Kundapra.com ಕುಂದಾಪ್ರ ಡಾಟ್ ಕಾಂ

ಮಂಗಳೂರು ವಿ.ವಿ ಅವಾಂತರ, ಭವಿಷ್ಯ ತತ್ತರ: ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳ ಅಳಲು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಕಪಟ್ಟಿಯಲ್ಲಿನ ಗೊಂದಲ ಹಾಗೂ ತಪ್ಪು ಫಲಿತಾಂಶದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ವಿಶ್ವವಿದ್ಯಾನಿಲಯ ಈ ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕೆಂದು ಇಲ್ಲಿನ ಭಂಡಾರ್ಕಾರ್ಸ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದರು.
ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೆಲವು ಕಾಲೇಜುಗಳ ವಿದ್ಯಾರ್ಥಿಗಳ ಒಂದನೇ, ಮೂರನೇ ಸೆಮಿಸ್ಟರ್‌ನ ಫಲಿತಾಂಶ ನೀಡದೇ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ವಿ.ವಿ ಆಟವನ್ನಾಡುತ್ತಿದೆ. ಈವರೆಗೂ ಎಪ್ರಿಲ್ 2016 ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಗಿದು 2016 ರ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಆರಂಭವಾಗಿದೆ. ಆದರೆ ಈವರೆಗೂ ೨೦೧೫ರ ನವೆಂಬರ್ ಡಿಸೆಂಬರ್‌ನ ಮೂರನೇ ಮತ್ತುಐದನೇ ಸೆಮಿಸ್ಟರ್ ನಲ್ಲಿಓದುತ್ತಿರುವ ವಿದ್ಯಾರ್ಥಿಗಳ ಸರಿಯಾದ ಮತ್ತು ಸೂಕ್ತ ರೀತಿಯ ಫಲಿತಾಂಶ ವಿದ್ಯಾರ್ಥಿಗಳ ಕೈಗೆ ಬಂದಿಲ್ಲ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ನಿಲುವಿಗೆ ಏನನ್ನು ಹೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಕೆಲವು ವಿದ್ಯಾರ್ಥಿಗಳ ಫಲಿತಾಂಶಈವರೆಗೂ ಬರಲೇ ಇಲ್ಲ. ವಿ.ವಿಯ ವೆಬ್ ಸೈಟ್ ನಲ್ಲಿ ನೋಡಿದರೆ ಸರಿಯಾಗಿತೋರಿಸುವುದಿಲ್ಲ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗದೇ ಗೈರಾದ (ಹಾಜರಾಗದ ) ವಿದ್ಯಾರ್ಥಿಗೆ ಫಲಿತಾಂಶ ದೊರಕಿದೆ. ಕೆಲವರಆಂತರಿಕ ಅಂಕಗಳು ಆಯಾ ವಿಷಯಗಳ ಥಿಯರಿಯೊಂದಿಗೆ ಸೇರದೇ ೦೦ ಎಂದುತೋರಿಸುತ್ತದೆ. ಕೇಳಿದರೆ ಕಾಲೇಜು ಕಳುಹಿಸಿಲ್ಲ ಎಂಬ ಸಬೂಬು ಉತ್ತರ ವಿ.ವಿಯಿಂದ ವಿದ್ಯಾರ್ಥಿಗೆ ಸಿಕ್ಕ ಉತ್ತರ. ವಿ.ವಿ ಕೇಳಿದಾಗಲೆಲ್ಲ ಕಾಲೇಜುಗಳು ಎಲ್ಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಪುನಃ ಪುನಃ ನೀಡಿದೆ. ಆದರೂ ಫಲಿತಾಂಶಬಂದಿಲ್ಲ. ಇನ್ನೂ ಕೆಲವರ ಪ್ರಾಯೋಗಿಕ ಪರೀಕ್ಷೆಯ ಅಂಕಗಳು ವಿ.ವಿ ನೀಡುವ (ಇಂಟ್‌ರ್‌ನೆಟ್ ಪ್ರತಿ) ಅಂಕ ಪಟ್ಟಿಯಲ್ಲಿ ತೋರಿಸುತ್ತಿಲ್ಲ. ಕೆಲವು ವಿಷಯಗಳ ಅಂಕಗಳು ವಿದ್ಯಾರ್ಥಿ ತೆಗೆದುಕೊಳ್ಳದ ವಿಷಯಕ್ಕೆ ಸೇರಿಕೊಂಡು ಬಂದಿದೆ. ಇನ್ನೂ ಕೆಲವರ ಅಂಕಗಳು ಉತ್ತೀರ್ಣವಾದರೂ ಅನುತ್ತೀರ್ಣವೆಂದು ಅಂಕಪಟ್ಟಿಯಲ್ಲಿ ತೋರಿಸುತ್ತಿದೆ. ನಿರೀಕ್ಷಿತ ಅಂಕ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ವಿಶ್ವವಿದ್ಯಾನಿಲಯದಿಂದಯಾವುದೇ ಉತ್ತರವಿಲ್ಲ. ಈ ಅವ್ಯವಸ್ಥೆಗೆ ಯಾರನ್ನು ಹೊಣೆಯನ್ನಾಗಿಸುವುದು, ನಮಗೆ ನ್ಯಾಯ ನೀಡುವವವರು ಯಾರು ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳು, ತಪ್ಪು ಫಲಿತಾಂಶದಿಂದಾಗಿ ಅತಂತ್ರರಾಗಿರುವ ವಿದಾರ್ಥಿಗಳ ಫಲಿತಾಂಶವನ್ನು ಸರಿಪಡಿಸಿ ಪ್ರಕಟಿಸದಿದ್ದರೇ ಹೋರಾಟಕ್ಕಿಳಿಯುವುದಾಗಿ ತಿಳಿಸಿರು.  ಸುದ್ದಿಗೋಷ್ಠಿಯಲ್ಲಿ ಶ್ರೀರಾಜ್, ಜ್ಯೋತಿ, ಸಂಗೀತಾ ಹಾಗೂ ಶ್ರವಣ ಮಾತನಾಡಿದರು.

????????????????????????????????????
Exit mobile version