Site icon Kundapra.com ಕುಂದಾಪ್ರ ಡಾಟ್ ಕಾಂ

ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಗೆ ಅಗತ್ಯವಿದೆ ಮಾನವೀಯ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಶ್ರೀ ನಾಗ ನಿಲಯ ನಿವಾಸಿ ಮಂಜಿ ಖಾರ್ವಿ (೫೭) ಅವರು ಬಾಯಿ ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಮಾನವೀಯ ನೆರವಿನ ಅಗತ್ಯವಿದೆ.

ಅಸ್ವಸ್ಥಗೊಂಡಿರುವ ಮಂಜಿ ಖಾರ್ವಿ ಅವರನ್ನು ಮೇ ೨ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಲು ಹೆಚ್ಚಿನ ಚಿಕಿತ್ಸೆಯ ನೀಡಬೇಕಾಗಿದ್ದು ವೈದ್ಯಕೀಯ ವೆಚ್ಚಕ್ಕಾಗಿ ಸುಮಾರು ೩.೫ ಲಕ್ಷ ರೂ.ಗಳ ಅಗತ್ಯವಿದೆ ಮತ್ತು ಪ್ಲಾಸ್ಟಿಕ್ ಸರ್ಜರಿಗಾಗಿ ಸುಮಾರು ಒಂದರಿಂದ ಒಂದುವರೆ ಲಕ್ಷ ರೂ.ಗಳ ಎಂದು ವೈದ್ಯರು ತಿಳಿಸಿದ್ದಾರೆ. ಬಡ ಮೀನುಗಾರ ಕುಟುಂಬದ ಇವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಮೀನುಗಾರಿಕೆ ನಡೆಸುತ್ತಿದ್ದು ಇನ್ನೊಬ್ಬ ಗ್ಯಾರೇಜ್‌ನಲ್ಲಿ ದುಡಿಯುತ್ತಿದ್ದಾನೆ. ಕಳೆದ ಎರಡು ತಿಂಗಳಿನಿಂದ ವೈದ್ಯಕೀಯ ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿರುವ ಬಡ ಕುಟುಂಬ ಮುಂದಿನ ಚಿಕಿತ್ಸೆಗಾಗಿ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದ್ದು ಸಹೃದಯಿಗಳ ಉದಾರ ನೆರವನ್ನು ಅವರು ಕೋರಿದ್ದಾರೆ.

ಮಂಜಿ ಖಾರ್ವಿ ಅವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಬಯಸುವ ಸಹೃದಯಿಗಳು ಗಂಗೊಳ್ಳಿ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಪ್ರಕಾಶ ಖಾರ್ವಿ ಅವರ ಖಾತೆ ಸಂಖ್ಯೆ 0604101015664 (ಐಎಫ್‌ಎಸ್‌ಸಿ ಸಂಖ್ಯೆ CNRB0000604 ) ಹಣ ವರ್ಗಾಯಿಸಿ ನೆರವಾಗಬಹುದು.

Exit mobile version