ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೈಕಂಬ್ಳಿ ಸಂಯೋಜನೆಯ ಯಕ್ಷ ಸಂಕ್ರಾಂತಿ ಯಕ್ಷಗಾನವು ಜನವರಿ 14ರ ರಾತ್ರಿ ಮಾರಣಕಟ್ಟೆಯಲ್ಲಿ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ಪೌರಾಣಿಕ ಪ್ರದರ್ಶನಗೊಳ್ಳಲಿದೆ.
ಶ್ರೀ ಕೃಷ್ಣ-ಶ್ರೀ ರಾಮ-ಶ್ರೀ ರಾಜಾರಾಮ ಎಂಬ ಮೂರು ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ರಾಘವೇಂದ್ರ ಮಯ್ಯ, ರವಿ ಕುಮಾರ್ ಸುರಾಲು, ಆರ್ಗೋಡು, ಮಂಕಿ ಈಶ್ವರ ನಾಯ್ಕ್, ರಾಜೇಶ ಭಂಡಾರಿ, ವಂಡಾರು, ತುಂಬ್ರಿ ಜೊತೆಗೆ ಅತಿಥಿಯಾಗಿ ಹಿಲ್ಲೂರು, ಚಂದ್ರಕಾಂತ್ ಮೂಡುಬೆಳ್ಳೆ ಮೇಳೈಸಲಿದ್ದಾರೆ. ಜಲವಳ್ಳಿ ಮಾಗಧ ಮತ್ತು ಸು. ಚಿಟ್ಟಾಣಿ ಕೃಷ್ಣ ಈ ಭಾಗದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಪ್ರಪ್ರಥಮವಾಗಿ ಶಶಿಕಾಂತ ಶೆಟ್ಟಿ ವಾಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕ್ಯಾದಿಗೆ, ಜಾರ್ಕಳ ಜೋಡಿ ಹಾಸ್ಯ ಮೆರಗು ಹೆಚ್ಚಿಸಲಿದೆ.
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ನಂದ್ರೋಳ್ಳಿ ಇದರ ಸಹಾಯಾರ್ಥ ನಡೆಯುವ ಈ ಕಾರ್ಯಕ್ರಮದಲ್ಲಿ ಚೌಕಿಮನೆ ಗುರು ಆರ್ಗೋಡು ಮೋಹನದಾಸ್ ಶೆಣೈಯವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ ಯವರು ತಿಳಿಸಿದ್ದಾರೆ.
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9741474255