ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು/ಕುಂದಾಪುರ: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು ಭಟ್ಕಳ ಮಾರ್ಗದಲ್ಲಿ ಹೊಸತಾಗಿ ಆರಂಭಿಸಿದ ವೋಲ್ವೋ ಬಸ್ ಸೇವೆಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಭಟ್ಕಳ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಶಿರೂರು, ಬೈಂದೂರು ಹಾಗೂ ಕುಂದಾಪುರ ಮೊದಲಾದೆಡೆ ನಾಗರಿಕರು ನೂತನ ಬಸ್ಸನ್ನು ಸ್ವಾಗತಿಸಿದರು.
ಶಿರೂರಿನಲ್ಲಿ ಜೆಸಿಐ ಶಿರೂರು ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ಸ್ವಾಗತಿಸಿಕೊಂಡು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರನ್ನು ಗೌರವಿಸಲಾಯಿತು. ಬೈಂದೂರಿನ ಸಾರ್ವಜನಿಕರು ಬಸ್ಸುನ್ನು ಬರಮಾಡಿಕೊಂಡ ಬಳಿಕ ಕೆಎಸ್‌ಆರ್‌ಟಿಸಿ ಅಧ್ಯಕ್ಷರನ್ನು ಗೌರವಿಸಿದರು. ಕುಂದಾಪುರದಲ್ಲಿಯೂ ನೂತನ ಬಸ್ಸನ್ನು ಸಾರ್ವಜನಿಕರು ಸ್ವಾಗತಿಸಿಕೊಂಡರು.
► ಮಂಗಳೂರು-ಭಟ್ಕಳ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್ಸಿಗೆ ಚಾಲನೆ – http://kundapraa.com/?p=21783
► ಮಾ.5ರಿಂದ ಮಂಗಳೂರು-ಭಟ್ಕಳ ನೂತನ ವೋಲ್ವೋ ಬಸ್ ಸೇವೆ – http://kundapraa.com/?p=21752
=