Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಳ್ವಾಸ್ ಉದ್ಯೋಗ ಮೇಳ ಸಮಾಪನ: 16 ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳು ಭಾಗಿ
    alvas nudisiri

    ಆಳ್ವಾಸ್ ಉದ್ಯೋಗ ಮೇಳ ಸಮಾಪನ: 16 ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳು ಭಾಗಿ

    Updated:27/06/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಆಳ್ವಾಸ್ ಪ್ರಗತಿ ೨೦೧೭ ಬೃಹತ್ ಉದ್ಯೋಗ ಮೇಳದಲ್ಲಿ ೧೬ ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದು, ೧೨೫ ಕಂಪೆನಿಗಳಲ್ಲಿ ೧೦೫೮ ನೇರ ಉದ್ಯೋಗ ನೇಮಕಾತಿ, ೨೯೧೮ ಮಂದಿ ಉದ್ಯೋಗದ ಅರ್ಹತೆಯನ್ನು ಪಡೆದಿದ್ದಾರೆ. ೮೩ಕಂಪೆನಿಗಳು ಶೀಘ್ರದಲ್ಲಿ ಉದ್ಯೋಗ ಆಯ್ಕೆಯಾದವರ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆಗೊಳಿಸಬೇಕಾಗಿದೆ.

    Click Here

    Call us

    Click Here

    ಪ್ರತಿಷ್ಠಿತ ಅಮೆಜಾನ್ ೭೨, ಗುಜರಾತ್ ಮೂಲದ ಎಬ್ಝ್‌ಲೂಟ್ ಸರ್ವೇಯರ್‌ಗೆ ೨೦, ಯುಎಇ ಎಕ್ಸಚೆಂಜ್‌ಗೆ ೫, ಎನ್‌ಎಂಸಿಗೆ ೧೧ ಸಹಿತ ವಿವಿಧ ಕಂಪೆನಿಗಳು ಉದ್ಯೋಗವಕಾಶ ಕಲ್ಪಿಸಿದೆ. ಯುಎಇ ಎಕ್ಸಚೆಂಚ್ ವಾರ್ಷಿಕ ೭.೩ ಲಕ್ಷ ರೂ., ಎನ್‌ಎಂಸಿ ರೂ.೬ ಲಕ್ಷ, ಡೆಕಾತ್ಲಾನ್ ಸ್ಪೋಟ್ಸ್ ೩ ಲಕ್ಷ, ಅಮೆಜಾನ್ ೨.೩ ಲಕ್ಷ ರೂ. ಅಭ್ಯರ್ಥಿಗಳಿಗೆ ಆಫರ್ ಮಾಡಿದೆ.

    ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಅಳ್ವ ಪ್ರಗತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ೪೦೦ ಅಧಿಕ ಉಪನ್ಯಾಸಕರು ಸಿಬ್ಬಂದಿಗಳು ೧,೫೦೦ ಅಧಿಕ ವಿದ್ಯಾರ್ಥಿ ಸ್ವಯಂ ಸೇವಕರು ಎರಡು ತಿಂಗಳ ನಿರಂತರವಾಗಿ ಶ್ರಮಿಸಿದರುವುದರಿಂದ ಪ್ರಗತಿ ಯಶಸ್ವಿಯಾಗಿದೆ. ಪ್ರಗತಿಯಲ್ಲಿ ಉದ್ಯೋಗ ಪಡೆದು, ಪ್ರತಿಷ್ಠಿತ ಕಂಪೆನಿಗಳಲ್ಲಿ ದುಡಿಯುತ್ತಿರುವ ಆಳ್ವಾಸ್‌ನ ಹಳೇ ವಿದ್ಯಾರ್ಥಿಗಳು ಕೂಡ ಕೈಜೋಡಿಸಿರುವುದರಿಂದ ವ್ಯವಸ್ಥಿತ ರೀತಿಯಲ್ಲಿ ಹಮ್ಮಿಕೊಳ್ಳಲು ಸಾಧ್ಯವಾಗಿದೆ. ಪ್ರಗತಿಯಲ್ಲಿ ಸ್ವಯಂ ಸೇವಕರಿಗೆ ಕಂಪೆನಿಗಳನ್ನು ನೇರ ಪರಿಚಯಿಸಿಕೊಳ್ಳುವ ಸಂದರ್ಶನವನ್ನು ವಿಧಾನಗಳನ್ನು ಅರಿಯುವ, ಕಾರ್ಯಕ್ರಮ ಸಂಯೋಜನೆ, ಪರಿಸ್ಥಿತಿ ನಿಯಂತ್ರಣದಂತಹ ಹಲವಾರು ವಿಷಯಗಳನ್ನು ಕಲಿಯುವ ಅವಕಾಶ ಲಭಿಸಿದೆ ಎಂದು ತಿಳಿಸಿದ್ದಾರೆ.

    ಪ್ರತಿಫಲ ಅವಕಾಶವಿಲ್ಲದೆ ವಿಶಾಲ ಭಾವನೆಯಿಂದ ೯ ವರ್ಷಗಳಿಂದ ಬದ್ಧತೆಯಿಂದ ಪ್ರಗತಿಯನ್ನು ಆಯೋಜಿಸುತ್ತಿದ್ದೇವೆ. ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುವುದು ಮಾತ್ರವಲ್ಲ, ಕಂಪೆನಿ ಹಾಗೂ ಪದವೀಧರರ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು ಮುಖ್ಯ. ಈ ಕೆಲಸವನ್ನು ಆಳ್ವಾಸ್ ಸಂಸ್ಥೆಯು ಆಳ್ವಾಸ್ ಪ್ರಗತಿಯ ಮುಖಾಂತರ ಮಾಡುತ್ತಿದೆ. ಇಂತಹ ಕೆಲಸಗಳನ್ನು ಇತರ ಶಿಕ್ಷಣ ಸಂಸ್ಥೆಗಳು ಮಾಡಿದಾಗ ಪದವೀಧರರಿಗೆ ನಿಜಾರ್ಥದಲ್ಲಿ ನ್ಯಾಯ ಒದಗಿಸಿಕೊಟ್ಟಂತಾಗುತ್ತದೆ.
    – ಡಾ.ಎಂ ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ
    ನಮ್ಮ ಕಂಪೆನಿಯು ದೇಶ ವಿವಿಧ ಕಡೆಗಳಲ್ಲಿ ನಡೆಯುವ ಉದ್ಯೋಗ ಮೇಳಗಳಲ್ಲಿ ಪಾಲ್ಗೊಳ್ಳುತ್ತಿದೆ. ಆಳ್ವಾಸ್ ಸಂಸ್ಥೆಯು ಇಲ್ಲಿ ಅತ್ಯಂತ ವ್ಯವಸ್ಥಿತ, ಶಿಸ್ತುಬದ್ಧವಾಗಿ ಸಂಘಟಿಸುತ್ತಿದೆ. ಇದು ಮಾದರಿ ಉದ್ಯೋಗ ಮೇಳ. ಸರ್ಕಾರಗಳು ಇದೇ ಮಾದರಿಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದ್ದಾರೆ ಹೆಚ್ಚು ಫಲಪ್ರದವಾಗುತ್ತದೆ.
    – ಅಶುತೋಷ್, ಎಚ್‌ಆರ್ ಮೆನೇಜರ್, ಎಬ್ಝ್‌ಲೂಟ್ ಸರ್ವೇಯರ‍್ಸ್ ಕಂಪೆನಿ, ಗುಜರಾತ್

    ????????????????????????????????????
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಆರೋಗ್ಯ ಸೇವೆಯಲ್ಲಿ ಹೊಸ ಅಧ್ಯಾಯ: ಮೂಡುಬಿದಿರೆ ಭಾಗದ ಮೊದಲ ಹೃದಯ ಚಿಕಿತ್ಸಾ ಕೇಂದ್ರ

    18/12/2025

    ಖೋ-ಖೋ ಟೂರ್ನಮೆಂಟ್: ಆಳ್ವಾಸ್ ಅವಳಿ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ಸ್

    13/12/2025

    ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    08/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ: ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಭರವಸೆ
    • ಮರವಂತೆ: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆರನೇ ಶಾಖೆಯ ಉದ್ಘಾಟನೆ
    • ಆರೋಗ್ಯ ಸೇವೆಯಲ್ಲಿ ಹೊಸ ಅಧ್ಯಾಯ: ಮೂಡುಬಿದಿರೆ ಭಾಗದ ಮೊದಲ ಹೃದಯ ಚಿಕಿತ್ಸಾ ಕೇಂದ್ರ
    • ಸಣ್ಣ ಕೈಗಾರಿಕೆಗಳು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು: ಸಿ.ಇ.ಓ ಪ್ರತೀಕ್ ಬಾಯಲ್
    • ಯುವ ಸಮುದಾಯ ಕೃಷಿ ಕ್ಷೇತ್ರಕ್ಕೆ ಧುಮುಕಲಿ: ಡಾ. ಕೃಷ್ಣ ಕಾಂಚನ್

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.