Site icon Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವ ತುಳುವೆರೆ ಆಯನೋ 2016ರ ರಥ ಯಾತ್ರೆಗೆ ಬಾರ್ಕೂರಿನಲ್ಲಿ ಚಾಲನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬಾರ್ಕೂರು: ಸ್ವರ್ಗಕ್ಕೆ ಸಮನಾದದು ಎನಾದರೂ ಇದ್ದರೆ ಅದು ನಮ್ಮ ತುಳುನಾಡು ಎನ್ನಬಹುದು. ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಇಲ್ಲಿರುವಷ್ಟು ಸಂಸ್ಕೃತಿ ಸಂಸ್ಕಾರರ ಸಮ್ಮಿಲನ ಬೇರೆಲ್ಲೂ ಕಾಣಲು ಸಿಗುವುದಿಲ್ಲ. ಸುಸಂಸ್ಕೃತರ ಸಮ್ಮಿಳಿತವಾಗಿರುವ ಈ ಭಾಗಕ್ಕೆ ಕಲ್ಚರಲ್ ಲ್ಯಾಂಡ್ ಎಂದು ಕರೆದರೆ ಅತಿಶಯೋಕ್ತಿ ಅಲ್ಲ ಎಂದು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಮೀಠಾಧೀಶ್ವರ ಅಷ್ಟೋತ್ರ ಶತಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು.

ಅವರು ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ, ಕಾಸರಗೋಡು ಬದಿಯಡ್ಕದಲ್ಲಿ ಡಿಸೆಂಬರ್ ೯ರಿಂದ ೧೩ರವರೆಗೆ ನಡೆಯಲಿರುವ ವಿಶ್ವ ತುಳುವೆರೆ ಆಯನೋ ೨೦೧೬ರ ರಥ ಯಾತ್ರೆಗೆ ಆರತಿ ಬೆಳಗಿ ಚಾಲನೆ ನೀಡಿ ಮಾತನಾಡಿದರು. ನಮ್ಮಲ್ಲಿ ಇಂದಿಗೂ ಕೂಡ ಕೃಷಿ ಮತ್ತು ಋಷಿ ಸಂಸ್ಕೃತಿಯನ್ನು ಕಾಣಬಹುದು. ನಮ್ಮ ನೆಲ, ಜಲ ಮತ್ತು ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ ಬೇಕು, ಇಂದು ಆ ಅಭಿಮಾನಿದ ಕೊರತೆ ಕಾಣುತ್ತಿದೆ. ಇದನ್ನು ನಿಗಿಸುವ ನಿಟ್ಟಿನಲ್ಲಿ ಸಂಘಟಕ ಆಯೋಜಿಸಿರುವ ಸಮ್ಮೇಳನ ಯಶಸ್ವಿಯಾಗಲಿ ಎಂದರು.

ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಚಾರ್ತುಮಾಸ್ಯ ವ್ರತ ಸಮಿತಿ ಕಾರ್ಯದರ್ಶಿ ಪ್ರವೀಣ ಆಚಾರ್ಯ ರಂಗನಕೆರೆ, ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಎರಡನೇಯ ಮೊಕ್ತೇಸರ ದಯಾನಂದ ಆಚಾರ್ಯ ಕರಂಬಳ್ಳಿ, ಹಿರಿಯ ಇತಿಹಾಸ ತಜ್ಞ ಡಾ.ಜಗದೀಶ ಶೆಟ್ಟಿ, ಭಂಡಾರಿ ಸಮಾಜದ ಗಂಗಾಧರ ಭಂಡಾರಿ ಭಿರ್ತಿ ಉಪಸ್ಥಿತರಿದ್ದರು.

ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬಾರ್ಕೂರು ಸ್ವಾಗತಿಸಿದರು. ರಥ ಯಾತ್ರೆ ಸಂಚಾಲಕ ರಾಜೇಶ್ ಆಳ್ವ ಪ್ರಸ್ತಾವಿಸಿದರು. ವಿಶ್ವಹಿಂದೂ ಪರಿಷತ್‌ನ ಸುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ನಾಗರಾಜ ಆಚಾರ್ಯ ವಂದಿಸಿದರು.

Exit mobile version