ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಶೆಟ್ರಕಟ್ಟೆಯ ಎಫ್ಎಸ್ಎಲ್ ಇಂಡಿಯಾ ಸಂಸ್ಥೆ ಭಾರತಕ್ಕೆ ಅಧ್ಯಯನಕ್ಕಾಗಿ ಬಂದ ವಿದೇಶಿ ವಿದ್ಯಾರ್ಥಿಗಳನ್ನು ನೇಜಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂಸ್ಥೆಯಲ್ಲಿ ಭಾರತದ ಗ್ರಾಮೀಣ ಬದುಕು ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಬಂದ ಹಾಲೆಂಡ್, ಜರ್ಮನಿ, ಸ್ಪೈನ್ ಮೊದಲಾದ ದೇಶಗಳ ವಿದ್ಯಾರ್ಥಿಗಳು ತಲ್ಲೂರು ಬಳಿಯ ಶೆಟ್ರಕಟ್ಟೆಯ ದಾಸರಬೈಲು ಎಂಬಲ್ಲಿ ರೈತರೊಬ್ಬರಿಗೆ ಸೇರಿದ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ತಾವೇನು ರೈತರಿಗೆ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಈ ಗದ್ದೆಯಲ್ಲಿ ಈಗಾಗಲೇ ಬೀಜ ಬಿತ್ತುವ ಮೂಲಕ ನೇಜಿ ಕಾರ್ಯ ನಡೆಸಲಾಗಿದ್ದು, ಆದರೆ ಈ ನಾಟಿಯಲ್ಲಿ ಅಲ್ಲಲ್ಲಿ ಭತ್ತದವ ಸಸಿ ಹುಟ್ಟದೇ ಇರುವ ಖಾಲಿ ಜಾಗದಲ್ಲಿ ನೇಜಿ ಕಾರ್ಯವನ್ನು ಈ ವಿದ್ಯಾರ್ಥಿಗಳು ನಡೆಸಿದರು. ಎಫ್.ಎಸ್ಎಲ್ನ ಸುಮಾರು ಇಪ್ಪತ್ತೆರಡು ವಿದೇಶಿ ವಿದ್ಯಾರ್ಥಿಗಳು ಗದ್ದೆಗಳಲ್ಲಿ ಬೆಳಗ್ಗಿನಿಂದ ನೇಜಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.