Site icon Kundapra.com ಕುಂದಾಪ್ರ ಡಾಟ್ ಕಾಂ

ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿವೇಕ್‌ಗೆ ಎಸ್‌ಎಸ್‌ಎಲ್‌ಸಿಯಲ್ಲಿ 622 ಅಂಕ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಪ್ರವರ್ತಿತ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಎಚ್. ವಿವೇಕ್ ಗಿರಿಧರ ಪೈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 622ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಯಾಗಿರುವ ಹೆಚ್. ಗಿರಿಧರ ಪೈ ಹಾಗೂ ಕುಂದಾಪುರ ಭಂಡಾರ್‌ಕಾರ್ಸ್ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಗಾಯತ್ರಿ ಗಿರಿಧರ್ ಪೈ ಅವರ ಮಗನಾದ ವಿವೇಕ್ ಅತ್ಯಧಿಕ ಅಂಕಗಳ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವೇಕ್, ತಾನು ನಿರೀಕ್ಷಿಸಿದ್ದಕ್ಕಿಂತ ಅಂಕಗಳು ದೊರೆತಿದೆ. ನನ್ನ ವಿದ್ಯಾಭ್ಯಾಸದಲ್ಲಿ ತಂದೆ-ತಾಯಿಯರ ಬೆಂಬಲ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ವಿ.ಕೆ.ಆರ್. ಆಚಾರ್ಯ ಶಾಲೆ ಶಿಕ್ಷಕರುಗಳ ಮಾರ್ಗದರ್ಶನದಿಂದ ಈ ಸಾಧನೆಗೈಯಲು ಸಾಧ್ಯವಾಗಿದೆ ಎಂದಿದ್ದಾರೆ. ಟುಟೋರಿಯಲ್ಸ್‌ಗೆ ತೆರಳದೇ, ಆಟ-ಪಾಠಗಳಲ್ಲಿ ಸಮಾನವಾಗಿ ತೊಡಗಿಸಿಕೊಂಡಿದ್ದು ಯಶಸ್ಸಿಗೆ ಕಾರಣವಾಗಿದೆ. ಮೆಡಿಕಲ್ ಓದುವ ಹಂಬಲವಿದ್ದು, ಹೆಬ್ರಿಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣಕ್ಕೆ ಸೇರಿಕೊಳ್ಳುವುದಾಗಿ ತಿಳಿಸಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಗನ ಯಶಸ್ಸು ನಮಗೆ ಹೆಮ್ಮೆ ತಂದಿದೆ. ಆತನ ಚನ್ನಾಗಿ ಕಲಿಯುತ್ತಾನೆಂಬ ಕಾರಣದಿಂದಲೇ ಆತನ ಓದಿನ ಬಗೆಗೆ ಒತ್ತಡ ಹೇರಿರಲಿಲ್ಲ. ನಮ್ಮ ನಂಬಿಕೆಯನ್ನು ಹುಸಿಗೊಳಿಸಲಿಲ್ಲ ಎಂದು ಎಂದು ವಿವೇಕ್ ತಾಯಿ ಗಾಯತ್ರಿ ಪೈ ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಯ ಸಾಧನೆಯನ್ನು ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ಸುದ್ದಿ./

► ಸತತವಾಗಿ ಸಾಧಕ ಶಾಲಾ ಪ್ರಶಸ್ತಿ ವಿಜೇತ ಕುಂದಾಪುರದ ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢ ಶಾಲೆ – http://kundapraa.com/?p=14141 .

Exit mobile version