ವಿಶ್ವನಾಥ ನಾಯ್ಕ್ ಬೆಳ್ವೆ || ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ
ಕುಂದಾಪುರ: ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆ ಮತ್ತೆ ಬರುತ್ತಿದೆ. ಕುಡುಬಿ ಸಮುದಾಯದ ಹೋಳಿ ಆಚರಣೆಯ ಪರ್ವಕಾಲವದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆಕರ್ಷಕ ವೇಷಭೂಷಣಗಳೊಂದಿಗೆ ಕೊಂಕಣಿ ಭಾಷೆಯಲ್ಲಿ ರಾಮಾಯಣ – ಮಹಾಭಾರತದ ಕಥೆಯನ್ನು ಸಾರುವ ಹಾಡು ಗುನುಗುತ್ತಾ, ಗುಮ್ಮಟೆ ನುಡಿಸುತ್ತಾ ಜಾನಪದ ನೃತ್ಯದಲ್ಲಿ ನಿರತರಾಗಿರುವ ಕುಡುಬಿ ಮತ್ತು ಮರಾಟಿ ಸಮುದಾಯದ ಹೋಳಿ ಮೇಳಗಳು ಕಾಣಸಿಗುತ್ತವೆ.
ಹೋಳಿ ಪೂರ್ವಸಿದ್ಧತೆ:
ಕುಡುಬಿ ಸಮುದಾಯದ ಹೋಳಿ ಆಚರಣೆ ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆಯವರೆಗೆ ಆದರೂ ಕೂಡ ನಿಯಮ ನಿಷ್ಠೆಗಳು ಅiವಾಸ್ಯೆಯಿಂದಲೇ ಆರಂಭವಾಗುತ್ತವೆ. ಅಮವಾಸ್ಯೆಯ ನಂತರ ಮಾಂಸ, ಮದಿರೆಗಳನ್ನು ತ್ಯಜಿಸಿ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ಪ್ರತಿ ಗ್ರಾಮದ ಕುಡುಬಿ ಕೂಡುವಳಿಯ (ಕುಡುಬಿ ಸಮುದಾಯದಅಲ್ಲಲ್ಲಿ ಕೂಡು ಕಟ್ಟುಗಳಿರುತ್ತವೆ, ಇದರ ಯಜಮಾನನನ್ನು ಗುರಿಕಾರನೆಂತಲೂ ಅವರ ಮನೆಯನ್ನು ಹತ್ತರಕಟ್ಟೆ ಎಂದು ಕರೆಯಲಾಗುತ್ತದೆ.) ಯಜಮಾನ ಪ್ರತಿ ಮನೆಗೂ ಪಂಚಾಯತಿಯ ಹೇಳಿಕೆ ನೀಡಿ ಕೂಡುಕಟ್ಟಿನ ಮನೆಯಲ್ಲಿ ಎಲ್ಲರನ್ನು ಒಟ್ಟುಗೂಡಿಸುತ್ತಾನೆ. ಕೂಡುವಳಿಯೊಳಗೆ ಏನೇ ವಾದ-ವಿವಾದ ಸಮಸ್ಯೆಗಳಿದ್ದರೆ ಪಂಚಾಯತಿಗೆ ತಿಳಿಸಿ ತೀರ್ಮಾನಕ್ಕೆ ಬರಲಾಗುತ್ತದೆ. ಪ್ರಮುಖ ನಿರ್ಧಾರಗಳನ್ನು ಕೈಗೊಂಡ ನಂತರ ತುಳಸಿಕಟ್ಟೆಯಲ್ಲಿ ಸಿಪ್ಪೆಸಹಿತ ತೆಂಗಿನಕಾಯಿಯನ್ನು ಪ್ರತಿಷ್ಟಾಪಿಸಿ ಹಾಡಿನೊಂದಿಗೆ ಕುಲದೈವಗೋವೆಯ ಶ್ರೀ ಮಲ್ಲಿಕಾರ್ಜುನದೇವರನ್ನು ಸ್ಮರಿಸಿಕೊಂಡು ಗುಮ್ಮಟೆ ಕುಣಿತದ ತರಭೇತಿಯನ್ನು ’ಗುಮ್ಟಾಗುರು’ ಮತ್ತು ಕೋಲಾಟದ ತರಭೇತಿಯನ್ನು ಕೋಲಾಟದ ಗುರುವಿನ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಈ ಕುಣಿತದ ತರಭೇತಿಯು ನವಮಿಯತನಕ ಸಂಜೆಯಿಂದ ಮಧ್ಯರಾತ್ರಿಯತನಕ ನಡೆಯುತ್ತದೆ. ದಶಮಿಯ ದಿನದಂದು ರಾತ್ರಿ ಮೈಗೆ ಎಣ್ಣೆ ಹಾಕಿ ಸ್ನಾನ ಮಾಡಿ ಮನೆದೇವರಿಗೆ ಅಬ್ಬಲಿಗೆ ಹೂವನ್ನು ಅರ್ಪಿಸಿ ವೇಷಕ್ಕೆ ಕುಳಿತುಕೊಳ್ಳುತ್ತಾರೆ.
ವೇಷಭೂಷಣ:
ತಲೆಗೆರುಮಾಲನ್ನು ಸುತ್ತಿ, ಹಣೆಯ ಮುಂಭಾಗದಲ್ಲಿ ಹಟ್ಟಿಮುದ್ದ (Scientific Names: Asian paradise flycatcher and Greater Racket) ಎಂಬ ಪಕ್ಷಿಯಗರಿಯನ್ನು ಸಿಕ್ಕಿಸಲಾಗುತ್ತದೆ. ನಂತರ ರುಮಾಲಿಗೆ ಜರಿಯನ್ನು ಸುತ್ತಿ ಅಬ್ಬಲಿಗೆ ಹೂವನ್ನು ಅಥವಾ ಬಣ್ಣದಕಾಗದದ ಹೂವಿನ ಸರವನ್ನು ಸುತ್ತಲಾಗುತ್ತದೆ. ಪ್ಶೆಜಾಮವನ್ನು ಕಟ್ಟಿಕೊಂಡು ಕಾಲಿಗೆ ಗೆಜ್ಜೆಯನ್ನು ಕಟ್ಟಿ, ಸೀರೆಯನ್ನು ದೇವಿಗೆ ಉಡಿಸುವಂತೆ ನೆರಿಗೆತೆಗೆದು ಪ್ಶೆಜಾಮದ ಮೇಲೆ ಉಟ್ಟು ನೆರಿಗೆ ಅಂಗಿಯನ್ನು ತೊಟ್ಟುಕೊಂಡು ಅದರ ಮೇಲೆ ಜರಿಯ ಶಾಲುಗಳನ್ನು ಇಳಿಬಿಡಲಾಗುತ್ತದೆ. ಸೊಂಟಕ್ಕೆ ಸೊಂಟಪಟ್ಟಿಯನ್ನು ಕಟ್ಟಿದಾಗ ವೇಷಗಾರಿಕೆ ಪೂರ್ಣಗೊಳ್ಳುತ್ತದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಹಬ್ಬದಆಚರಣೆ:
ಹೋಳಿ ಮೇಳದವರ ವೇಷಗಾರಿಕೆ ಪೂರ್ಣಗೊಂಡ ನಂತರ ಮನೆದೇವರಿಗೆ ವಂದಿಸಿ ಹಾಡು ಮತ್ತು ಹೋಳಿ ಕುಣಿತದೊಂದಿಗೆ ತಮ್ಮ ತಮ್ಮ ಮನೆಯನ್ನು ತೊರೆದು ಗುರಿಕಾರನ ಮನೆಯನ್ನು ಬೆಳಗ್ಗಿನ ಜಾವ ಸೇರುತ್ತಾರೆ. ಇಲ್ಲಿಂದಲೇ ಸಂಪ್ರದಾಯ ಬದ್ಧವಾಗಿ ಹೋಳಿ ಆರಂಭವಾಗುತ್ತದೆ. ಹಬ್ಬದ ಆರಂಭದ ಒಂದೆರಡು ದಿನಗಳಲ್ಲಿ ಬೇರೆ ಊರುಗಳಲ್ಲಿರುವ ಸ್ವಜಾತಿ ಭಾಂಧವರ ಮನೆಗಳಿಗೆ ತೆರಳಿ ಗುಮ್ಮಟೆ ಹಾಗೂ ಕೋಲಾಟದ ಕುಣಿತವನ್ನು ಮಾಡಿ ಅವರ ಅತಿಥ್ಯವನ್ನು ಸ್ವೀಕರಿಸುತ್ತಾರೆ. ನಂತರ ತಮ್ಮ ಊರುಗಳಿಗೆ ಮರಳಿ ತಮ್ಮ ಊರಿನಲ್ಲಿರುವ ಎಲ್ಲರ ಮನೆಗಳಲ್ಲಿ ಜಾತಿ-ಧರ್ಮ ಭೇಧವಿಲ್ಲದೆ ಹೋಳಿ ಕುಣಿತದ ಪ್ರದರ್ಶನವನ್ನು ನೀಡುತ್ತಾರೆ. ಕುಣಿತಕ್ಕೆ ಮನೆ ಮನೆಗೆ ಹೋದಾಗ ಯಾವುದೇ ಜಾತಿಯವರಾದರೂ ಯಾವುದೇ ಧರ್ಮದವರಾದರೂ ಅಕ್ಕಿ, ತೆಂಗಿನಕಾಯಿಯನ್ನು ವೀಳ್ಯಸಹಿತ ಕಾಣಿಕೆ ನೀಡಿ ಗೌರವಿಸುತ್ತಾರೆ.
ಮೇಳದವರ ವೃತನಿಷ್ಟತೆ:
ಹೋಳಿ ಮೇಳಗಳಲ್ಲಿ ಪುರುಷರಿಗೆ ಮಾತ್ರ ಅವಕಾಶ. ಕೂಡುಕಟ್ಟಿನ ಮನೆಯಿಂದ ಹೊರಟಗಂಡಸರು ಹಬ್ಬ ಮುಗಿಯುವತನಕ ಮನೆ ಸೇರಬಾರದೆಂಬ ಸಂಪ್ರದಾಯವಿದೆ. ಹಬ್ಬ ಮುಗಿಯುವವರೆಗೆ ಮಾಂಸ, ಮದಿರೆ ಮತ್ತು ಮಾನಿನಿಯ ವ್ಯರ್ಜ್ಯಕಡ್ಡಾಯವಾಗಿದೆ.
ಹೋಳಿ ಹಬ್ಬದ ಮುಕ್ತಾಯ:
ಹೋಳಿ ಹುಣ್ಣಿಮೆಯ ದಿನದಂದುಕೂಡುಕಟ್ಟಿನ ಮನೆಯಲ್ಲಿ ವರ್ಷದಕೊನೆಯ ಹೋಳಿ ಕುಣಿತವನ್ನು ಮಾಡಿ, ಕುಣಿತಕ್ಕೆಅಚಿತಿಮ ಹಾಡುತ್ತಾರೆ. ಸಾಮೂಹಿಕ ಸ್ನಾನದ ನಂತರಕಾಮದಹನ(ಬೆಂಕಿ ಹಾಯುವುದು) ಕಾರ್ಯಕ್ರಮದೊಂದಿಗೆ ವರ್ಣರಂಜಿತ ಹೋಳಿ ಮುಕ್ತಾಯವಾಗುತ್ತದೆ. ಹಬ್ಬದ ಬಟ್ಟೆಗಳನ್ನು ಸ್ವಚ್ಛಮಾಡಿ, ಮಣ್ಣಿನ ಪಾತ್ರೆಗಳಲ್ಲಿ ಜೋಪಾನವಾಗಿಡಲಾಗುತ್ತದೆ. ಮತ್ತೆ ಹೋಳಿಯ ವೇಷಭೂಷಣ ನೋಡುವುದು ಮತ್ತುಗುಮ್ಮಟೆಯಧ್ವನಿ ಕೇಳುವುದು ಮುಂದಿನ ವರ್ಷ.
ಪ್ರಾರ್ಥನೆ ಹಾಡು:
ಗೊಂಯೇತ್ತನ್ನುಎಲ್ಲೆಗೆ ಮಂಯೇ
ಕಂಸೋಬಾಂದ್ದೋಎಂಗ್ಗಣಾಉಭೆರಾಭೇಲ್ಲಾ
ಕಂಸೋಬಾಂದ್ದೋಎಂಗ್ಗಣಾಉಭೆರಾಭೇನ್ನು
ಚಾರಿ ಸೊಕ್ಕ ಕಟ್ಟೆದರೇಲ್ಲಾ
ಚಾರಿ ಸೊಕ್ಕ ಕಟ್ಟೆದರೇನ್ನು
ಪರೋಲ್ಸಾ ಗೃಸ್ತ ಸಾಂಗನ್ನು ಅಳ್ಳಾ
ಪರೋಲ್ಸಾ ಗೃಸ್ತ ಸಾಂಗನ್ನುಅಣ್ಣೆ
ಕೇಳಿಚಾ ಪತ್ಯ ಮಂಟಪೊಗಡೇಲ್ಲಾ
ಕೇಳಿಚಾ ಪತ್ಯ ಮಂಟಪೊಗಡೇನ್ನು
ತೊಳೋಸೆ ಮಂಯೇ ಸೀರಿಂಗರು ಕಲ್ಯಾ
ತೊಳೋಸೆ ಮಂಯೇ ಸೀರಿಂಗರು ಕನ್ನು
ಚಾರಿ ಸೊಕ್ಕ ವತ್ತಿ ನಾಮೇಲ್ಲಾ
ಚಾರಿ ಸೊಕ್ಕ ವತ್ತಿ ನಾಮೇನ್ನು
ಸಾತೋ ವತ್ತಿಲ್ಯಾಆರ್ತಿಕರೇಲ್ಲಾ
ಸಾತೋ ವತ್ತಿಲ್ಯಾಆರ್ತಿಕರೇನ್ನು
ತೋಳೋಸೆ ಮಂಯೇಕೊಗೋಂಯಿಂದ್ಯೂಗಾರೆಲ್ಲಾ.
ಕೋಲಾಟ ಪ್ರಾರಂಭಿಸುವ ಹಾಡು
ಪತಳಿ ಅಗಣ ನಗತ ಮುಜೆದವನಿ||
ಬೆತಳಕೆ ದೆವನಿ ಉದೊಡ ದಿಲವೂ||
ಸೆಟ್ಟಿರಸಲು ಭೂಮಿ ಯಳು ದಲ್ಯೆವೂ||
ಸೆಟ್ಟಿ ಶಿಣ್ಪೆಲೋಭೂವಿಯಳು ದ್ಯಾರೂವೂ||
ಮದಮಗರೆಲೊ ಕೆಳು ಯಡೆಲ್ಲೊ||
ಸದನದೆರನಿ ತಾಯೆಗಾರ್‌ಲ್ಲೆವೂ||
ಕೈಯರೋ ಮಾಹಿದೆವೂಉಪುದರಲ್ಲೂರನ್ನವೂರಿ||
ಆಣೆ ವರಿಕರಿರವಜ ಪಣಿಯ ಆಗೆ||
ಪಲ್ಲವೊ ಸೌದ್ಯಾಕಲ್ಲೆ ಎಕಿ ತೊಣೆ||
ತೀತೋಣೆದೆಕ್ಕೊಲಿ ಬಾಳುಕು ಮಣುತ್ಯಾಇಸಪುರುದೇವದಲ್ಲೊ||
ಇಸುಪುರುದೇವನಿ ಗತ್ಯಲೋಗೋಡಲವ್||
ಖಂಡ ಪ್ರತಿಮೆ ಎಕ್ಕುಚೆ ಹೆಡಾವೊ||
ತೈತೊಕೋಟೆದೇವನಿ ಸಿಗ್ಗುಮು ರಶೆಲೋ||
ಸಿಗ್ಗುಮು ಕೈಳತೊ ಕಿತ್ತು ದಿಸುರೆದೇವತೂ||
ಇಸುಪುರುದೇವನಿ ಒಳೇರಿ ಕಾಮುಗಾರೆಲ್ಲೊವೆ||
ದೇವತೂ ಒಳೆರಿ ಬಂದಾನ ಪೋಳಿ||
ಸಿಗಿಮು ಕೇಳೊತೊ ಪಾಸು ದಿಸರೆದೇವತೂ||
ಸಿದೂರು ಕುಕುಮ ನರೆಯನಿ ಕರುನಗಲ್ಲೆ||
ಶ್ರೀಮತಿಗೆ ಸಿರಿಸಿಗರು ಸಪುಣದಲ್ಯಾ||
ಸುರುಣಾತಟರಗೆರೆ ನರನಿ ಅಲೆ ಬರೆಲ್ಲಾ||
ಪಾಸು ನಾರಲ್ಲಆರತಿ ನರೆ ಬರು ನಾಗಲ್ಲಾ||
ಸಹವಣಜ್ಯೋತಿ ನರೆ ನಾವು ನಗಲ್ಲಾ||
ಮುಕು ಬದೋದರೋಬಾರಿಆರಿತ್ತಿ ಪುಜೆಲ್ಲೊ||
ಕೆಳೊಚ ಗ್ಯಾಡನಗಿಆರತ್ತಿ ದಿವೆಲ್ಲೊ ||
ಕೆಳೊಚ ಮಡ್ಯ ಮದ್ಯಆರತಿ ಬಡಲ್ಲೊ ||
ತೈತೊಕೋಟೆದೇವನಿ ಆರತಿಗಿವೆಲ್ಲೊ||
ಮುಳುಚ ಮಳುಪತ್ರಿ ದೇವನಿ ಆರತಿ ಗಿವಿಲ್ಲೊ||
ಪಾಸು ಪುತ್ರನ ಪಸು ಪಂಡವ ಸಾಸೊಣ||
ಅತ್ತಿಗಲ್ಲೆಕಂಕಣ ಲವ್ಯ ಲಕ್ಷಣ||
ಗಾಳ್ಯ ಗಾಲ್ಯಾ ಪ್ಯಾರಆರಿಪಣ||
vishwanathbelve@gmail.com