Kundapra.com ಕುಂದಾಪ್ರ ಡಾಟ್ ಕಾಂ

ಅಯ್ಯಪ್ಪ ಸ್ವಾಮಿ ವ್ರತಧಾರಿಯನ್ನು 600ಕಿ.ಮೀ. ಹಿಂಬಾಲಿಸಿದ ಬಿದಿನಾಯಿ!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಶಬರಿಮಲೆ ಯಾತ್ರೆಗೆ ತಮಿಳುನಾಡಿನಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯಪ್ಪಸ್ವಾಮಿ ವೃತಧಾರಿಯೋರ್ವರಿಗೆ ಬೀದಿ ನಾಯಿಯೊಂದು ಸಾಥ್ ನೀಡಿದ್ದು 600ಕಿ.ಮೀ ಅವರೊಂದಿಗೆ ತೆರಳಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ವೃತಧಾರಿ ಪ್ರವಾಸದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಉಡುಪಿ ಮಾರ್ಗವಾಗಿ ಶಬರಿಮಲೆ ಯಾತ್ರೆಗೆ ಕಾಲ್ನಡಿಗೆ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ನವೀನ್ ಅವರನ್ನು ನಾಯಿ ಹಿಂಬಾಲಿಸುತ್ತಿದ್ದಾಗ ಈ ಮಾಹಿತಿ ತಿಳಿದಿದೆ. ಕೇರಳದ ಕೋಳಿಕೋಡ್ ಮೂಲದವರಾಗಿರುವ ನವೀನ್ ಡಿಸೆಂಬರ್ ೭ರಂದು ಯಾತ್ರೆ ಆರಂಭಿಸಿದ್ದಾರೆ. ಆರಂಭದಲ್ಲಿ ಹಲವು ಬೀದಿ ನಾಯಿಗಳಂತೆ ಇದು ಹಿಂಬಾಲಿಸುತ್ತಿರಬೇಕು ಎಂದುಕೊಂಡು ಅದನ್ನ ಓಡಿಸಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅವರು ಅನೇಕ ಸಲ ಪ್ರಯತ್ನಿಸಿದರೂ ಅದು ಹೋಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ.

600 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಅವರು 17 ದಿನಗಳ ಕಾಲ ಕಾಲ್ನಡಿಗೆ ಮುಗಿಸಿದ್ದು, ಶಬರಿಮಲೆಯಿಂದ ಹಿಂತಿರುಗುತ್ತಿದ್ದಾಗ ಸಹ ಶ್ವಾನ ಇವರನ್ನ ಹಿಂಬಾಲಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇವರ ಪಕ್ಕದಲ್ಲೇ ಕುಳಿತುಕೊಂಡಿದೆ. ಕೇರಳ ರಾಜ್ಯ ವಿದ್ಯುತ್ ಮಂಡಳಿ ಉದ್ಯೋಗಿಯಾಗಿರುವ ನವೀನ್, ಈ ಶ್ವಾನದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ. ಯಾತ್ರೆಯ ಉದ್ದಕ್ಕೂ ಅವರಿಗೆ ಸಾಥ್ ನೀಡಿರುವ ಇದಕ್ಕೆ ಮಾಲು ಎಂದು ಹೆಸರಿಟ್ಟಿದ್ದಾರೆ. ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಆರೈಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

 

 

Exit mobile version