Kundapra.com ಕುಂದಾಪ್ರ ಡಾಟ್ ಕಾಂ

ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಉಡುಪಿ ವಿಭಾಗದ ಆಶ್ರಯದಲ್ಲಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: 150 ವರ್ಷ ಇತಿಹಾಸವುಳ್ಳ ಅಂಚೆ ಇಲಾಖೆಯಲ್ಲಿ ಶಾಪಗ್ರಸ್ಥ ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಇತ್ಯರ್ಥಗೊಸಬೆಕೇಂದು, ಯಾವುದೇ ಸೌಲಭ್ಯವನ್ನು ನೀಡದೆ ದಿನದ 8 ರಿಂದ 10 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರೂ ಕೂಡಾ ಇಲಾಖೆಯು 3 ರಿಂದ 5 ಗಂಟೆಗಳಿಗೆ ಮಾತ್ರ ಸಂಬಳ ನೀಡಿ ಇದುವರೆಗೂ ವಂಚಿಸುತ್ತಾ ಬಂದಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಬಸವ ಬಿಲ್ಲವ ಆರೋಪಿಸಿದರು.

ಕೇಂದ್ರದ ನರೇಂದ್ರ ಮೋದಿ ಯವರ ಸರಕಾರವು ಕೇಂದ್ರ ಸರಕಾರಿ ನೌಕರರ ಹಿತಾರಕ್ಷಣೆಗಾಗಿ ಬೋನಸ್ ಮಿತಿಯನ್ನು 3500 ದಿಂದ 7000 ಕ್ಕೆ ಅನುಮೋದಿಸಿದ್ದು, ಸದ್ರಿ ಆದೇಶವನ್ನು ನಮ್ಮ ಅಂಚೆ ಇಲಾಖೆಯು ಇಲಾಖಾ ನೌಕರರಿಗೆ ಮಾತ್ರ ನೀಡಿ, ಬಡ ಗ್ರಾಮೀಣ ಅಂಚೆ ನೌಕರರಿಗೆ ನೀಡದೆ ಶೋಷಿಸುತ್ತಾ ಬಂದಿದೆ ಎಂದರು.

ಕೇಂದ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್. ಮಹಾದೇವಯ್ಯನವರು ನೆತ್ರತ್ವದಲ್ಲಿ ಉಡುಪಿ ಪ್ರಧಾನ ಅಂಚೆ ಕಛೇರಿಯ ಎದುರುಗಡೆ ಧರಣಿ ಹಮ್ಮಿಕೊಳ್ಳಲಾಯಿತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಸಂತೋಷ ಮಧ್ಯಸ್ಥ, ಖಜಾಂಜಿ ರಮಾನಾಥ ಆರ್. ಮೊಲಿ.ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಡುಪಿ ಅಂಚೆ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

Exit mobile version