Kundapra.com ಕುಂದಾಪ್ರ ಡಾಟ್ ಕಾಂ

ಫೆ21ಕ್ಕೆ ಮಜಾ ಟಾಕೀಸ್ ಶೋನಲ್ಲಿ ಕುಂದಾಪುರ ರೂಪಕಲಾ ತಂಡ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕನ್ನಡದ ಪ್ರಸಿದ್ಧ ಶೋ ಮಜಾ ಟಾಕೀಸ್‌ನಲ್ಲಿ ಕುಂದಾಪುರದ ಮೂರು ಮುತ್ತು ಖ್ಯಾತಿಯ ರೂಪಕಲಾ ತಂಡದ ಭಾಗವಹಿಸಿದ್ದು ಕಾರ್ಯಕ್ರಮವು ಫೆ.21ರ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಬೇರೆ ಬೇರೆ ನಟರನ್ನು ಶೋನಲ್ಲಿ ಕಾಣುತ್ತಿದ್ದ ಕುಂದಾಪುರಿಗರು ಈಗ ಕುಂದಾಪುರದ ಫೇವರಿಟ್ ನಾಟಕ ತಂಡದ ಮೂವರು ಕಲಾವಿದರು ಭಾಗವಹಿಸಿರುವುದನ್ನು ನೋಡಲು ಕುತೂಹಲಿಗರಾಗಿದ್ದಾರೆ. 20 ದಿನಗಳ ಹಿಂದೆ ರೂಪಕಲಾ ತಂಡದ ಸತೀಶ್ ಪೈ, ಸಂತೋಷ್ ಪೈ, ಅಶೋಕ್ ಶಾನುಭೋಗ್ ಹಾಗೂ ಇತರರು ಭಾಗವಹಿಸಿರುವ ಬಗ್ಗೆ ಕುಂದಾಪ್ರ ಡಾಟ್ ಕಾಂ ನಲ್ಲಿ ಪ್ರಕಟಗೊಂಡ ವರದಿಗೆ ನಿರೀಕ್ಷೆಗೂ ಮೀರಿ ಜನರು ಸ್ಪಂದಿಸಿದ್ದರು. ಅಂದಿನಿಂದಲೂ ಶೋ ಯಾವಾಗ ಎಂಬ ಪ್ರಶ್ನೆ ವಾಟ್ಸಪ್ ಹಾಗೂ ಮೇಲ್ ಮೂಲಕ ಬರುತ್ತಲೇ ಇದ್ದವು. ಇದೀಗ ಕುತೂಹಲ ತಣಿಯುವ ದಿನ ಬಂದಿದೆ. ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಅವರೊಂದಿಗೆ ಕುಳ್ಳಪ್ಪು ತಂಡ ಹೇಗೆ ತರ‍್ಲೆ ಮಾಡಿದ ಅಂತ ನೋಡಲು ಫೆ. 21ರ ಭಾನುವಾರ ಮಿಸ್ ಮಾಡದೇ ಶೋ ನೋಡಿ.

ಕುಂದಾಪ್ರ ಡಾಟ್ ಕಾಂ ಮೊಬೈಲ್ App ಡೌನ್ಲೋಡ್ ಮಾಡಿಕೊಳ್ಳಲು Click Here

ಇದನ್ನೂ ಓದಿ:
* ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್‌ನಲ್ಲಿ ಕುಂದಾಪುರದ ಮೂರು ಮುತ್ತುಗಳು! – http://kundapraa.com/?p=10686

* ರೂಪಕಲಾ ಕುಂದಾಪುರ – ಕಲಾಪ್ರಿಯರಿಗೆ ಹಾಸ್ಯದ ರಸದೌತಣ ಬಡಿಸಿದ ನಾಟಕ ಸಂಸ್ಥೆ –  http://kundapraa.com/?p=2225

IMG-20160217-WA0148

Exit mobile version