ಎ.16 ರಿಂದ 19: ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಯಡ್ತರೆ ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಎಪ್ರಿಲ್ 16ರಿಂದ 19ರ ತನಕ ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವ ಜರುಗಲಿದೆ.

ವೇ. ಮೂ. ಜ್ಯೋತಿಷಿ ಭಟ್ಕಳ ರಮೇಶ ಭಟ್ಟರ ಆದ್ವರ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ದಿನಾಂಕ ಎ.16ರ ಮಂಗಳವಾರ ಬೆಳಿಗ್ಗೆ ಸಾಮೂಹಿಕ ದೈವ ದೇವರ ಪ್ರಾರ್ಥನೆ, ಮಹಾಸಂಕಲ್ಪ, ಧ್ವಜಾರೋಹಣ, ಗಣಹೋಮ ಮೊದಲಾದ ಧಾರ್ಮಿಕ ಕಾರ್ಯಗಳು, ಸಂಜೆ ವಿವಿಧ ಹೋಮ ಹವನಾದಿಗಳು ಇರಲಿವೆ. ಎ.17ರ ಬುಧವಾರ ಬೆಳಿಗ್ಗೆ ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ವಿವಿಧ ಪೂಜೆ ಹಾಗೂ ಹೋಮಗಳು ನಡೆಯಲಿದೆ. ಎ.18ರ ಗುರುವಾರ ಬೆಳಿಗ್ಗೆ ಬಿಂಬ ಶುದ್ಧಿ ಹೋಮ, ಕಲಶ ಸ್ಥಾಪನೆ, ಸಂಜೆ ಶ್ರೀ ದೈವಗಳ ಬಿಂಬ ಪ್ರತಿಷ್ಠಾ ಸಹಿತ ಜೀವ ಕುಂಭಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದೆ. ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ ಎ.19ರ ಶುಕ್ರವಾರ ಬೆಳಿಗ್ಗೆ ಅಷ್ಟೋತ್ತರ ಪರಿಕಲಸ ಸಹಿತ ಬ್ರಹ್ಮಕಲಶಾಭಿಷೇಕ, ಮಹಾ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಧ್ವಜ ಅವರೋಹಣ ಮೊದಲಾದ ಕಾರ್ಯಕ್ರಮಗಳು ಜರುಗಲಿದ್ದು ಅಂದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿದೆ.

ಅದೇ ದಿನ ಸಂಜೆ 6:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಕಲಾವಿದರಿಂದ ನೃತ್ಯ ಗಾನ ವೈಭವ ನಂತರ ಆಹ್ವಾನಿತ ಯಕ್ಷ ದಿಗ್ಗಜರ ಕೂಡುವಿಕೆಯಿಂದ ಯಕ್ಷಗಾನ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಕ್ಕೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ ಮತ್ತು ಅರ್ಚಕರು, ಕಾರ್ಯದರ್ಶಿ, ಆಡಳಿತ ಮೊಕ್ತೇಸರರು ಹಾಗೂ ಸದಸ್ಯರು ತಿಳಿಸಿದ್ದಾರೆ.

ಉದಾರ ದೇಣಿಗೆಗೆ ಮನವಿ:
ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಸ್ಥಾನದ ಜೀಣೋದ್ಧಾರದ ಪುಣ್ಯಕಾರ್ಯಕ್ಕೆ ದಾನಿಗಳಿಗಳಿಂದ ಉದಾರ ನೆರವು ನಿರೀಕ್ಷಿಸಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಡ್ತರೆ ಬೈಂದೂರು ಶಾಖೆಯಲ್ಲಿರುವ ದೈವಸ್ಥಾನದ ಖಾತೆಗೆ ದೇಣಿಗೆ ಸಂದಾಯ ಮಾಡಬಹುದಾಗಿದೆ.
ಖಾತೆ ಸಂಖ್ಯೆ: 64113931775
ಐಎಫ್‌ಎಸ್‌ಸಿ ಕೋಡ್: SBIN0040623

Leave a Reply

Your email address will not be published. Required fields are marked *

nine + 20 =