Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ಮಂತ್ರದೊಂದಿಗೆ ಸಪ್ತಪದಿ ತುಳಿದ ಪತ್ರಕರ್ತ ಅರುಣಕುಮಾರ್ – ಬಿಂದು ಜೋಡಿ

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಹಿಂದೂ ಧರ್ಮದಲ್ಲಿ ಮದುವೆ ಎಂದ ಮೇಲೆ ಸಂಭ್ರಮ ಸಡಗರದೊಂದಿಗೆ ವಾದ್ಯ, ಪುರೋಹಿತರ ಸಂಸ್ಕೃತ ಮಂತ್ರ ಪಠಣ ಸರ್ವೇಸಾಮಾನ್ಯ. ಆ ಸಂಭ್ರಮವೆನ್ನುವುದು ವಧುವರರ ಪಾಲಿಗೆ ವಿಶಿಷ್ಟವಾದದ್ದು. ಹಾಗಾಗಿ ವಿಶಿಷ್ಟ ಕ್ಷಣ ವಿಶೇಷವಾಗಿರಬೇಕೆಂದು ಆಲೋಚಿಸಿದ ಜೋಡಿ ಸಂಸ್ಕೃತ ಮಂತ್ರಘೋಷದ ಬದಲಿಗೆ ಕನ್ನಡ ಮಂತ್ರಘೋಷ ಪಠಣಕ್ಕೆ ಅವಕಾಶ ಮಾಡಿಕೊಟ್ಟು ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ.

ಪತ್ರಕರ್ತ ಹಾಗೂ ಜೆಸಿಐ ನಿಕಟಪೂರ್ವಾಧ್ಯಕ್ಷ ಅರುಣಕುಮಾರ್ ಶಿರೂರು ಹಾಗೂ ಬಿಂದು ಅವರು ಭಟ್ಕಳದ ಶ್ರೀ ನಾಗಯಕ್ಷೆ ದೇವಸ್ಥಾನದ ಸಭಾಭವನದಲ್ಲಿ ಇತ್ತಿಚಿಗೆ ಅಚ್ಚಕನ್ನಡದ ಮಂತ್ರಘೋಷದೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ಕನ್ನಡ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ. ಅಂದಹಾಗೆ ಕಾಸರಗೋಡು ಮೂಲದ ಹಿರೆಮಗಳೂರು ಕಣ್ಣನ್ ಅವರ ಮಕ್ಕಳು ಹಾಗೂ ಶಿಷ್ಯರು ಕನ್ನಡ ಮಂತ್ರದ ಮೂಲಕ ಮದುವೆ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

Exit mobile version