Kundapra.com ಕುಂದಾಪ್ರ ಡಾಟ್ ಕಾಂ

ಗುಜ್ಜಾಡಿ: ಗುಹೆಯೊಳಕ್ಕೆ ಉದ್ಭವಿಸಿಹ ಗುಹೇಶ್ವರನ ಸಾನಿಧ್ಯವೇ ಬೆರಗು

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಒಬ್ಬರು ಮಾತ್ರ ಅಂಬೆಗಾಲಿಟ್ಟು ನಡೆಯಬಹುದಾದ ಹಾದಿ, ಅದರ ಅಂತ್ಯದಲ್ಲೇ ಒಂದಿಷ್ಟು ಮಂದಿ ಕುಳಿತುಕೊಳ್ಳಬಹುದಾದ ಜಾಗ. ಅಲ್ಲಿಂದ ಬಲಕ್ಕೆ ಸಾಗಿದರೆ ಎದಿರುಗೊಳ್ಳುವ ಶಿವಲಿಂಗ. ಶಿವರಾತ್ರಿಯಂದು ಗುಹಾಂತರನಾದ ಈಶ್ವರನ್ನು ಕಾಣುವ ಕೊಡಪಾಡಿಯ ಗುಹೇಶ್ವರ ದೇವಾಲಯದಲ್ಲೊಂದು ಅಪೂರ್ವ ಅವಕಾಶವಿದೆ.

ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. ೨೦ ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ. ಕುಂದಾಪ್ರ ಡಾಟ್ ಕಾಂ ವರದಿ

ದೇವರ ದರ್ಶನಕ್ಕೆ ಸಹಸ್ರ ಜನ: ಶಿವರಾತ್ರಿ ದಿನದಂದು ಮಾತ್ರ ಗುಹೆಯೊಳಗಿನ ಶ್ರೀ ಗುಹೇಶ್ವರನ ದರ್ಶನ ಭಾಗ್ಯವಿರುವುದರಿಂದ ಕರಾವಳಿ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭೇದ ಭಾವವಿಲ್ಲದೇ ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿಯೇ ಗುಹೆಯೊಳಕ್ಕೆ ಪ್ರವೇಶಿಸಿ ದೇವರಿಗೆ ನಮಿಸುತ್ತಾರೆ. ವರ್ಷಕ್ಕೊಮ್ಮೆ ಒದಗಿ ಬರುವ ಅವಕಾಶದಿಂದ ಪುನೀತರಾಗುತ್ತಾರೆ. ಕುಂದಾಪ್ರ ಡಾಟ್ ಕಾಂ ವರದಿ ದೇವಸ್ಥಾನದ ಪುರೋಹಿತರು ದಿನವೂ ಮೂಲ ಸನ್ನಿಧಿಗೆ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಯ ದಿನ ವಿಶೇಷ ಪೂಜೆ, ಶಿವನಾಮ ಸ್ಮರಣೆ ನಡೆಯುತ್ತದೆ. ಸ್ವಯಂ ಸೇವಕರು, ಗುಜ್ಜಾಡಿಯ ಯುವಕರು ಶಿವರಾತ್ರಿಯಂದು ಒಂದಾಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ.

ಪ್ರಾಚಿನ ದೇವಾಲಯಗಳಲ್ಲೊಂದಾಗ ಶ್ರೀ ಗುಹೇಶ್ವರ ದೇವಾಲಯದ ಈಶ್ವರ, ಸ್ಕಂದ, ಗಣಪತಿ ಹಾಗೂ ಅಮ್ಮನವರ ಸಾನಿಧ್ಯವಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಗುಹೆಯೋಳಗಿನ ಉದ್ಭವರೂಪಿ ಗುಹೇಶ್ವರ ದರ್ಶನ ಭಕ್ತವೃಂದಕ್ಕೆ ಒಂದು ವಿಶೇಷ ಅನುಭೂತಿ ನೀಡುವುದರಲ್ಲಿ ಸಂಶಯವಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ

ಇದನ್ನೂ ಓದಿ:

►ಬೈಂದೂರು: ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ ಕ್ಷೇತ್ರ ವಣಕೊಡ್ಲು –http://kundapraa.com/?p=11836 .

 

Exit mobile version