, ಆಂಗಿಕ ದೃಢತೆ ಮೈಗೂಡುತ್ತದೆ ಎಂದು ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಹೇಳಿದರು.

Call us

ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ, ಸಂಘ ಸಾಧನಾ ಸಮಾಜ ಸೇವಾ ವೇದಿಕೆ ಸಹಭಾಗಿತ್ವದಲ್ಲಿ ನಡೆಸುವ ಯಕ್ಷಗಾನ ತರಬೇತಿ ಶಿಬಿರವನ್ನು ಅಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಕ್ಷಗಾನ ಕಲಿಯುವುದರಿಂದ ಕಲೆ ಕರಗತ ಮಾಡಿಕೊಳ್ಳುವುದರೊಂದಿಗೆ ಧೈರ್ಯ, ಮಾತಿನ ಕಲೆ, ಏಕಾಗ್ರತೆ ಸಾಧಿಸುತ್ತಾರೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ರವಿ ಮಡಿವಾಳ ಸ್ವಾಗತಿಸಿದರು. ನಿರೂಪಿಸಿದ ಕರುಣಾಕರ ಆಚಾರ್ ವಂದಿಸಿದರು. ಕಲಾವಿದ ಉದಯ ಕಡಬಾಳ್, ಭಾಗವತ-ಗುರು ದೇವರಾಜ ದಾಸ್, ಉದಯ ಪೂಜಾರಿ, ಸಾಧನಾ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಇದ್ದರು.

 

Leave a Reply

Your email address will not be published. Required fields are marked *

3 × three =