Kundapra.com ಕುಂದಾಪ್ರ ಡಾಟ್ ಕಾಂ

ಉತ್ತಮ್ ವಿಲನ್ ಚಿತ್ರದ ನಿಷೇಧಕ್ಕೆ ಆಗ್ರಹ

ಚೆನ್ನೈ : ಕಮಲ ಹಾಸನ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ‘ಉತ್ತಮ್ ವಿಲನ್’ ಚಿತ್ರಕ್ಕೆ ನಿಷೇಧ ಹೇರಬೇಕೆಂಬ ಹಿಂದೂ ಸಂಘಟನೆಗಳ ಹೋರಾಟಕ್ಕೆ ಮುಸ್ಲಿಂ ಸಂಘಟನೆಗಳು ಬೆಂಬಲ ಸೂಚಿಸಿವೆ.

ಈ ಚಿತ್ರದ ಹಾಡೊಂದರಲ್ಲಿ ಹಿಂದೂಗಳ ಭಾವನೆಯನ್ನು ನೋಯಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ದೂರಿದೆ. ಧಾರ್ಮಿಕ ಭಾವನೆಗಳನ್ನು ಕೆಣಕುವುದು ಕಮಲ್ ಅವರ ಹಳೆಯ ಚಾಳಿ. ತಮ್ಮ ಹಿಂದಿನ ಚಿತ್ರ ವಿಶ್ವರೂಪಂ’ನಲ್ಲಿ ಮುಸ್ಲಿಮರನ್ನು ಕೀಳಾಗಿ ಚಿತ್ರಿಸಲಾಗಿತ್ತು. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ‘ಇಂಡಿಯನ್ ನ್ಯಾಷನಲ್ ಲೀಗ್'(ಐಎನ್‌ಎಲ್) ಸ್ಥಳೀಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದೆ.

ಉತ್ತಮ್ ವಿಲನ್ ಚಿತ್ರದಲ್ಲಿ ಬರುವ ಇರನಿಯನ್ ನಾದಗಮ್ ಎಂಬ ಹಾಡು ಭಗವಾನ್ ವಿಷ್ಣುವಿನ ಆರಾಧಕರಿಗೆ ಆಘಾತ ತರುವಂತಿದೆ ಎಂದು ವಿಎಚ್‌ಪಿ ಹೇಳಿತ್ತು. ವಿಷ್ಣು ಮತ್ತು ಪ್ರಹ್ಲಾದನ ನಡುವಿನ ಸಂಭಾಷಣೆಯನ್ನು ಈ ಹಾಡು ಕೆಟ್ಟದಾಗಿ ಚಿತ್ರಿಸಿದೆ ಎಂದು ವಿಎಚ್‌ಪಿ ಆರೋಪಿಸಿತ್ತು.

Exit mobile version