ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಂಗಾರಕಟ್ಟೆಯ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಕೋಟ ಎಸೈ ಕಬ್ಬಳರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಬೇಸತ್ತು ರಾಜಿನಾಮೆ ನೀಡಿ ಹೊರನಡೆದಿದ್ದ ಕಬ್ಬಳರಾಜ್ ಅವರ ಮನವೊಲಿಸಲಾಗಿದೆ ಎನ್ನಲಾಗಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್ಪಿ ತರಾಟೆಗೆ ತೆಗೆದುಕೊಂಡಿದ್ದರಿಂದ ರಾಜಿನಾಮೆ ಪತ್ರ ಬರೆದಿಟ್ಟು ತೆರಳಿದ್ದ ಎಸೈ ಕಬ್ಬಾಳರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೇ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸಂಜೆಯ ಬಳಿಕ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ್ದಲ್ಲದೇ, ಕಬ್ಬಳರಾಜ್ ಅವರ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಹಾಗಾಗಿ ಒಂದೆರಡು ದಿನದಲ್ಲಿ ಕಬ್ಬಾಳರಾಜ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ ಎಸೈ ರಾಜಿನಾಮೆ ಕೋಟ ಪರಿಸದರದಲ್ಲಿ ಸಂಚಲನ ಮೂಡಿಸಿದ್ದಲ್ಲದೇ ನಾಗರಿಕರು ರಾಜಿನಾಮೆ ಅಂಗಿಕರಿಸದಂತೆ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು. ಕೋಟ ಬಂದ್ ಮಾತುಗಳೂ ಕೇಳಿಬಂದಿದ್ದವು. ಇದೀಗ ಎಸೈ ಮರಳಲಿರುವ ಮಾಹಿತಿ ದೊರೆತ ಹಿನ್ನೆಲೆಯನ್ನು ನಾಗರಿಕರು ಸಂತೋಷಗೊಂಡಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
► ಕೋಟ ಠಾಣಾಧಿಕಾರಿ ಕಬ್ಬಾಳರಾಜ್ ರಾಜಿನಾಮೆ? – http://kundapraa.com/?p=17727