ಜ.19ರಿಂದ ಕರಾವಳಿ ಕರ್ನಾಟಕದ ಮೊದಲ ವಿದ್ಯುತ್ ಚಾಲಿತ ರೈಲು ಸಂಚಾರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರಾವಳಿ ಕರ್ನಾಟಕದ ಮೊದಲ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸಂಚಾರ ಜ.19ರಿಂದ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಕಾರವಾರದಿಂದ ಮಂಗಳೂರು ಜಂಕ್ಷನ್ ತನಕ ವಿದ್ಯುತ್ ಚಾಲಿತ ರೈಲು ಸಂಚಾರವಿರಲಿದೆ.

Call us

ಈಗಾಗಲೇ ಇರುವ ಯಶವಂತಪುರ ಕಾರವಾರ (16515/16516) ಎಕ್ಸ್‌ಪ್ರೆಸ್ ಹಗಲು ರೈಲು ಇನ್ನು ಕಾರವಾರದಿಂದ ಮಂಗಳೂರು ಜಂಕ್ಷನ್ ತನಕ ವಿದ್ಯುತ್ ಚಾಲಿತ ರೈಲಾಗಿ ಪರಿವರ್ತನೆಗೊಳ್ಳಲಿದೆ. ಮುಂದೆ ಡಿಸೆಲ್ ಇಂಜಿನ್ ಜೋಡಿಸಿಕೊಂಡು ಯಶವಂತಪುರದ ತನಕ ಸಂಚಾರ ಮುಂದುವರಿಲಿದೆ.

ಕಾರವಾರ – ಮುರುಡೇಶ್ವರ – ಬೈಂದೂರು – ಕುಂದಾಪುರ – ಉಡುಪಿ – ಮಂಗಳೂರು ಜಂಕ್ಷನ್ – ಸುಬ್ರಹ್ಮಣ್ಯ ರೋಡ್ – ಸಕಲೇಶಪುರ – ಹಾಸನ – ಯಡಿಯೂರು ಮಾರ್ಗದಲ್ಲಿ ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್ ಸಂಚರಿಸಲಿದೆ.

Call us

ಕಾರವಾರದಿಂದ ಮಂಗಳೂರು ಜಂಕ್ಷನ್ ತನಕದ ವಿದ್ಯುತ್ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಮಂಗಳೂರು ಜಂಕ್ಷನ್’ನಿಂದ ಯಶವಂತಪುರದ ತನಕ ಇ-ಲೋಕೋಮೋಟಿವ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಜೋಡಿಸಲಾಗುತ್ತದೆ. ಡೀಸೆಲ್ನಿಂದ ಉಂಟಾಗುತ್ತಿದ್ದ ವಾಯುಮಾಲಿನ್ಯವನ್ನು ಇ-ಲೋಕೋಮೋಟಿವ್ ತಗ್ಗಿಸಲಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

4 × 1 =