ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಆಳ್ವಾಸ್ ಪ್ರಗತಿ ೨೦೧೭ ಬೃಹತ್ ಉದ್ಯೋಗ ಮೇಳದಲ್ಲಿ ೧೬ ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದು, ೧೨೫ ಕಂಪೆನಿಗಳಲ್ಲಿ ೧೦೫೮ ನೇರ ಉದ್ಯೋಗ ನೇಮಕಾತಿ, ೨೯೧೮ ಮಂದಿ ಉದ್ಯೋಗದ ಅರ್ಹತೆಯನ್ನು ಪಡೆದಿದ್ದಾರೆ. ೮೩ಕಂಪೆನಿಗಳು ಶೀಘ್ರದಲ್ಲಿ ಉದ್ಯೋಗ ಆಯ್ಕೆಯಾದವರ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.
ಪ್ರತಿಷ್ಠಿತ ಅಮೆಜಾನ್ ೭೨, ಗುಜರಾತ್ ಮೂಲದ ಎಬ್ಝ್‌ಲೂಟ್ ಸರ್ವೇಯರ್‌ಗೆ ೨೦, ಯುಎಇ ಎಕ್ಸಚೆಂಜ್‌ಗೆ ೫, ಎನ್‌ಎಂಸಿಗೆ ೧೧ ಸಹಿತ ವಿವಿಧ ಕಂಪೆನಿಗಳು ಉದ್ಯೋಗವಕಾಶ ಕಲ್ಪಿಸಿದೆ. ಯುಎಇ ಎಕ್ಸಚೆಂಚ್ ವಾರ್ಷಿಕ ೭.೩ ಲಕ್ಷ ರೂ., ಎನ್‌ಎಂಸಿ ರೂ.೬ ಲಕ್ಷ, ಡೆಕಾತ್ಲಾನ್ ಸ್ಪೋಟ್ಸ್ ೩ ಲಕ್ಷ, ಅಮೆಜಾನ್ ೨.೩ ಲಕ್ಷ ರೂ. ಅಭ್ಯರ್ಥಿಗಳಿಗೆ ಆಫರ್ ಮಾಡಿದೆ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಅಳ್ವ ಪ್ರಗತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ೪೦೦ ಅಧಿಕ ಉಪನ್ಯಾಸಕರು ಸಿಬ್ಬಂದಿಗಳು ೧,೫೦೦ ಅಧಿಕ ವಿದ್ಯಾರ್ಥಿ ಸ್ವಯಂ ಸೇವಕರು ಎರಡು ತಿಂಗಳ ನಿರಂತರವಾಗಿ ಶ್ರಮಿಸಿದರುವುದರಿಂದ ಪ್ರಗತಿ ಯಶಸ್ವಿಯಾಗಿದೆ. ಪ್ರಗತಿಯಲ್ಲಿ ಉದ್ಯೋಗ ಪಡೆದು, ಪ್ರತಿಷ್ಠಿತ ಕಂಪೆನಿಗಳಲ್ಲಿ ದುಡಿಯುತ್ತಿರುವ ಆಳ್ವಾಸ್‌ನ ಹಳೇ ವಿದ್ಯಾರ್ಥಿಗಳು ಕೂಡ ಕೈಜೋಡಿಸಿರುವುದರಿಂದ ವ್ಯವಸ್ಥಿತ ರೀತಿಯಲ್ಲಿ ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಪ್ರಗತಿಯಲ್ಲಿ ಸ್ವಯಂ ಸೇವಕರಿಗೆ ಕಂಪೆನಿಗಳನ್ನು ನೇರ ಪರಿಚಯಿಸಿಕೊಳ್ಳುವ ಸಂದರ್ಶನವನ್ನು ವಿಧಾನಗಳನ್ನು ಅರಿಯುವ, ಕಾರ್ಯಕ್ರಮ ಸಂಯೋಜನೆ, ಪರಿಸ್ಥಿತಿ ನಿಯಂತ್ರಣದಂತಹ ಹಲವಾರು ವಿಷಯಗಳನ್ನು ಕಲಿಯುವ ಅವಕಾಶ ಲಭಿಸಿದೆ ಎಂದು ತಿಳಿಸಿದ್ದಾರೆ.
ಪ್ರತಿಫಲ ಅವಕಾಶವಿಲ್ಲದೆ ವಿಶಾಲ ಭಾವನೆಯಿಂದ ೯ ವರ್ಷಗಳಿಂದ ಬದ್ಧತೆಯಿಂದ ಪ್ರಗತಿಯನ್ನು ಆಯೋಜಿಸುತ್ತಿದ್ದೇವೆ. ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುವುದು ಮಾತ್ರವಲ್ಲ, ಕಂಪೆನಿ ಹಾಗೂ ಪದವೀಧರರ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು ಮುಖ್ಯ. ಈ ಕೆಲಸವನ್ನು ಆಳ್ವಾಸ್ ಸಂಸ್ಥೆಯು ಆಳ್ವಾಸ್ ಪ್ರಗತಿಯ ಮುಖಾಂತರ ಮಾಡುತ್ತಿದೆ. ಇಂತಹ ಕೆಲಸಗಳನ್ನು ಇತರ ಶಿಕ್ಷಣ ಸಂಸ್ಥೆಗಳು ಮಾಡಿದಾಗ ಪದವೀಧರರಿಗೆ ನಿಜಾರ್ಥದಲ್ಲಿ ನ್ಯಾಯ ಒದಗಿಸಿಕೊಟ್ಟಂತಾಗುತ್ತದೆ.
– ಡಾ.ಎಂ ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ
ನಮ್ಮ ಕಂಪೆನಿಯು ದೇಶ ವಿವಿಧ ಕಡೆಗಳಲ್ಲಿ ನಡೆಯುವ ಉದ್ಯೋಗ ಮೇಳಗಳಲ್ಲಿ ಪಾಲ್ಗೊಳ್ಳುತ್ತಿದೆ. ಆಳ್ವಾಸ್ ಸಂಸ್ಥೆಯು ಇಲ್ಲಿ ಅತ್ಯಂತ ವ್ಯವಸ್ಥಿತ, ಶಿಸ್ತುಬದ್ಧವಾಗಿ ಸಂಘಟಿಸುತ್ತಿದೆ. ಇದು ಮಾದರಿ ಉದ್ಯೋಗ ಮೇಳ. ಸರ್ಕಾರಗಳು ಇದೇ ಮಾದರಿಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದಾರೆ ಹೆಚ್ಚು ಫಲಪ್ರದವಾಗುತ್ತದೆ.
– ಅಶುತೋಷ್, ಎಚ್‌ಆರ್ ಮೆನೇಜರ್, ಎಬ್ಝ್‌ಲೂಟ್ ಸರ್ವೇಯರ‍್ಸ್ ಕಂಪೆನಿ, ಗುಜರಾತ್