ನಿದ್ದೆ ಹೋದಾಗ ಸುರಿದ
ಮೃತ್ಯು ಮಳೆಯ ರೌದ್ರನರ್ತನ
ನರಕ ಸದೃಶ್ಯ
ಜನರ ಬದುಕು
ಭೀಕರ ಪ್ರವಾಹ
ಒದ್ದೆಯಾದ ಮಂಜಿನ
ನಗರಿಗೆ ಅಗ್ನಿಪರೀಕ್ಷೆ
ಜೋಗುಳದ ದನಿಗೆ
ನಿದ್ದೆ ಹೋದ ಕೂಸು
ಮೋಡಗಳು ಬಾಯ್ಕಳೆದು
ಸುರಿದ ಅಟ್ಟಹಾಸದ ದನಿಗೆ
ಅಸುನೀಗಿದೆ
ಹಸಿರು ಹೊಲಿದಿಟ್ಟ ಬುವಿಯ
ಸುಲಿದಿದೆ ಭೋರ್ಗರೆದ ಮಳೆ.
ಮಳೆಯ ತಂಪಾಟ ನೋಡಿದ್ದೇನೆ,
ಈ ರೀತಿಯ ರಂಪಾಟ ನೋಡಿಲ್ಲ ದೇವರೆ…!
ಯಾರು ಕಾರಣವಿದಕೆ..?
ಪ್ರಶ್ನೆ ಕೇಳುತ ಅಕ್ಷರಗಳ ಗೀಚಿದೆ…!
-ಶ್ರೀರಾಜ್ ಎಸ್. ಆಚಾರ್ಯ, ಯುವ ಲೇಖಕ, ಕವಿ