ಶಿರೂರು ಜಿಪಂ ಕ್ಷೇತ್ರ: ಕಣದಲ್ಲಿ ಯುವ ನಾಯಕ ಸುರೇಶ್ ಬಟವಾಡಿ

Click Here

Call us

Call us

ಕುಂದಾಪುರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ, ಯುವ ನಾಯಕ ಸುರೇಶ್ ಬಟವಾಡಿ ಈ ಭಾರಿ ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿದ್ದಾರೆ. ಹಾಲಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಬಟವಾಡಿ ಅವರು ಪಕ್ಷನಿಷ್ಠ ಕಾರ್ಯಕರ್ತನಾಗಿ, ಬೈಂದೂರು, ಪಡುವರಿ, ಶಿರೂರು ಭಾಗದ ಯುವ ಸಂಘಟಕರಾಗಿ ಎಲ್ಲಾ ಕ್ಷೇತ್ರದಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಜನರ ನಡುವೆಯೇ ಇದ್ದು ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಬಂದವರು.

Call us

Call us

Click Here

Visit Now

ಪಡುವರಿ ಕಸ್ಟಮ್ ರಸ್ತೆಯ ದಿ. ಶೇಷಯ್ಯ ಶೇರುಗಾರ್ ಅವರ ಪುತ್ರರಾದ ಸುರೇಶ್ ಬಟವಾಡಿ ಅವರು ಬಿಕಾಂ ಪಧವೀಧರರು. ಯುವಕರಿರುವಾಗಲೇ ಸಂಘಟನಾ ಗುಣವನ್ನು ಮೈಗೂಡಿಸಿಕೊಂಡು ಬಂದಿದ್ದ ಬಟವಾಡಿ ಅವರು ಈ ಭಾಗದ ಸಾಮಾಜಿಕ, ಸಹಕಾರಿ, ಸಾಂಸ್ಕೃತಿಕ, ಕ್ರೀಡೆ, ರಾಜಕೀಯ, ಧಾರ್ಮಿಕ ಕ್ಷೇತ್ರದ ತೊಡಗಿಸಿಕೊಂಡು ಹೆಸರು ಮಾಡಿದವರು. ಕುಂದಾಪುರ ಡಾಟ್ ಕಾಂ ಸುದ್ದಿ

Click here

Click Here

Call us

Call us

ತನ್ನ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಪಡುವರಿ ಗ್ರಾಮ ಪಂಚಾಯತ್‌ಗೆ ಮೂರು ಭಾರಿ ಆಯ್ಕೆಯಾಗಿರುವ ಬಟವಾಡಿ ಅವರು ಗ್ರಾಪಂ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಈ ಅವಧಿಯಲ್ಲಿ ಸದಸ್ಯರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದವರು. ಟೆಂಪೋ ರಿಕ್ಷಾ ಯೂನಿಯನ್ ವಿವಿಧೋದ್ದೇಶ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಉಡುಪಿ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೆಶನ್ ಕಾರ್ಯದರ್ಶಿಯಾಗಿ, ಎಪಿಎಂಸಿಯ ಮಾಜಿ ನಾಮ ನಿರ್ದೇಶಿತ ಸದಸ್ಯರಾಗಿ, (ಕುಂದಾಪುರ ಡಾಟ್ ಕಾಂ ಸುದ್ದಿ) ಶ್ರೀ ಸೇನೇಶ್ವರ ದೇವಸ್ಥಾನ, ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಉಪಾಧ್ಯಕ್ಷರಾಗಿ, ಮಿತ್ರ ಮಂಡಳಿ ಅಧ್ಯಕ್ಷ-ಕಾರ್ಯದರ್ಶಿಯಾಗಿಯಾಗಿ, ರಾಮಕ್ಷತ್ರಿಯ ಸಂಘದ ಮಾಜಿ ಅಧ್ಯಕ್ಷರಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮಾತನಾಡಬಲ್ಲ ಛಾತಿ ಇರುವುದರಿಂದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತು ನೀಡುವ ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರೆ. ಇದು ಕುಂದಾಪುರ ಡಾಟ್ ಕಾಂ ಸುದ್ದಿ

ತನ್ನ ಎದುರಿನ ವ್ಯಕ್ತಿ ಯಾರೇ ಇರಲಿ ಅವರ ಮಾತನ್ನು ಏಕಚಿತ್ತದಿಂದ ಆಲಿಸುವ ತಾಳ್ಮೆ, ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸುವ ನಾಯಕತ್ವ ಗುಣ, ತನ್ನೂರಿನ ಅಭಿವೃದ್ಧಿಗಾಗಿ ಶ್ರಮಿಸುವ ತುಡಿತ ಈ ಎಲ್ಲಾ ಕಾರಣಗಳಿಂದಾಗಿ ಸುರೇಶ್ ಬಟವಾಡಿ ಬಿಜೆಪಿ ಪಕ್ಷದಿಂದ ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸ್ವರ್ಧೆಗಿಳಿದಿದ್ದಾರೆ.  ಲೇಖನ: ಸುನಿಲ್ ಹೆಚ್. ಜಿ. ಬೈಂದೂರು

ಪ್ರಕಟಣೆ

Leave a Reply

Your email address will not be published. Required fields are marked *

five × 5 =