Kundapra.com ಕುಂದಾಪ್ರ ಡಾಟ್ ಕಾಂ

ಶಿಸ್ತುಬದ್ಧರಾಗಿಯೂ ಜನಪ್ರೀತಿ ಗಳಿಸಿದ ಸಾಧಕ: ವಿವೇಕ ರೈ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾನ್ಯವಾಗಿ ಬಹಳ ಶಿಸ್ತುಬದ್ಧರಾಗಿ ಜೀವನ ನಡೆಸುವವರು ಜನರಿಂದ ದೂರವಿರುತ್ತಾರೆ. ಪರಂಪರೆಯಲ್ಲಿ ಅಭಿಮಾನವುಳ್ಳವರು ಆಧುನಿಕತೆ ಯನ್ನು ನಿರಾಕರಿಸು ತ್ತಾರೆ ಹಾಗೂ ಸಮುದಾಯದಿಂದ ದೂರವಿರುತ್ತಾರೆ ಎನ್ನುವುದು ಪ್ರತೀತಿ. ಆದರೆ ಇದಕ್ಕೆ ಭಿನ್ನವಾಗಿರುವ ಡಾ| ಶಾಂತಾರಾಮ್‌ ಅವರು ಇವುಗಳನ್ನೆಲ್ಲ ಮೀರಿ ಜನರ ನಡುವೆಯೇ ಸಾಧನೆ ಮಾಡಿ ತೋರಿದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅವರು ಹೇಳಿದರು.

ಅವರು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಸ್ವಪ್ನಶಿಲ್ಪಿ ಡಾ| ಎಚ್‌. ಶಾಂತಾರಾಮ್‌ ಅವರ ತೊಂಬತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆಯುವ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನ ಎನ್ನುವುದು ಪುಸ್ತಕದ ಮೂಲಕ, ರಂಗದ ಮೂಲಕ ಹಾಗೂ ರಂಗದ ಹೊರಗಡೆ ಹೀಗೆ ಮೂರು ನೆಲೆಗಳಲ್ಲಿ ದೊರೆಯುವಂತಹದು. ಈ ಮೂರು ನೆಲೆಗಳಲ್ಲಿ ಜ್ಞಾನ ಸಂಪಾ ದನೆ ಮಾಡದೇ ಹೋದಲ್ಲಿ ನಮ್ಮ ಶಿಕ್ಷಣ ಎನ್ನುವುದು ಪದವಿಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತ ವಾಗುತ್ತದೆ ಎನ್ನುವುದನ್ನು ನಂಬಿಕೊಂಡು ಬಂದವರು ಡಾ| ಶಾಂತಾರಾಮ್‌ ಅವರು ಎಂದು ವಿವೇಕ ರೈ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಡಾ| ಶಾಂತಾರಾಮರ ನೇರನುಡಿ, ಸಹನೆ, ಉನ್ನತ ವ್ಯಕ್ತಿತ್ವ ಯಾವುದೇ ಸಮಸ್ಯೆಯನ್ನು ಸಲೀಸಾಗಿ ಪರಿಹರಿಸು ವಲ್ಲಿ ಸಹಕಾರಿಯಾಗಿದೆ. ಇಂತಹ ಗುಣ ವಿಶೇಷಗಳು ಇರುವು ದರಿಂದಲೇ ಅವರು ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ರೋಟರಿ ಡಿಜಿಪಿಎಚ್‌ಎಫ್‌ ಜಿ.ಎನ್‌. ಪ್ರಕಾಶ್‌, ಯಕ್ಷಗಾನ ಕಲಾವಿದ ಶ್ರೀಧರ ಹಂದೆ, ಗಮಕ ಕಲಾವಿದ ಡಾ| ಎ.ವಿ. ಪ್ರಸನ್ನ, ಲೇಖಕ ಶಿವಾನಂದ ಕಾರಂತ ಅವರು ಡಾ| ಶಾಂತಾರಾಮರ ಕುರಿತು ನೆನಪಿನ ಮಾತುಗಳನ್ನಾಡಿದರು. ಸಾಂಕ ಯತ್ನ ಹುಟ್ಟುಹಬ್ಬದ ಅಭಿನಂದನೆ ಸ್ವೀಕರಿ ಸಿದ ಡಾ| ಶಾಂತಾರಾಮ್‌ ಅವರು ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸುತ್ತ, ಯಾವುದೇ ಓರ್ವ ವ್ಯಕ್ತಿಯಿಂದ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಎಲ್ಲರ ಸಾಂಘಿಕ ಕೊಡುಗೆಯಿಂದ ಈ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ವಿದ್ಯಾರ್ಥಿವೇತನ ವಿತರಿಸಲಾ ಯಿತು. ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ| ರೇಖಾ ವಿ. ಬನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಪ.ಪೂ. ಕಾಲೇಜಿನ ಪ್ರಾಂಶು ಪಾಲ ಜಿ.ಎಂ. ಗೊಂಡ ವಂದಿಸಿದರು. ಮಧ್ಯಾಹ್ನ ಗಮಕ ಕಲಾವಿದ ಡಾ| ಎ.ವಿ. ಪ್ರಸನ್ನ ಮತ್ತು ನಿರ್ಮಲಾ ಪ್ರಸನ್ನ ಅವರಿಂದ ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಯಿತು.

Exit mobile version