Kundapra.com ಕುಂದಾಪ್ರ ಡಾಟ್ ಕಾಂ

‘ಕುಂದಾಪ್ರ ಡಾಟ್ ಕಾಂ’ ವೆಬ್ಸೈಟ್ ಲೋಕಾರ್ಪಣೆ

ಕುಂದಾಪುರ, 30/3: ಭಂಡಾರ್ಕಾರ್ಸ್ ಕಾಲೇಜು ಸುವರ್ಣ ಮಹೋತ್ಸವಕ್ಕೆ ಅಣಿಯಾಗುತ್ತಿರುವ ಸಂಧರ್ಭದಲ್ಲಿ ಕನ್ನಡ, ಸಾಹಿತ್ಯ, ಕುಂದಾಪುರದ ಭಾಷೆ, ಸಂಸ್ಕೃತಿಯನ್ನು ವೆಬ್ಸೈಟ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಯೊಬ್ಬನ ಈ ಕೆಲಸ ಪ್ರಶಂಸನಿಯವಾದದ್ದು ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಹೆಚ್ ಶಾಂತರಾಮ್ ನುಡಿದರು.

ಅವರು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾಲೇಜು ಹಾಗೂ ಸುತ್ತಲಿನ ಪರಿಸರಕ್ಕೆ ಪೂರಕವಾಗುವಂತಹ ಇಂತಹ ಉತ್ತಮ ಕೆಲಸಗಳು ಇಲ್ಲಿಗೆ ಕೊನೆಗೊಳ್ಳದೆ ನಿರಂತರವಾದ ನಡೆದು ಪ್ರಗತಿಯನ್ನು ಸಾಧಿಸಿದಾಗ ಅದು ಉಳಿದವರಿಗೂ ಸ್ಪೂರ್ತಿಯಾಗುತ್ತದೆ ಎಂದರು.

Kundapra dot com releasing2

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ದೋಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪೂರ್ವಾಧ್ಯಕ್ಷರಾದ ಎ.ಎಸ್.ಎನ್ ಹೆಬ್ಬಾರ್ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರವಿನಾಕುಮಾರಿ ನಿರೂಪಿಸಿದರು. ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಜ್ವಲಾ ಸ್ವಾಗತಿಸಿ, ಚೈತ್ರ ಚಂದನ್ ಧನ್ಯವಾದಗೈದರು

Exit mobile version