Kundapra.com ಕುಂದಾಪ್ರ ಡಾಟ್ ಕಾಂ

ನಮ್ಮ ಕುಂದಾಪುರ ಮೂಲದವರು ಜ್ಯೂನಿಯರ್ ಎನ್‌ಟಿಆರ್!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟಾಲಿವುಡ್‌ನ ಪ್ರಖ್ಯಾತ ನಟ, ತೆಲುಗು ಸಿನಿಪ್ರೀಯರ ಕಣ್ಮಣಿ, ಜ್ಯೂನಿಯರ್ ಎನ್‌ಟಿಆರ್ ಕುಂದಾಪುರ ಮೂಲದವರು!

ಹೌದು. ಇಂತಹದ್ದೊಂದು ಹುಬ್ಬೇರಿಸುವ ಕಥೆಯನ್ನು ಸ್ವತಃ ಜ್ಯೂನಿಯರ್ ಎನ್‌ಟಿಆರ್ ಅದೂ ಶುದ್ಧ ಕನ್ನಡದಲ್ಲಿಯೇ ಹೇಳಿಕೊಂಡಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಎನ್.ಟಿ. ರಾಮ ರಾವ್ ಅವರ ಮೊಮ್ಮಗನಾಗಿರುವ ಜ್ಯೂನಿಯರ್ ಎನ್‌ಟಿಆರ್ ಐಫಾ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಭಾವುಕರಾಗಿ ತಮ್ಮ ಕುಂದಾಪುರದ ನಂಟನ್ನು ಬಿಚ್ಚಿಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಏನಂದ್ರು ಜ್ಯೂ. ಎನ್‌ಟಿಆರ್:
ಐಫಾ ಚಿತ್ರೋತ್ಸವದ ಕೊನೆಯ ದಿನ ಅವರ ’ಜನತಾ ಗ್ಯಾರೇಜ್’ ಸಿನೆಮಾ ನಟನೆಗೆ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಹತ್ತಿದ್ದರು. ಕಾಕತಾಳಿಯವೆಂಬಂತೆ ಕರಾವಳಿಯ ನಟ ರಕ್ಷಿತ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲು ವೇದಿಕೆಗೆ ಬಂದಿದ್ದರು. ನಿರೂಪಕರು ನಟ ರಕ್ಷಿತ್ ಶೆಟ್ಟಿ ಅವರ ಪರಿಚಯ ಮಾಡುತ್ತಿದ್ದಾಗ ಅವರ ಊರಿನ ಬಗೆಗೆ ಹೇಳುತ್ತಿದ್ದರು. ಆಗ ಜ್ಯೂನಿಯರ್ ಎನ್‌ಟಿಆರ್ ತನಗೂ ಕರಾವಳಿಗೂ ಇರುವ ನಂಟನ್ನು ಬಿಚ್ಚಿಟ್ಟರು.

ನನ್ನ ಅಮ್ಮ ಕನ್ನಡದವರು. ಅವರು ಮೂಲತಃ ಕುಂದಾಪುರದವರು. ತನ್ನ ತಾತ ಎನ್‌ಟಿಆರ್ ಕುಟುಂಬದ ಹಾಗೆಯೇ ನಮ್ಮ ಅಮ್ಮನದ್ದು ದೊಡ್ಡ ಕುಟುಂಬ ಆಗಾಗ ನಾನೂ ಅಲ್ಲಿಗೆ ಹೋಗಿ ಬರುತ್ತೇನೆ. ಕನ್ನಡ ಹಾಗೂ ಕರ್ನಾಟಕ ನನ್ನ ಬದುಕಿನಲ್ಲಿ ಗೊತ್ತಿಲ್ಲದೇ ಬೆಸೆದುಕೊಂಡಿದೆ ಎಂದು ಹೇಳುತ್ತಾ ಭಾವುಕರಾದರು. ಕುಂದಾಪ್ರ ಡಾಟ್ ಕಾಂ.

ತೆಲುವು ಚಿತ್ರನಟ ನಂದಮುರಿ ಹರಿಕೃಷ್ಣನ್ ಹಾಗೂ ಶಾಲಿನಿ ಭಾಸ್ಕರ್ ರಾವ್ ದಂಪತಿಯ ಪುತ್ರರಾಗಿರುವ ಜ್ಯೂನಿಯರ್ ಎನ್‌ಟಿಆರ್ ಹುಟ್ಟಿ ಬೆಳೆದಿದ್ದೆಲ್ಲವೂ ಹೈದರಾಬಾದಿನಲ್ಲಿ. ಅವರ ತಾಯಿ ಶಾಲಿನಿ ಅವರ ಹುಟ್ಟೂರು ಕುಂದಾಪುರ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬ. ಚಿಕ್ಕವರಿರುವಾಗಲೇ ಹೈದರಾಬಾದಿಗೆ ಹೋಗಿ ನೆಲೆಸಿದ್ದರು. ಆದರೆ ಈಗಲೂ ಅಮ್ಮ ಮಗ ಕುಂದಾಪುರದ ನಂಟು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Telugu actor junior ntr mother origin is kundapura. Junior nrt knows kannada well and told his link with kundapura in iifa award ceremony

Exit mobile version