ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಟಿ-ರಂಗಕರ್ಮಿ ಶ್ರೀಮತಿ ಪೂರ್ಣಿಮ ಸುರೇಶ್ ಅವರನ್ನು ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಅಮೋಘ (ರಿ) ಹಿರಿಯಡ್ಕ ಇವರಿಂದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಗೌರವಿಸಲಾಯಿತು. ಏಕವ್ಯಕ್ತಿ ನಾಟಕದಲ್ಲಿ ಸಿರಿ ಪಾತ್ರವನ್ನು ತುಂಬಾ ಸುಂದರವಾಗಿ ನಿರ್ವಹಿಸಿದರು
ಈ ಸಂದರ್ಭದಲ್ಲಿ ಕ.ಸ.ಪ ಜಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್, ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ, ಸಾಂಸ್ಕೃತಿಕ ಪಾರ್ವತಿ ಜಿ. ಐತಾಳ್, ಕಸಾಪದ ನಾರಾಯಣ ಮಡಿ ಹಾಗೂ ಅಮೋಘ ತಂಡದ ಸದಸ್ಯರು ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.