Site icon Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು ಸರಕಾರಿ ಶಾಲೆಯ ವಿದ್ಯಾರ್ಥಿ ವೆಂಕಟೇಶ್‌ಗೆ 622 ಅಂಕ

ಟ್ಯೂಷನ್‌ಗೆ ಹೋಗಿಲ್ಲ. ಸರಕಾರಿ ಶಾಲೆಯಲ್ಲಿಯೇ ಸಾಧಿಸಿದ ಛಲ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ತಾಲೂಕಿನ ಬಸ್ರೂರು ಸರಕಾರಿ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ 625ರಲ್ಲಿ 622 ಅಂಕ ಗಳಿಸಿ
ತಾಲೂಕಿಗೆ ಮಾದರಿ ಸಾಧನೆಗೈದಿದ್ದಾನೆ. ಚುರುಕಿನ ವಿದ್ಯಾರ್ಥಿಯಾದ ವೆಂಕಟೇಶ್ ಯಾವುದೇ ಟ್ಯೂಷನ್ ಪಡೆಯದೇ ಶಾಲೆಯಲ್ಲಿ ಕಲಿಸಿದ್ದಷ್ಟನ್ನೇ ಓದಿಕೊಂಡು ಅತ್ಯಧಿಕ ಅಂಕ
ಗಳಿಸಿದ್ದಾನೆ. ಈತ ಬಸ್ರೂರು ಪುರಾಣಿವಳಾಲ್ ನಿವಾಸಿಯಾಗಿರುವ ಸುಬ್ರಮಣ್ಯ ಪುರಾಣಿಕ ಹಾಗೂ ಅನ್ನಪೂರ್ಣ ದಂಪತಿಗಳ ಪುತ್ರ. ಕುಂದಾಪ್ರ ಡಾಟ್ ಕಾಂ

‘ಕುಂದಾಪ್ರ ಡಾಟ್ ಕಾಂ’ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ಪೋಷಕರ ಪ್ರೋತ್ಸಾಹ, ಶಿಕ್ಷಕರುಗಳ ಮಾರ್ಗದರ್ಶನ ತನ್ನೀ ಯಶಸ್ಸಿಗೆ ಕಾರಣವಾಗಿದೆ. ಮುಂದೆ ಕಾಮರ್ಸ್ ವಿಭಾಗವನ್ನು
ತೆಗೆದುಕೊಂಡು ಚಾರ್ಟೆಡ್ ಅಕೌಂಟೆಂಟ್ ಆಗುವ ಬಯಕೆ ಇದೆ ಎಂದು ಹೇಳಿಕೊಂಡಿದ್ದಾನೆ. / ಕುಂದಾಪ್ರ ಡಾಟ್ ಕಾಂ ವರದಿ/

Exit mobile version