Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪ್ರತಿ ಮಳೆಗೂ ಗಾಂಧಿ ಮೈದಾನದ ಎದುರಿನ ಹೆದ್ದಾರಿಯಾಗುವುದು ಹೊಳೆ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕೃಪೆಯಿಂದಾಗಿ ತಾಲೂಕಿನ ತೆಕ್ಕಟ್ಟೆಯಿಂದ ಆರಂಭಗೊಂಡು ಶಿರೂರಿನ ವರೆಗೂ ಮಳೆಗಾಲದಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರಿತಪಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲಲ್ಲಿ ನಡೆಯುತ್ತಿರುವ ಅರೆಬರೆ ಕಾಮಗಾರಿ ವಾಹನ ಸವಾರು ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರ ನಿದ್ದೆಗೆಡಿಸಿದ್ದು, ಬೆಸಿಗೆಯ ಧೂಳು, ಮಳೆಗಾಲದ ಕೆಸರಿನಿಂದಾಗಿ ಕಂಗೆಟಿದ್ದಾರೆ.

ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೆತುವೆ ಕಾಮಗಾರಿಯಿಂದಾಗಿ ಒಂದೆಡೆ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥಗೊಂಡಿದ್ದರೇ, ಇನ್ನೊಂದಡೆ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ನೀರು ನಿಂತು ವಾಹನ ಸವಾರರಿಗೆ ತೊಂದರೆಯನ್ನುಂಟುಮಾಡುತ್ತಿದೆ. ಪಾದಚಾರಿಗಳಂತೂ ಈ ಮಾರ್ಗದಲ್ಲಿ ಸಂಚರಿಸುವದೇ ಅಪಾಯ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಕಳೆದ ಮುರು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಗಾಂಧಿ ಮೈದಾನದ ಎದುರು ಈ ಅವ್ಯವಸ್ಥೆ ತಲೆದೂರಿದ್ದು, ಜನಸಂದಣಿ ಇರುವ ಪ್ರದೇಶದಲ್ಲಾದರೂ ಶೀಘ್ರ ಕಾಮಗಾರಿ ಪೂರ್ಣಗೊಳಿಸಿದರೇ ನಿತ್ಯ ಎದುರಾಗುವ ಅಪಾಯಕ್ಕೆ ಕೊಂಚ ಮುಕ್ತಿ ದೊರೆಯಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಾರೆ. ಕುಂದಾಪ್ರ ಡಾಟ್ ಕಾಂ ವರದಿ.

Exit mobile version