Kundapra.com ಕುಂದಾಪ್ರ ಡಾಟ್ ಕಾಂ

ಭಾರತದಲ್ಲೇ ಪ್ರಪ್ರಥಮ ಬಾರಿಗೆ ಬಹು ಉಪಯೋಗಿ ಸನ್‌ರೈಸ್ ಐಕಾನ್ ತೆರೆದ ಟ್ಯಾಂಕ್‌ಗಳು ಮಾರುಕಟ್ಟೆ ಪ್ರವೇಶ

ಪ್ಲಾಸ್ಟಿಕ್ ಟ್ಯಾಂಕ್ ತಯಾರಿಕೆಯಲ್ಲಿ ‘ಹೊಸ ಕ್ರಾಂತಿ’

ಕೈಗಾರಿಕೋದ್ಯಮದಲ್ಲಿ ಒಂದಲ್ಲ ಒಂದು ಹೊಸ ಸಂಶೋಧನೆ ಮಾಡಿ ಗ್ರಾಹಕರಿಗೆ ಅನುಕೂಲ ಹೆಚ್ಚಿಸುತ್ತಿರುವ ಕರಾವಳಿಯ ಹೆಸರಾಂತ ಕೈಗಾರಿಕ ಘಟಕ ಕೋಟೇಶ್ವರದ ರಾಜಾರಾಮ್ ಪಾಲಿಮರ್ಸ್ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಬಹು ಉಪಯೋಗಿ ಸನ್‌ರೈಸ್ ಐಕಾನ್ ತೆರೆದ ಟ್ಯಾಂಕ್‌ನ್ನು ಸಂಶೋಧಿಸಿ ಯಶಸ್ವಿಯಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಇಷ್ಟರವರೆಗೆ ನಮಗೆ ಗೊತ್ತಿರುವುದು ನೀರು ತುಂಬಿಸುವ ಟ್ಯಾಂಕುಗಳು ಮಾತ್ರ. 2007ರಲ್ಲಿ ಸ್ಥಾಪಿಸಿದ ಕೋಟೇಶ್ವರದ ರಾಜಾರಾಮ್ ಪಾಲಿಮರ್ಸ್ ಪ್ಲಾಸ್ಟಿಕ್ ವಾಟರ್ ಟ್ಯಾಂಕ್ ಕೈಗಾರಿಕ ಘಟಕವು ಪ್ಲಾಸ್ಟಿಕ್ ಟ್ಯಾಂಕ್ ಉತ್ಪಾದನಾ ಘಟಕಗಳಲ್ಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕೇವಲ ನೀರು ಸಂಗ್ರಹಿಸಿಡುವ ಟ್ಯಾಂಕ್‌ಗಳನ್ನು ಬಹು ಉಪಯೋಗಿ ಟ್ಯಾಂಕ್‌ಗಳನ್ನಾಗಿ ಹೇಗೆ ನಿರ್ಮಿಸುವುದು? ಟ್ಯಾಂಕ್‌ಗಳ ಸಂಗ್ರಹಣೆಗೆ ಸ್ಥಳ ಅಭಾವ ಹಾಗೂ ಸಾಗಾಟದ ಖರ್ಚುಗಳ ಹೆಚ್ಚಳ ಗ್ರಾಹಕರಿಗೆ ಹೊರೆಯಾಗದಂತೆ ನಿಭಾಯಿಸುವುದು ಹೇಗೆ? ಟ್ಯಾಂಕ್‌ಗಳನ್ನು ಒಂದರ ಒಳಗೆ ಒಂದನ್ನು ಇಡುವಂತೆ ರಚಿಸಲು ಸಾಧ್ಯವಿಲ್ಲವೇ? ಇದರ ವಿನ್ಯಾಸದ ಬಗೆ ಹೇಗೆ ? ದೊಡ್ಡ ಅಗಲ ಬಾಯಿಯಿರುವ ಮುಚ್ಚುಳ ಮಾಡಿದರೆ ಎಲ್ಲಾ ವಿಧದ ವಸ್ತುಗಳನ್ನು, ಆಹಾರ ಸಾಮಾಗ್ರಿಗಳನ್ನು ಇಡಲು ಅನುಕೂಲ ಹಾಗೂ ಟ್ಯಾಂಕ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು, ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡುವ ಎಲ್ಲಾ ವಸ್ತುಗಳು ಕೆಡದಂತೆ ದೀರ್ಘಕಾಲ ಬಾಳ್ವಿಕೆ ಬರುವಂತೆ ಯಾವ ರೀತಿಯಲ್ಲಿ ಟ್ಯಾಂಕ್‌ಗಳನ್ನು ರಚಿಸಬಹುದು? ಹೀಗೆ ಹತ್ತಾರು ಯೋಚನೆಗಳು ಸ್ವತಃ ಇಂಜಿನಿಯರ್ ಆಗಿರುವ ರಾಜಾರಾಮ್ ಪಾಲಿಮರ್ಸ್ನ ಆಡಳಿತ ನಿರ್ದೇಶಕ ಸುರೇಶ್ ಗೋವಿಂದರಾಯ ಕಾಮತ್‌ರಲ್ಲಿ ಮೂಡಿತು. ಅದರ ಫಲವಾಗಿ ಸಂಶೋಧನೆಗಿಳಿದ ಅವರು ಸಾಕಷ್ಟು ಅಧ್ಯಯನ ಮಾಡಿದರು. ಒಂದೊದೇ ‘ಮೌಲ್ಡ್’ಗಳನ್ನು ತಯಾರಿಸಿ ಪ್ರಯೋಗ ಮಾಡಿದರು. ಅದಕ್ಕಾಗಿಯೇ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿದರು. ಕೆಲವು ಮೌಲ್ಡ್‌ಗಳಿಂದ ಸಂಪೂರ್ಣ ತೃಪ್ತಿ ದೊರೆಯಲಿಲ್ಲ. ಅದಕ್ಕಾಗಿ ಹೊಸ ಹೊಸ ಪ್ರಯೋಗವನ್ನು ಮಾಡಿದರು. ಕೊನೆಗೂ ಅವರ ಕನಸಿನ ಬಹು ಉಪಯೋಗಿ ತೆರೆದ ಟ್ಯಾಂಕ್‌ನ್ನು ಕಂಡು ಹುಡುಕಿಯೇ ಬಿಟ್ಟರು! ಕುಂದಾಪ್ರ ಡಾಟ್ ಕಾಂ.

ಭಾರತದಲ್ಲಿಯೇ ಇಷ್ಟರತನಕ ಯಾರು ಕಂಡು ಹಿಡಿಯದ ಬಹು ಉಪಯೋಗಿ ತೆರೆದ ಹಾಗೂ ಮುಚ್ಚಿದ ಟ್ಯಾಂಕ್‌ನ್ನು ರಚಿಸಿ ಪ್ಲಾಸ್ಟಿಕ್ ಟ್ಯಾಂಕ್ ಉತ್ಪನ್ನ ಘಟಕದಲ್ಲಿಯೇ ‘ಹೊಸ ಕ್ರಾಂತಿ’ ಉಂಟು ಮಾಡಿದರು! ತೆರೆದ ಟ್ಯಾಂಕ್‌ಗಳ ಬಾಯಿ ಸಾಕಷ್ಟು ಅಗಲವಿರುವಂತೆ ಅದರ ಮುಚ್ಚಳವು ಕೂಡಾ ಸಾಕಷ್ಟು ಬಲಿಷ್ಠ ಇರುವಂತೆ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ಗಳನ್ನು ಬಳಸಿ ಸುಲಭ, ಸುಧೃಡ, ಸುಭದ್ರ ಹಾಗೂ ದೀರ್ಘ ಬಾಳ್ವಿಕೆ ಬರುವಂತಹ ‘ಬಹು ಉಪಯೋಗಿ, ಬಹು ಪದರಗಳ 200 ಲೀ., 500 ಲೀ., 1,000 ಲೀ. ಗಳ ಟ್ಯಾಂಕ್‌ಗಳ ಉತ್ಪನ್ನ ಮಾಡಿ ಮಾರುಕಟ್ಟೆಗೆ ಸನ್‌ರೈಸ್ ಐಕಾನ್ ಬ್ರಾಂಡ್‌ನ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಬೇಡಿಕೆಗಳನ್ನು ಆಧರಿಸಿ ಇನ್ನೂ ಹೆಚ್ಚು ಲೀಟರ್ ಹಿಡಿಯುವಂತಹ ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದಾರೆ. ಕುಂದಾಪ್ರ ಡಾಟ್ ಕಾಂ.

[quote font_size=”16″ bgcolor=”#ffffff” bcolor=”#1e73be” arrow=”yes” align=”right”]ಲಾಭ-ನಷ್ಟಗಳು ಏನೇ ಇರಲಿ ಗ್ರಾಹಕರ ಮನ ಸಂತುಷ್ಟ ಗೊಳಿಸುವುದು ಮುಖ್ಯ ಹಾಗೂ ಅವರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕೊಡುವುದು ಮುಖ್ಯ. ನಾನು ದೇಶದಲ್ಲೇ ಪ್ರಥಮವಾಗಿ ಪರಿಚಯಿಸುವ ಈ ತೆರೆದ ಟ್ಯಾಂಕ್‌ಗಳ ಮಾರುಕಟ್ಟೆಯನ್ನು ಒಂದು ಸವಾಲಾಗಿ ಸ್ವೀಕರಿಸಿದ್ದೇನೆ. ಈ ಸವಾಲಿನಲ್ಲಿ ಸೋಲು ಗೆಲುವುಗಳು ಏನೇ ಬರಲಿ ಅದನ್ನು ವ್ಯವಹಾರದ ಒಂದು ಭಾಗವಾಗಿ ಸ್ವೀಕರಿಸುತ್ತೇನೆ. ನನ್ನ ಕನಸಿನ ಬಹು ಉಪಯೋಗಿ ಸನ್‌ರೈಸ್ ಐಕಾನ್ ತೆರೆದ ಟ್ಯಾಂಕ್‌ಗಳನ್ನು ಗ್ರಾಹಕರಿಗೆ ಮೊದಲ ಬಾರಿ ಪರಿಚಯಿಸಿದ ತೃಪ್ತಿ ನನಗಿದೆ. – ಸುರೇಶ್ ಗೋವಿಂದರಾಯ ಕಾಮತ್, ಆಡಳಿತ ನಿರ್ದೇಶಕರು[/quote]

ತೆರೆದ ಟ್ಯಾಂಕ್‌ನ ಬಹು ಉಪಯೋಗ ಅಗಣಿತ:
ಸನ್‌ರೈಸ್ ಐಕಾನ್ ಬ್ರಾಂಡ್‌ನ ತೆರೆದ ಟ್ಯಾಂಕ್ ಬಹು ಉಪಯೋಗಿಯಾಗಿದ್ದು ಅದರ ಬಳಕೆ ಇಂತಹವುಗಳಿಗೆ ಸೀಮಿತ ಎಂದು ನಿರ್ಧರಿಸಲಾಗದು ಅಷ್ಟರಮಟ್ಟಿಗೆ ಜನಬಳಕೆಯಲ್ಲಿ ಹಾಸುಹೊಕ್ಕಾಗುವುದರಲ್ಲಿ ಸಂಶಯವಿಲ್ಲ. ಇತರ ಟ್ಯಾಂಕ್‌ಗಳಂತೆ ರೂಫ್ ಟಾಪ್‌ನಲ್ಲಿ ನೀರಿನ ಸಂಗ್ರಹಣೆ, ತೆರೆದ ನೀರಿನ ಟ್ಯಾಂಕ್ ರೀತಿಯಲ್ಲಿ ಬಳಕೆ, ಕಸ ಸಂಗ್ರಹ ಮತ್ತು ವಿಲೇವಾರಿಗೆ ಬಳಕೆ, ಕೃಷಿ ಕಾರ್ಯ ಮತ್ತು ತೋಟಗಾರಿಕೆಯಲ್ಲಿ, ಕಟಾವಿನ ಸಂದರ್ಭ ಧಾನ್ಯ ಸಂಗ್ರಹ, ಆಹಾರೋತ್ಪನ್ನ ತಯಾರಿಕಾ ಘಟಕಗಳಿಗೆ, ಮೀನು ಸಂಗ್ರಹಣೆ, ಕೆಡದಂತೆ ಸಂರಕ್ಷಣೆ ಮತ್ತು ಸಾಗಾಟಕ್ಕೆ ಅನುಕೂಲವಾಗಲಿದೆ. ಮನೆ, ಕಛೇರಿ ಕಮರ್ಷಿಯಲ್ ಕಾಂಪ್ಲೆಕ್ಸ್, ಕೆಟರಿಂಗ್, ಹೋಟೆಲ್, ಆಸ್ಪತ್ರೆ, ಮದುವೆ ಮತ್ತಿತರ ಪಾರ್ಟಿ ಹಾಲ್, ಕನ್‌ವೆನ್‌ಶನ್ ಹಾಲ್, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಇದರ ಬಹು ಉಪಯೋಗ ಸುಲಭ ಸಾಧ್ಯ. ಆಸಿಡ್, ಪೆಟ್ರೋಲ್ ಹಾಗೂ ರಾಸಾಯನಿಕ ವಸ್ತುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಸ್ತುಗಳನ್ನು ಈ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಬಹುದು. ಈ ಟ್ಯಾಂಕ್‌ಗಳ ಮುಚ್ಚಳಗಳು ಪಿರಾಮಿಡ್ ಮಾದರಿಯಲ್ಲಿದ್ದು ಇದು ವಸ್ತುಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಸಂರಕ್ಷಿಸುತ್ತದೆ. ಟ್ಯಾಂಕ್‌ಗಳು ಒಂದರ ಒಳಗೊಂದು ಇಡುವಂತೆ ರಚಿಸಿರುವುದರಿಂದ ಹಲವು ಟ್ಯಾಂಕುಗಳನ್ನು ಒಂದರ ಒಳಗೆ ಒಂದರಂತೆ ಜೋಡಿಸಲು ಅನುಕೂಲ ಮತ್ತು ಕಡಿಮೆ ಸ್ಥಳಾವಕಾಶದಲ್ಲಿ ಸಾವಿರಾರು ಟ್ಯಾಂಕುಗಳನ್ನು ಸಂಗ್ರಹಿಟ್ಟುಕೊಳ್ಳಬಹುದು. ಇದರಿಂದ ಸಾಗಾಟದ ವೆಚ್ಚವು ಕೂಡಾ ತುಂಬಾ ಕಡಿಮೆ ಆಗುತ್ತದೆ. ಟ್ಯಾಂಕ್‌ಗಳ ಮುಚ್ಚಳಗಳು ಸಾಕಷ್ಟು ದೊಡ್ಡದಾಗಿರುವುದರಿಂದ ಇದರಲ್ಲಿ ಎಲ್ಲಾ ರೀತಿಯ ಆಹಾರ ವಸ್ತುಗಳನ್ನು ಸುಲಭವಾಗಿ ಹಾಕಿ ತೆಗೆಯಬಹುದು. ನಮಗೆ ಅನುಕೂಲವಾಗುವಂತೆ ಟ್ಯಾಂಕ್‌ಗಳನ್ನು ತೆರದು ಅಥವಾ ಮುಚ್ಚಿಯು ಬಳಸಿಕೊಳ್ಳಬಹುದು. ಮುಚ್ಚಳಗಳನ್ನು ಬಲಿಷ್ಟವಾಗಿ ನಿರ್ಮಿಸಲಾಗಿದೆ. ಬಾಳ್ವಿಕೆ ದೀರ್ಘಕಾಲ ಬರುತ್ತದೆ. ಟ್ಯಾಂಕ್‌ಗಳ ಮುಚ್ಚಳಗಳು ಅಗಲವಾಗಿರುವುದರಿಂದ ಟ್ಯಾಂಕ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ವಿಶಿಷ್ಠ ರೀತಿಯಲ್ಲಿ, ವಿವಿಧ ಪದರಗಳಲ್ಲಿ ಟ್ಯಾಂಕ್‌ಗಳು ರಚನೆಗೊಂಡಿರುವುದರಿಂದ ಇದರಲ್ಲಿ ಶೇಖರಿಸಲ್ಪಡುವ ವಸ್ತುಗಳು ದೀರ್ಘ ಕಾಲದವರೆಗೆ ಗುಣಮಟ್ಟವನ್ನು ಕಾಪಾಡಿಕೊಂಡು ಬರುತ್ತವೆ. ಇಂತಹ ಟ್ಯಾಂಕುಗಳಿಂದ ಎಲ್ಲಾ ರೀತಿಯ ಗ್ರಾಹಕರಿಗೆ ಸಾಕಷ್ಟು ಲಾಭವಿದೆ. ಮುಖ್ಯವಾಗಿ ಇಲಿ, ಹೆಗ್ಗಣ, ಕ್ರಿಮಿ ಕೀಟಗಳಿಂದ ಇದರಲ್ಲಿ ಸಂಗ್ರಹಿಸಿಡುವ ಆಹಾರ ವಸ್ತುಗಳಿಗೆ ಮುಕ್ತಿ ದೊರೆಯಲಿದೆ. ಕೃಷಿಕರಿಗೆ ತಾವು ಬೆಳೆದ ಎಲ್ಲಾ ಬೇಳೆಕಾಳುಗಳನ್ನು ದವಸ ಧಾನ್ಯಗಳನ್ನು ದೀರ್ಘಕಾಲ ಸಂಗ್ರಹಿಸಿಡಲು ಅನುಕೂಲ. ಮೀನುಗಾರರಿಗೆ ಮೀನುಗಳನ್ನು ಸಂಗ್ರಹಿಸಲು ಅತಿ ಉತ್ತಮ. ಮಂಜುಗಡ್ಡೆಯೊಂದಿಗೆ ಹಾಗೂ ಒಣ ಮೀನುಗಳನ್ನು ದಾಸ್ತಾನು ಮಾಡ ಬಹುದು. ಹಾಗಂತ ಈ ಟ್ಯಾಂಕ್‌ಗಳು ಕೂಡಾ ಅಷ್ಟೊಂದು ದುಬಾರಿಯಲ್ಲ. ಎಲ್ಲರಿಗೂ ಕೈಗೆಟಕುವ ದರದಲ್ಲೇ ದೊರೆಯಲಿದೆ. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಸನ್‌ರೈಸ್ ಐಕಾನ್ ತೆರೆದ ಟ್ಯಾಂಕ್‌ಗಳಿಗೆ 10 ವರ್ಷಗಳ ಗ್ಯಾರಂಟಿಯನ್ನು ಕಂಪನಿಯು ಗ್ರಾಹಕರಿಗೆ ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ರಾಜಾರಾಮ್ ಪಾಲಿಮರ್ಸ್, ಕೋಟೇಶ್ವರ -576222  ಸಂಪರ್ಕಿಸಬಹುದಾಗಿದೆ.

Exit mobile version