ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ
ಕುಂದಾಪುರ: ಅರಬ್ಬೀ ಸಮುದ್ರದ ಅಬ್ಬರ, ಗೋಡೆ ಕಟ್ಟಿದಂತೆ ನಿಂತ ಪಶ್ಚಿಮಘಟ್ಟ. ಇದರ ನಡುವೆ ಮಂದಗಾಮಿನಿಯಾಗಿ ಹರಿವ ಸೌಪರ್ಣಿಕಾ ನದಿ ತ್ರಾಸಿ ಜಿಲ್ಲಾ ಪಂಚಾಯಿತಿ ವೈಶಿಷ್ಠ್ಯ. ತ್ರಾಸಿ ಜಿಲ್ಲಾ ಪಂಚಾಯಿತಿ ನಾಗರಿಕರು ತ್ರಾಸುದಾಯಕ ಕೆಲಸ ಮಾಡುವ ಹಿನ್ನೆಲೆಯಲ್ಲಿ ತ್ರಾಸಿ ಹೆಸರು ಬರಲು ಕಾರಣ. ಮೀನುಗಾರಿಕೆ ವೃತ್ತಿ ಮತ್ತು ಕೃಷಿ ಪ್ರಮುಖ ಉದ್ಯೋಗ. ರಾಷ್ಟ್ರೀಯ ಹೆದ್ದಾರಿ-66 ತ್ರಾಸಿ ಜಿಪಂ. ಸೀಳಿಕೊಂಡು ಸಾಗುತ್ತದೆ.
ತ್ರಾಸಿ ಜಿಪಂ. ಹಿಂದೆ ಅಭಿವೃದ್ಧಿಯ ಹಿನ್ನೆಡೆ ಕಂಡಿದ್ದರೂ, ಪ್ರಸಕ್ತ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದಿದ್ದರೂ ಸಾಗ ಬೇಕಾದ ದೂರ ಬಹಳವಿದೆ. ಪ್ರಮುಖ ಪ್ರವಾಸಿ ತಾಣಗಳಿದ್ದರೂ, ಪ್ರವಾಸಿಗರ ಸೆಳೆಯುವಲ್ಲಿ ತ್ರಾಸಿ ಜಿಪಂ. ವಿಫಲವಾಗಿದೆ. ಆದರೆ ತ್ರಾಸಿ ಜಿಪಂ. ಕುಡಿಯುವ ನೀರಿನ ಸಮಸ್ಯೆ ನೀಗಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು ಕ್ಷೇತ್ರದ ಪ್ಲೆಸ್ ಪಾಯಿಂಟ್. ಗಂಗೊಳ್ಳಿ ಬಂದರು ಪ್ರದೇಶದ ಹೂಳೆತ್ತದೆ ಸದಾ ಸಾವು ನೋವು ಸಂಭವಿಸುತ್ತಲೇ ಇರೂದು ತ್ರಾಸಿ ಹಿನ್ನಡೆ.
ತ್ರಾಸಿ ಬೀಚ್ ಸೂರ್ಯಾಸ್ತಮಾನಕ್ಕೆ ಪೇಮಸ್ ಆಗಿದ್ದು, ಸೌಪರ್ಣಿಕಾ ಮತ್ತು ಅರಬ್ಬೀ ಸಮುದ್ರ ನಡುವೆ ಸಾಗಿ ಹೋಗುವ ರಾಷ್ಟ್ರೀಯ ಹೆದ್ದಾರಿ ಪ್ರಮುಖ ಆಕರ್ಷಣೆ ಕೇಂದ್ರ. ಹಾಗೆ ಸೌಪರ್ಣಿಕಾ ನದಿ ಒಡಲು ಸಾಹಸ ಜಲ ಕ್ರೀಡೆಗೆ ಹೇಳಿಮಾಡಿಸಿದಂತೆ ಇದ್ದರೂ ಉದ್ದಾರವಾಗಿಲ್ಲ. ಸೂರ್ಯಾಸ್ತಮಾನ ಕೂತು ನೋಡುವ ಅನುಕೂಲ ವೀಕ್ಷಕರಿಗೆ ಇಲ್ಲ. ಪ್ರವಾಸಿಗರಿಗೆ ಊಟ, ವಸತಿ ವ್ಯವಸ್ಥೆಯೂ ಇಲ್ಲ. ಮಕ್ಕಳ ಉದ್ಯಾವನ ಅಭಿವೃದ್ಧಿ ಅನುದಾನ ಖರ್ಚಿಗಷ್ಟೇ ಸೀಮಿತವಾಗಿದ್ದು, ಮಕ್ಕಳಿಗೆ ಒದಗಿ ಬಂದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದರೆ ತ್ರಾಸಿ ಶ್ರೀಮಂತ ಜಿಲ್ಲಾ ಪಂಚಾಯತಿ ಆಗುವ ಎಲ್ಲಾ ಲಕ್ಷಣಗಳಿದ್ದರೂ, ಹತ್ತರಲ್ಲಿ ಹನ್ನೊಂದಾಗಿದೆ. ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ
ಸಮಸ್ಯೆ :
*ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದೂ, ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷೆಯಿಂದ ಹಿತ್ತಲಗಿಡಿ ಮದ್ದಲ್ಲ ಎಂಬಂತಿದೆ.
*ತ್ರಾಸಿ ಬೀಚ್ ಕಡಲು ಕೊರೆತ, ಸೌಪರ್ಣಿ ನದಿಯಲ್ಲಿ ಸಾಹಸ ಜಲಕ್ರೀಡೆಗೆ ಅವಕಾಶವಿದ್ದರೂ ಆಗದ ಅಭಿವೃದ್ಧಿ.
*ಕುಡಿಯುವ ನೀರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಮೀನುಗಾರಿಕಾ ಸಮಸ್ಯೆ, ಉದ್ಯೋಗ ಅವಕಾಶ ಕಲ್ಪಿಸುವ ಯೋಜನೆಗಳ ಕೊರತೆ.
ನೆರೆ, ಕಿಂಡಿ ಆಣೆಕಟ್ಟು ಹಿನ್ನೀರು, ಸೂರ್ಯಸ್ತಮಾನ ವೀಕ್ಷಣೆಗೆ ಇಲ್ಲದ ಅವಕಾಶ, ಲೈಟ್ ಹೌಸ್, ಬ್ರೇಕ್ ವಾಟರ್, ಬಂದರು ತ್ರಾಸಿ ಜಿಪಂ. ಪ್ರಮುಖ ಸಮಸ್ಯೆ. ನಿರ್ಲಕ್ಷೆಗೆ ಒಳಗಾದ ತ್ರಾಸಿ ಮಕ್ಕಳ ಉದ್ಯಾನವನ, ಅಲಕ್ಷಕ್ಕೆ ಸಿಕ್ಕ ಐತಿಹಾಸಿಕ ಕಡು ಕೆರೆ.
ಚುನಾವಣೆ ಕ್ಷೇತ್ರಗಳು :
ತ್ರಾಸಿ, ಹೊಸಾಡು, ಗುಜ್ಜಾಡಿ, ಗಂಗೊಳ್ಳಿ, ಕಟ್‌ಬೇಲ್ತೂರು, ಹೆಮ್ಮಾಡಿ, ದೇವಲ್ಕುಂದ ಗ್ರಾಪಂಗಳು.
ಬಿಜೆಪಿ ಬೆಂಬಲಿತ : ಗುಜ್ಜಾಡಿ, ಗಂಗೊಳ್ಳಿ.
ಕಾಂಗ್ರೆಸ್ ಬೆಂಬಲಿತ : ತ್ರಾಸಿ, ಹೊಸಾಡು, ಕಟ್‌ಬೇಲ್ತೂರು, ಹೆಮ್ಮಾಡಿ.