ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೇ, ಕಾಂಗ್ರೆಸ್ ಎರಡು ಸ್ಥಾನದಲ್ಲೂ ಜಯ ಸಾಧಿಸಿದೆ. ಕಂಬದಕೋಣೆ, ಕಾವ್ರಾಡಿ ಕಾಂಗ್ರೆಸ್ ಪಾಲಾದರೆ, ಶಿರೂರು, ಬೈಂದೂರು, ತ್ರಾಸಿ, ವಂಡ್ಸೆ, ಸಿದ್ದಾಪುರ, ಹಾಲಾಡಿ, ಕೋಟೇಶ್ವರ ಬೀಜಾಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಜಿಪಂ ಮಾಜಿ ಸದಸ್ಯೆ ಸಾಧು ಎಸ್.ಬಿಲ್ಲವ, ಮದನ ಕುಮಾರ್, ಮಂಜಯ್ಯ ಶೆಟ್ಟಿ ಹರ್ಕೂರು, ಸಂಪಿಗೇಡಿ ಸಂಜೀವ ಶೆಟ್ಟಿ, ಮಾಜಿ ಜಿಪಂ ಸದಸ್ಯ ಅನಂತ ಮೋವಾಡಿ, ಜಿಪಂ ಮಾಜಿ ಸದಸ್ಯ ಸಂತೋಷ ಕುಮಾರ್ ಶೆಟ್ಟಿ ಸೋತ ಪ್ರಮುಖರಾದರೆ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ, ಮಾಜಿ ಜಿಪಂ ಉಪಾಧ್ಯಕ್ಷ ರಾಜು ದೇವಾಡಿಗ, ಮಾಜಿ ಕುಂದಾಪುರ ತಾಪಂ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್ ಗೆದ್ದ ಪ್ರಮುಖರು. ಕುಂದಾಪ್ರ ಡಾಟ್ ಕಾಂ ವರದಿ
ಯಾರಿಗೆ ಎಷ್ಟು ಮತ?
ಶಿರೂರು ಜಿಪಂ ಕ್ಷೇತ್ರ :
ಬಟವಾಡೆ ಸುರೇಶ್ (ಬಿಜೆಪಿ) 9657, ಎಸ್.ಮದನ್ ಕುಮಾರ್ (ಕಾಂ.) 7907, ರಾಜು ದೇವಾಡಿಗ(ಜೆಡಿಎಸ್) 181, ರವೀಂದ್ರ ವಿ.ಕೆ. (ಪಕ್ಷೇತರ) 531, ಸುರಯ್ಯ ಬಾನು (ಪಕ್ಷೇತರ)80, ಸೈಯದ್ ಅಬ್ದುಲ್ ಖಾದರ್ (ಪಕ್ಷೇತರ)117 ಗೆಲುವಿನ ಅಂತರ 117
ಬೈಂದೂರು :
ರಾಜು ಪೂಜಾರಿ (ಕಾಂ.) 10,753, ಶಂಕರ ಪೂಜಾರಿ (ಬಿಜೆಪಿ) 12,115 ಗೆಲುವಿನ ಅಂತರ 1362
ಕಂಬದಕೋಣೆ :
ಗೌರಿ ದೇವಾಡಿಗ (ಕಾಂ.) 9670, ಪ್ರಿಯದರ್ಶಿನಿ ದೇವಾಡಿಗ (ಬಿಜೆಪಿ) 8846, ರೇವತಿ ಪೂಜಾರ‍್ತಿ (ಜೆಡಿಎಸ್) 377 ಗೆಲುವಿನ ಅಂತರ 824 ಕುಂದಾಪ್ರ ಡಾಟ್ ಕಾಂ ವರದಿ
ತ್ರಾಸಿ :
ಯಮುನಾ ಎಸ್.ಪೂಜಾರಿ (ಸಿಪಿಎಂ) 1227, ಶೋಭಾ ಜಿ.ಪುತ್ರನ್ (ಬಿಜೆಪಿ) 8929, ಸಾಧು ಎಸ್.ಬಿಲ್ಲವ (ಕಾಂ.) 8300 ಗೆಲುವಿನ ಅಂತರ 824
ವಂಡ್ಸೆ :
ಕೆ.ಬಾಬು ಶೆಟ್ಟಿ (ಬಿಜೆಪಿ) 10,476, ಸುರೇಶ್ ಕಲ್ಲಾಗರ (ಸಿಪಿಎಂ) 1419, ಹರ್ಕೂರು ಮಂಜಯ್ಯ ಶೆಟ್ಟಿ (ಕಾಂ.)10320 ಗೆಲುವಿನ ಅಂತರ 156
ಕಾವ್ರಾಡಿ :
ಜ್ಯೋತಿ ಎಂ. (ಕಾಂ.) 8382, ಪೂರ್ಣಿಮಾ (ಸಿಪಿಐ(ಎಂ) 1272, ಸುಶೀಲಾ (ಬಿಜೆಪಿ) 7633. ಗೆಲುವಿನ ಅಂತರ 749
ಕೋಟೇಶ್ವರ :
ಗೀತಾ ಶಂಭು ಪೂಜಾರಿ (ಕಾಂ.) 6523, ಎಚ್.ಜ್ಯೋತಿ ಉಪಾಧ್ಯ (ಸಿಪಿಎಂ) 1264, ಲಕ್ಷ್ಮೀ ಮಂಜು ಬಿಲ್ಲವ (ಬಿಜೆಪಿ) 10948. ಗೆಲುವಿನ ಅಂತರ 4425 ಕುಂದಾಪ್ರ ಡಾಟ್ ಕಾಂ ವರದಿ
ಬೀಜಾಡಿ :
ಜ್ಯೋತಿ ಎ.ಶೆಟ್ಟಿ (ಕಾಂ.) 8798, ಶ್ರೀಲತಾ ಸುರೇಶ್ ಶೆಟ್ಟಿ (ಬಿಜೆಪಿ) 11,249 ಗೆಲುವಿನ ಅಂತರ 2451 ಕುಂದಾಪ್ರ ಡಾಟ್ ಕಾಂ ವರದಿ
ಸಿದ್ದಾಪುರ :
ಸಂಪಿಗೇಡಿ ಸಂಜೀವ ಶೆಟ್ಟಿ (ಕಾಂ.) 10278, ಹಾಲಾಡಿ ತಾರಾನಾಥ ಶೆಟ್ಟಿ (ಬಿಜೆಪಿ) 12336 ಗೆಲುವಿನ ಅಂತರ 2058
ಹಾಲಾಡಿ :
ಆಶಾಲತಾ ಚಂದ್ರಶೇಖರ್ (ಕಾಂ.) 9865, ಸುಪ್ರೀತಾ ಉದಯ ಕುಲಾಲ್ (ಬಜೆಪಿ) 13226 ಗೆಲುವಿನ ಅಂತರ 3361
ಕುಂದಾಪುರ ಜಿಪಂ ಕ್ಷೇತ್ರದಲ್ಲಿ ಅತಿ ಹೆಚ್ಚಿನ 4425 ಮತಗಳ ಅಂತರದಿಂದ ಕೋಟೇಶ್ವರ ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ಮಂಜು ಬಿಲ್ಲವ ಗೆಲುವು ಸಾಧಿಸಿದ್ದರೇ, ವಂಡ್ಸೆ ಜಿಪಂ ಬಿಜೆಪಿ ಅಭ್ಯರ್ಥಿ ಬಾಬು ಶೆಟ್ಟಿ 156 ಮತಗಳ ಅತಿ ಕಡಿಮೆ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ದ್ವಿತೀಯ ಅತಿ ಹೆಚ್ಚಿನ ಅಂತರದಲ್ಲಿ ಹಾಲಾಡಿ ಜಿಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಪ್ರಿತಾ ಉದಯ ಕುಲಾಲ್ 3361 ಮತಗಳಿಂದ ಜಯಗಳಿಸಿದ್ದರೇ, ತ್ರಾಸಿ ಜಿಪಂ ಬಿಜೆಪಿ ಅಭ್ಯರ್ಥಿ ಶೋಭಾ ಜಿ ಪುತ್ರನ್ 629 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.